ETV Bharat / sports

ಟಿ20ಯಲ್ಲಿ 300 ರನ್! ಶರವೇಗದ 50, ಶತಕ; ಯುವಿ, ರೋಹಿತ್ ದಾಖಲೆ ಭಗ್ನ, ನೇಪಾಳ ರನ್‌ ಪ್ರವಾಹದಲ್ಲಿ ಕೊಚ್ಚಿಹೋದ ಮಂಗೋಲಿಯಾ! - Asian Games cricket competition

Asian Games: ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ನೇಪಾಳ ಪುರುಷರ ಕ್ರಿಕೆಟ್ ತಂಡ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ರನ್​ಗಳಿಸಿ ಇತಿಹಾಸ ನಿರ್ಮಿಸಿದೆ.

Nepal team
ನೇಪಾಳ ಕ್ರಿಕೆಟ್ ತಂಡ
author img

By ETV Bharat Karnataka Team

Published : Sep 27, 2023, 10:25 AM IST

ಹ್ಯಾಂಗ್‌ಝೌ (ಚೀನಾ): ಇಲ್ಲಿ ಬುಧವಾರ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ನೇಪಾಳದ ಬ್ಯಾಟರ್‌ಗಳು ಮೂರು ವಿಶ್ವ ದಾಖಲೆಗಳನ್ನು ಮುರಿದರು. ಟಿ20 ಇತಿಹಾಸದಲ್ಲೇ 300ಕ್ಕೂ ಅಧಿಕ ರನ್​ಗಳಿಸಿದ ಮೊದಲ ತಂಡವಾಗಿ ನೇಪಾಳ ಹೊರಹೊಮ್ಮಿದೆ. ಫೆಬ್ರವರಿ 23, 2019ರಂದು ಐರ್ಲೆಂಡ್ ವಿರುದ್ಧ 3 ವಿಕೆಟ್‌ಗೆ 278 ರನ್‌ಗಳಿಸಿದ್ದ ಅಫ್ಘಾನಿಸ್ತಾನ ಟಿ20ಯಲ್ಲಿ ಕಲೆ ಹಾಕಿದ ಈವರೆಗಿನ ಗರಿಷ್ಠ ಇನ್ನಿಂಗ್ಸ್ ದಾಖಲೆಯಾಗಿತ್ತು.

19 ವರ್ಷದ ಅತಿವೇಗದ ಎಡಗೈ ಬ್ಯಾಟರ್ ಕುಶಾಲ್ ಮಲ್ಲಾ 34 ಎಸೆತಗಳಲ್ಲಿ ಟಿ20 ಶತಕ ಬಾರಿಸಿದರು. ಈ ಮೂಲಕ ಅವರು ಡೇವಿಡ್ ಮಿಲ್ಲರ್ ಮತ್ತು ರೋಹಿತ್ ಶರ್ಮಾ ಅವರ ಜಂಟಿ ಹಿಂದಿನ ದಾಖಲೆಯನ್ನು (35 ಎಸೆತಗಳು) ಹಿಂದಿಕ್ಕಿದರು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಮಲ್ಲಾ 12 ಸಿಕ್ಸರ್‌ ಮತ್ತು 8 ಬೌಂಡರಿಗಳನ್ನು ಸಿಡಿಸಿ ಅಜೇಯ 137 ರನ್ ಗಳಿಸಿದರು. ಫೀಲ್ಡಿಂಗ್ ಆಯ್ಕೆ ಮಾಡಿದ ಮಂಗೋಲಿಯಾ ವಿರುದ್ಧ ನೇಪಾಳ 3 ವಿಕೆಟ್‌ ನಷ್ಟಕ್ಕೆ 314 ರನ್ ಗಳಿಸಿತು.

ಯುವರಾಜ್ ದಾಖಲೆ ಮುರಿದ ದೀಪೇಂದ್ರ ಸಿಂಗ್: ಇನ್ನು 5ನೇ ಶ್ರೇಯಾಂಕದ ಬ್ಯಾಟರ್ ದೀಪೇಂದ್ರ ಸಿಂಗ್ ಐರಿ ಅವರು ಮತ್ತೆ ದಾಖಲೆ ಬರೆದರು. 2 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಈ ಮೂಲಕ ಯುವರಾಜ್ ಸಿಂಗ್ ಅವರ 16 ವರ್ಷಗಳ ಹಳೆಯ ದಾಖಲೆ ಮುರಿದರು. ಸೆಪ್ಟೆಂಬರ್ 19, 2007 ರಂದು ಯುವರಾಜ್ ಇಂಗ್ಲೆಂಡ್ ವಿರುದ್ಧದ ವಿಶ್ವ ಟಿ20 ಪಂದ್ಯದಲ್ಲಿ 12 ಎಸೆತಗಳಿಗೆ 58 ರನ್ ಗಳಿಸಿ ದಾಖಲೆ ನಿರ್ಮಿಸಿದ್ದರು.

3 ವಿಶ್ವದಾಖಲೆ ಮುರಿದ ನೇಪಾಳ ತಂಡ:

  • ಟಿ20ಯಲ್ಲಿ 300ಕ್ಕೂ ಅಧಿಕ ರನ್​ ಗಳಿಸಿದ ಮೊದಲ ತಂಡ.
  • 34 ಎಸೆತಗಳಲ್ಲಿ ಶತಕ ಬಾರಿಸಿದ ಎಡಗೈ ಬ್ಯಾಟರ್ ಕುಶಾಲ್ ಮಲ್ಲಾ.
  • 9 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಯುವರಾಜ್ ಸಿಂಗ್ ಅವರ 16 ವರ್ಷಗಳ ಹಳೆಯ ದಾಖಲೆ ಮುರಿದ ದೀಪೇಂದ್ರ ಸಿಂಗ್ ಐರಿ.

ಟಿ20ಐನಲ್ಲಿ ಈವರೆಗಿನ ಗರಿಷ್ಠ ಸ್ಕೋರ್‌ಗಳು ಇಲ್ಲಿವೆ

  • ನೇಪಾಳ vs ಮಂಗೋಲಿಯಾ - 314/4 (2023)
  • ಅಫ್ಘಾನಿಸ್ತಾನ vs ಐರ್ಲೆಂಡ್ - 278/3 (2019)
  • ಜೆಕ್ ರಿಪಬ್ಲಿಕ್ vs ಟರ್ಕಿ- 278/4 (2019)
  • ಆಸ್ಟ್ರೇಲಿಯಾ vs ಶ್ರೀಲಂಕಾ - 263/3 (2016)
  • ಶ್ರೀಲಂಕಾ vs ಕೀನ್ಯಾ 260/6 (2007)

ರೈಫಲ್​​ನಲ್ಲಿ ಭಾರತದ ವನಿತೆಯರಿಗೆ ಚಿನ್ನ: ಮಹಿಳೆಯರ 25 ಮೀ ರೈಫಲ್ ಸ್ಪರ್ಧೆಯಲ್ಲಿ ಭಾರತ ತಂಡದ ಸದಸ್ಯರಾದ ಮನು ಭಾಕರ್, ಇಶಾ ಸಿಂಗ್ ಮತ್ತು ರಿದಮ್ ಸಾಂಗ್ವಾನ್ ಅವರು ಚಿನ್ನದ ಪದಕ ಗೆದ್ದರು. ಮನು, ಈಶಾ ಮತ್ತು ರಿದಮ್ ಒಟ್ಟು 1,759 ಅಂಕಗಳನ್ನು ಗಳಿಸಿದರು. ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಈವರೆಗೆ ನಾಲ್ಕು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ. ಚೀನಾದ ಆಟಗಾರರು 1,756 ಅಂಕಗಳೊಂದಿಗೆ ಬೆಳ್ಳಿ ಪದಕ ಪಡೆದರು. ದಕ್ಷಿಣ ಕೊರಿಯಾದ ಶೂಟರ್‌ಗಳು ಒಟ್ಟು 1,742 ಅಂಕಗಳೊಂದಿಗೆ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಇದನ್ನೂ ಓದಿ: ಏಷ್ಯನ್ ಗೇಮ್ಸ್‌: 25 ಮೀಟರ್‌ ಶೂಟಿಂಗ್​ನಲ್ಲಿ ಭಾರತದ ವನಿತೆಯರಿಗೆ ಚಿನ್ನ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.