ETV Bharat / sports

15 ರನ್​ಗಳಿಗೆ ಆಲೌಟ್! ಇಂಡೋನೇಷ್ಯಾದೆದುರು ಮಂಗೋಲಿಯಾ ಮಹಿಳೆಯರಿಗೆ ಹೀನಾಯ ಸೋಲು

Asian Games 2023 Cricket: ಏಷ್ಯನ್ ಗೇಮ್ಸ್ 2023ರ ಮಹಿಳೆಯರ ಕ್ರಿಕೆಟ್‌ನಲ್ಲಿ ಮಂಗೋಲಿಯನ್ ಕೇವಲ 15 ರನ್‌ಗಳಿಗೆ ಆಲೌಟ್ ಆಯಿತು. ಇದು ಅಂತರರಾಷ್ಟ್ರೀಯ ಟಿ20 ಪಂದ್ಯದಲ್ಲಿ ದಾಖಲಾದ ಎರಡನೇ ಅತಿ ಕಡಿಮೆ ಸ್ಕೋರ್ ಆಗಿದೆ.

Indonesia Women vs Mongolia Women  Asian Games 2023 Cricket  Indonesia Women won by 172 runs Mongolia Women  15 ರನ್​ಗಳಿಗೆ ಆಲೌಟ್  ಕೆಟ್ಟ ದಾಖಲೆ ಬರೆದ ಮಂಗೋಲಿಯಾ ಮಹಿಳಾ ಕ್ರಿಕೆಟ್ ತಂಡ  ಮಹಿಳಾ ಅಂತರಾಷ್ಟ್ರೀಯ T20 ಸ್ವರೂಪ  ಏಷ್ಯನ್ ಗೇಮ್ಸ್ 2023 ರ ಮಹಿಳಾ ಕ್ರಿಕೆಟ್‌  ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ಕೆಟ್ಟ ದಾಖಲೆ  ಏಷ್ಯನ್ ಗೇಮ್ಸ್ 2023  ಉತ್ತಮ ಆರಂಭ ಪಡೆದ ತಂಡ  ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡನೇ ಅತಿ ಕಡಿಮೆ ಸ್ಕೋರ್
15 ರನ್​ಗಳಿಗೆ ಆಲೌಟ್​.. ಕೆಟ್ಟ ದಾಖಲೆ ಬರೆದ ಮಂಗೋಲಿಯಾ ಮಹಿಳಾ ಕ್ರಿಕೆಟ್ ತಂಡ
author img

By ETV Bharat Karnataka Team

Published : Sep 20, 2023, 8:25 AM IST

Updated : Sep 20, 2023, 10:15 AM IST

ಹ್ಯಾಂಗ್‌ಝೌ (ಚೀನಾ): ಮಂಗೋಲಿಯಾ ಮಹಿಳಾ ಕ್ರಿಕೆಟ್ ತಂಡವು ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯದಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆಯಿತು. ಏಷ್ಯನ್ ಗೇಮ್ಸ್ 2023ರ ಅಂಗವಾಗಿ ಮಂಗಳವಾರ (ಸೆಪ್ಟೆಂಬರ್ 19) ಇಂಡೋನೇಷ್ಯಾ ವಿರುದ್ಧ ನಡೆದ ಪಂದ್ಯದಲ್ಲಿ ಮಂಗೋಲಿಯಾ ಕೇವಲ 15 ರನ್‌ಗಳಿಗೆ ತನ್ನೆಲ್ಲ ವಿಕೆಟ್​ಗಳನ್ನು ಕಳೆದುಕೊಂಡಿತು. ಚೀನಾದ ಹ್ಯಾಂಗ್‌ಝೌನಲ್ಲಿ ಏಷ್ಯನ್ ಗೇಮ್ಸ್‌ ಕ್ರಿಕೆಟ್ ಪಂದ್ಯ ನಡೆಯಿತು. 20 ಓವರ್​ಗಳ ಪಂದ್ಯದಲ್ಲಿ ಮಂಗೋಲಿಯಾ ಆಟಗಾರ್ತಿಯರು 20 ರನ್ ಕೂಡ ಗಳಿಸಲಿಲ್ಲ. ಇದರಿಂದಾಗಿ ಇಂಡೋನೇಷ್ಯಾ 172 ರನ್‌ಗಳಿಂದ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿತು.

ಉತ್ತಮ ಆರಂಭ ಪಡೆದ ತಂಡ: ಮೊದಲು ಬ್ಯಾಟ್ ಮಾಡಿದ ಇಂಡೋನೇಷ್ಯಾ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಮಂಗೋಲಿಯಾಕ್ಕೆ 188 ರನ್​ಗಳ ಬೃಹತ್ ಗುರಿ ನೀಡಿತು. ಆರಂಭಿಕ ಆಟಗಾರ್ತಿ ರತ್ನಾ ದೇವಿ 48 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ 62 ರನ್‌​ ಗಳಿಸಿದರು. ಮತ್ತೋರ್ವ ಆರಂಭಿಕ ಆಟಗಾರ್ತಿ ನಂದಾ ಸಖರಿನಿ (35 ರನ್​) ಮತ್ತು ಮರಿಯಾ ವೊಂಬಾಕಿ (22 ರನ್) ಜೊತೆಗೂಡಿ ತಂಡದ ಮೊತ್ತ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮಂಗೋಲಿಯಾ ಬೌಲರ್‌ಗಳ ಪೈಕಿ ಮೆಂಡ್‌ಬಾಯರ್, ನಮುಂಜುಲ್, ಜರ್ಗಲ್ಸಾಯಿ ಖಾನ್ ಮತ್ತು ಗನ್ಸುಖ್ ತಲಾ ಒಂದೊಂದು ವಿಕೆಟ್ ಪಡೆದರು.

15 ರನ್​ಗಳಿಗೆ ಆಲೌಟ್​: 188 ರನ್​ಗಳ ಬೃಹತ್ ಗುರಿಯೊಂದಿಗೆ ಕಣಕ್ಕಿಳಿದ ಮಂಗೋಲಿಯಾ ರನ್ ಗಳಿಕೆಗಿಂತ ವೇಗವಾಗಿ ವಿಕೆಟ್ ಕಳೆದುಕೊಂಡಿತು. ಸ್ಕೋರ್ ಬೋರ್ಡ್ 9 ರನ್​ ದಾಟುವಷ್ಟರಲ್ಲಿ ಮೊದಲ ಏಳು ಬ್ಯಾಟರ್‌ಗಳು ಡಗೌಟ್ ತಲುಪಿದರು. ಅಂತಿಮವಾಗಿ ಇಂಡೋನೇಷ್ಯಾ ಕೇವಲ 15 ರನ್​ಗಳಿಗೆ ಮಂಗೋಲಿಯಾವನ್ನು ಕಟ್ಟಿ ಹಾಕಿತು. ಮಂಗೋಲಿಯಾ 10 ಓವರ್‌ಗಳಲ್ಲಿ 15 ರನ್‌ಗಳಿಗೆ ಕುಸಿದಿತ್ತು. ತನ್ನ ಇನ್ನಿಂಗ್ಸ್‌ನಲ್ಲಿ ಏಳು ಬ್ಯಾಟರ್‌ಗಳು ಡಕೌಟ್​ ಆಗಿದ್ದರು. ಉಳಿದವರು ಕನಿಷ್ಠ ಎರಡಂಕಿ ರನ್ ಗಳಿಸಲೂ ಸಾಧ್ಯವಾಗಲಿಲ್ಲ.

ಏಷ್ಯನ್ ಗೇಮ್ಸ್‌ ಕ್ರಿಕೆಟ್: ಈ ವರ್ಷದ ಏಷ್ಯನ್ ಗೇಮ್ಸ್‌ನಲ್ಲಿ ಮೊದಲ ಬಾರಿಗೆ ಕ್ರಿಕೆಟ್ ಆಟವನ್ನು ಪರಿಚಯಿಸಲಾಗಿದೆ. ಪುರುಷರು ಹಾಗೂ ಮಹಿಳೆಯರ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ಭಾರತದ ಮಹಿಳಾ ತಂಡವೂ ಭಾಗವಹಿಸಿದೆ.

ಭಾರತದ ಪಂದ್ಯ ಯಾವಾಗ?: ಏಷ್ಯನ್​ ಗೇಮ್ಸ್​ನಲ್ಲಿ ಎಲ್ಲ ಕ್ರಿಕೆಟ್​ ಪಂದ್ಯಗಳು ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್​ನಲ್ಲಿ ನಡೆಯಲಿವೆ. ಇಂದು ಹಾಂ​ಕಾಂಗ್​ ಮತ್ತು ಮಲೇಷ್ಯಾ ಮಹಿಳಾ ತಂಡಗಳ ನಡುವೆ ಕ್ವಾಲಿಫೈಯರ್ ಕ್ವಾರ್ಟರ್ ಫೈನಲ್ ಪಂದ್ಯ ನಡೆಯಲಿದೆ. ನಾಳೆ ಭಾರತದ ಪಂದ್ಯವಿದೆ.

ಇದನ್ನೂ ಓದಿ: ಮುಂದಿನ ಏಷ್ಯಾಕಪ್, ವಿಶ್ವಕಪ್​, ಚಾಂಪಿಯನ್ಸ್​ ಟ್ರೋಫಿ​ ಎಲ್ಲಿ, ಹೇಗೆ, ಯಾವಾಗ ನಡೆಯಲಿದೆ?.. ಇಲ್ಲಿದೆ ಮಾಹಿತಿ

Last Updated : Sep 20, 2023, 10:15 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.