ಕೊಲಂಬೊ (ಶ್ರೀಲಂಕಾ): ಏಷ್ಯಾಕಪ್ ಫೈನಲ್‌ನಲ್ಲಿ ಸ್ಥಾನ ಪಡೆಯಲು ಗುರುವಾರ ಇಲ್ಲಿನ ಆರ್ ಪ್ರೇಮದಾಸ ಕ್ರಿಡಾಂಗಣದಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನದ ನಡುವೆ ಹಣಾಹಣಿ ನಡೆಯಲಿದೆ. ಎರಡೂ ತಂಡಕ್ಕೆ ಫೈನಲ್‌ನಲ್ಲಿ ಸ್ಥಾನ ಪಡೆಯಲು ಈ ಪಂದ್ಯದ ಗೆಲುವು ಅನಿವಾರ್ಯ ಆಗಿರುವುದರಿಂದ ಇದನ್ನು ಸೆಮಿಫೈನಲ್ ರೀತಿ ನೋಡಲಾಗುತ್ತಿದೆ. ಪಾಕಿಸ್ತಾನ ಗೆದ್ದು ಫೈನಲ್ಗೆ ಬಂದಲ್ಲಿ ಮತ್ತೆ ಭಾರತದೊಂದಿಗೆ ಸೆಣಸಾಟ ನಡೆಸಬೇಕಿದೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳ ಕಣ್ಣು ಈ ಪಂದ್ಯದ ಮೇಲೆಯೇ ನೆಟ್ಟಿದೆ.
-
India's exciting 41-run win last night propelled them into the Asia Cup 2023 finals. Tomorrow, Pakistan and Sri Lanka will vie for the second spot, determining India's opponent in the championship match! 💪#AsiaCup2023 pic.twitter.com/wuWFNoeRCJ
— AsianCricketCouncil (@ACCMedia1) September 13, 2023 " class="align-text-top noRightClick twitterSection" data="
">India's exciting 41-run win last night propelled them into the Asia Cup 2023 finals. Tomorrow, Pakistan and Sri Lanka will vie for the second spot, determining India's opponent in the championship match! 💪#AsiaCup2023 pic.twitter.com/wuWFNoeRCJ
— AsianCricketCouncil (@ACCMedia1) September 13, 2023India's exciting 41-run win last night propelled them into the Asia Cup 2023 finals. Tomorrow, Pakistan and Sri Lanka will vie for the second spot, determining India's opponent in the championship match! 💪#AsiaCup2023 pic.twitter.com/wuWFNoeRCJ
— AsianCricketCouncil (@ACCMedia1) September 13, 2023
ಪಾಕಿಸ್ತಾನ ತಂಡದಲ್ಲಿ ಗಾಯದಿಂದ ಇಬ್ಬರು ಬೌಲರ್ಗಳು ಅಲಭ್ಯರಾಗಿದ್ದು, ಆ ಜಾಗದಲ್ಲಿ ಹೊಸಬರನ್ನು ಆಡಿಸುತ್ತಿದ್ದಾರೆ. ಅನುಭವಿ ಸ್ಟಾರ್ ವೇಗಿಳಗಳ ಕೊರತೆಯನ್ನು ಎದುರಿಸುತ್ತಿರುವ ಪಾಕಿಸ್ತಾನವನ್ನು ಸುಲಭವಾಗಿ ಕಟ್ಟಿಹಾಕುವ ಚಿಂತನೆಯಲ್ಲಿ ಶ್ರೀಲಂಕಾ ಇದೆ. ಆದರೆ, ಪಾಕಿಸ್ತಾನ ಶಾಬಾದ್ ಖಾನ್ ಸ್ಪಿನ್ನಲ್ಲಿ ಮತ್ತು ಶಾಹೀನ್ ಶಾ ಅಫ್ರಿದಿ ವೇಗದ ಬೌಲಿಂಗ್ ವಿಭಾಗದಲ್ಲಿ ತಮ್ಮ ಅನುಭವವನ್ನು ದಾರೆ ಎರೆಯಲಿದ್ದಾರೆ.
ಪಾಕಿಸ್ತಾನ ತಂಡ ಬಾಂಗ್ಲಾವನ್ನು ತವರಿನ ಲಾಹೋರ್ ಮೈದಾನದಲ್ಲಿ ರೌಫ್ ಮತ್ತು ನಸೀಮ್ ಶಾ ಅವರ ಬೌಲಿಂಗ್ನ ಸಹಾಯದಿಂದ 193ಕ್ಕೆ ಆಲ್ಔಟ್ ಮಾಡಿ, ಸುಲಭವಾಗಿ ಜಯಿಸಿತ್ತು. ಆದರೆ, ಭಾರತದ ವಿರುದ್ಧ ನಡೆದ ಪಂದ್ಯದಲ್ಲಿ 357 ರನ್ ಬೃಹತ್ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ 128ಕ್ಕೆ ಆಲ್ಔಟ್ ಆಗಿ 228 ರನ್ ಬೃಹತ್ ಅಂತರದ ಸೋಲು ಕಂಡಿತ್ತು.
-
Our playing XI for the #PAKvSL match 🇵🇰#AsiaCup2023 pic.twitter.com/lhT5Vl8RtX
— Pakistan Cricket (@TheRealPCB) September 13, 2023 " class="align-text-top noRightClick twitterSection" data="
">Our playing XI for the #PAKvSL match 🇵🇰#AsiaCup2023 pic.twitter.com/lhT5Vl8RtX
— Pakistan Cricket (@TheRealPCB) September 13, 2023Our playing XI for the #PAKvSL match 🇵🇰#AsiaCup2023 pic.twitter.com/lhT5Vl8RtX
— Pakistan Cricket (@TheRealPCB) September 13, 2023
ಇತ್ತ ಶ್ರೀಲಂಕಾ ಸಹ ಬಾಂಗ್ಲಾದೇಶವನ್ನು 21 ರನ್ನಿಂದ ಗೆದ್ದುಕೊಂಡಿತ್ತು. ನಿನ್ನೆ (ಮಂಗಳವಾರ)ಲಂಕಾ ತನ್ನ ಪ್ರಬಲ ಸ್ಪಿನ್ ದಾಳಿಯಿಂದ ಭಾರತವನ್ನು 213ಕ್ಕೆ ಆಲ್ಔಟ್ ಮಾಡಿ ಸಾಧಾರಣ ಗುರಿಯನ್ನು ಪಡೆದುಕೊಂಡಿತ್ತು. ಈ ಗುರಿಯನ್ನು ಬೆನ್ನು ಹತ್ತಿದ ಶ್ರೀಲಂಕಾ 172ಕ್ಕೆ ಸರ್ವಪತನ ಕಂಡು 41 ರನ್ನಿಂದ ಸೋಲು ಕಂಡಿತ್ತು. ಹೀಗಾಗಿ ಪಾಕಿಸ್ತಾನ ಮತ್ತು ಶ್ರೀಲಂಕಾ ಅಂಕಪಟ್ಟಿಯಲ್ಲಿ ಎರಡು ಅಂಕ ಗಳಿಸಿಕೊಂಡಿದೆ. ಹೀಗಾಗಿ ಗೆದ್ದವರಿಗೆ ಫೈನಲ್ ಟಿಕೆಟ್ ಸಿಗಲಿದೆ.
ತಂಡ ಪ್ರಕಟಿಸಿದ ಪಾಕ್: ಬಾಬರ್ ಅಜಮ್ ನಾಳೆ ಮೈದಾನಕ್ಕಿಳಿಯು ತಂಡವನ್ನು ಈಗಾಗಲೇ ಪ್ರಕಟಿಸಿದ್ದಾರೆ. ಭಾರತದ ವಿರುದ್ಧ ಆಡಿದ್ದ ಐದು ಆಟಗಾರರನ್ನು ಕೈ ಬಿಡಲಾಗಿದೆ. ನಸೀಮ್ ಮತ್ತು ರೌಫ್ ಗಾಯದಿಂದ ತಂಡದಿಂದ ಹೊರಗುಳಿದಿದ್ದಾರೆ. ಆರಂಭಿಕ ಫಾಕರ್ ಜಮಾನ್ ಬದಲು ಮೊಹಮ್ಮದ್ ಹ್ಯಾರಿಸ್, ಅಘಾ ಅಸ್ಲಾಮ್ ಬದಲು ಸೌದ್ ಶಕೀಲ್, ಫಾಹಿಮ್ ಅಶ್ರಫ್ ಬದಲು ಮೊಹಮ್ಮದ್ ನವಾಜ್ ಮತ್ತು ಇಬ್ಬರು ಗಾಯಗೊಂಡ ವೇಗಿಗಳ ಬದಲಾಗಿ ಮೊಹಮ್ಮದ್ ವಾಸಿಮ್ ಜೂನಿಯರ್, ಮೊಹಮ್ಮದ್ ನವಾಜ್ ಮಾನ್ ಖಾನ್ ಅವರನ್ನು ಆಡಿಸಲಾಗುತ್ತಿದೆ.
ಪಾಕಿಸ್ತಾನ ತಂಡ: ಮೊಹಮ್ಮದ್ ಹ್ಯಾರಿಸ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಮ್ ಜೂನಿಯರ್, ಜಮಾನ್ ಖಾನ್
ಶ್ರೀಲಂಕಾ ಸಂಭವನೀಯ ತಂಡ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ದಸುನ್ ಶನಕ (ನಾಯಕ), ದುನಿತ್ ವೆಲ್ಲಲಾಗೆ, ಮಹೇಶ್ ತೀಕ್ಷಣ, ಕಸುನ್ ರಜಿತ, ಮತೀಶ ಪತಿರಣ.
ಪಂದ್ಯ ನಾಳೆ ಭಾರತೀಯ ಕಾಲಮಾನ ಮಧ್ಯಾಹ್ನ 3ಕ್ಕೆ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ಮತ್ತು ಹಾಟ್ಸ್ಟಾರ್ನಲ್ಲಿ ನೇರಪ್ರಸಾರ ಲಭ್ಯವಿರಲಿದೆ.
ಇದನ್ನೂ ಓದಿ: ಪಾಕ್ನ ಇಬ್ಬರು ಸ್ಟಾರ್ ಬೌಲರ್ಗಳಿಗೆ ಗಾಯ.. ಏಷ್ಯಾಕಪ್ನಿಂದಲೇ ಹೊರಬಿದ್ದ ನಸೀಮ್ ಶಾ