ಕೊಲಂಬೊ (ಶ್ರೀಲಂಕಾ): ನಿನ್ನೆ ಮಳೆಯಿಂದಾಗಿ ಮೀಸಲು ದಿನವಾದ ಸೋಮವಾರಕ್ಕೆ ಮುಂದೂಡಲಾಗಿದ್ದ ಪಂದ್ಯ ಮಳೆಯಿಂದಾಗಿ ತಡವಾಗಿ ಆರಂಭವಾಗಿದೆ. ಸಂಪೂರ್ಣ 50 ಓವರ್ಗಳನ್ನು ಆಡಿಸುವ ನಿರ್ಧಾರದೊಂದಿಗೆ ಅಂಪೈರ್ಗಳು ಮೈದಾನಕ್ಕಿಳಿದಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಉತ್ತಮ ಲಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದು, ಇಬ್ಬರು ಶತಕ ಪೂರೈಸಿಕೊಂಡಿದ್ದಾರೆ. ಇದರಿಂದ ಭಾರತ 320ರ ಗಡಿ ದಾಟಿದ್ದು, 350 ಪ್ಲೆಸ್ ಗುರಿ ನೀಡುವತ್ತ ಮುಂದುವರೆದಿದೆ. ಪಾಕಿಸ್ತಾನದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಇಬ್ಬರು ಬ್ಯಾಟರ್ಗಳಿ ಎದುರಿಸುತ್ತಿದ್ದು, 200ಕ್ಕೂ ಹೆಚ್ಚಿನ ಜೊತೆಯಾಟ ಮುಂದುವರೆದಿದೆ. 48ನೇ ಓವರ್ಗೆ ಭಾರತ ಎರಡು ವಿಕೆಟ್ ನಷ್ಟಕ್ಕೆ 330ರನ್ ಕಲೆಹಾಕಿದೆ.
-
13000 ODI runs and counting for 👑 Kohli
— BCCI (@BCCI) September 11, 2023 " class="align-text-top noRightClick twitterSection" data="
He also brings up his 47th ODI CENTURY 👏👏#TeamIndia pic.twitter.com/ePKxTWUTzn
">13000 ODI runs and counting for 👑 Kohli
— BCCI (@BCCI) September 11, 2023
He also brings up his 47th ODI CENTURY 👏👏#TeamIndia pic.twitter.com/ePKxTWUTzn13000 ODI runs and counting for 👑 Kohli
— BCCI (@BCCI) September 11, 2023
He also brings up his 47th ODI CENTURY 👏👏#TeamIndia pic.twitter.com/ePKxTWUTzn
ತಡವಾಗಿ ಆರಂಭವಾದ ಪಂದ್ಯ: ಇಂದು ಮುಂಜಾನೆಯೇ ಕೊಲಂಬೊದಲ್ಲಿ ಮಳೆ ಇತ್ತು. ಹೀಗಾಗಿ ಆರ್. ಪ್ರೇಮದಾಸ ಕ್ರೀಡಾಂಗಣದ ಮೈದಾನವನ್ನು ಸಂಪೂರ್ಣ ಕವರ್ ಮಾಡಲಾಗಿತ್ತು. ಮಧ್ಯಾಹ್ನದ ವೇಳೆಗೆ ಮಳೆ ಬಿಡುವು ಕೊಟ್ಟಿದ್ದರಿಂದ ಪಂದ್ಯಾರಂಭದ ವಿಶ್ವಾಸ ಇತ್ತು. ಆದರೆ, 2 ಗಂಟೆ ವೇಳೆ ಮತ್ತೆ ಮಳೆ ಆರಂಭವಾಗಿ 2:35 ರವರೆಗೆ ಸುರಿದಿತ್ತು. ನಂತರ ಮತ್ತೆ 2:53 ಮಳೆ ಆರಂಭವಾದ ಹಿನ್ನೆಲೆ 3 ಗಂಟೆಗೆ ಆರಂಭ ಆಗಬೇಕಿದ್ದ ಪಂದ್ಯ ವಿಳಂಬ ಆಯಿತು. ನಂತರ ಸಂಪೂರ್ಣ ಮಳೆ ಬಿಡುವು ಕೊಟ್ಟ ಹಿನ್ನೆಲೆ 4:40ಕ್ಕೆ ಪಂದ್ಯ ಆರಂಭವಾಯಿತು.
ನಿನ್ನೆ ಮಳೆ ಆರಂಭ ಆಗುವ ವೇಳೆಗೆ ಭಾರತ 174ಕ್ಕೆ 2 ವಿಕೆಟ್ ಕಳೆದುಕೊಂಡಿತ್ತು. ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಇದ್ದರು. ಇಂದು 24.2ನೇ ಬಾಲ್ನ್ನು ಶಾಬಾದ್ ಖಾನ್ ಮಾಡುವುದರಿಂದ ಮತ್ತೆ ಇನ್ನಿಂಗ್ಸ್ ಆರಂಭ ಆಗಿದೆ. ನಿನ್ನೆ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ 121 ರನ್ ಭರ್ಜರಿ ಜೊತೆಯಾಟ ಮಾಡಿ ವಿಕೆಟ್ ಕೊಟ್ಟಿದ್ದರು.
ಹ್ಯಾರಿಸ್ ರೌಫ್ ಅಲಭ್ಯ: ಪಕ್ಕೆಲುಬಿನ ನೋವಿನಿಂದ ಬಳಲುತ್ತಿರುವ ಹ್ಯಾರಿಸ್ ರೌಫ್ ಇಂದು ಪಂದ್ಯ ಆಡುತ್ತಿಲ್ಲ. ಮುಂದಿನ ಪ್ರಮುಖ ಪಂದ್ಯಗಳನ್ನು ದೃಷ್ಟಿಕೋನದಲ್ಲಿಟ್ಟುಕೊಂಡು ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಪಾಕಿಸ್ತಾನದ ಪಾಳಯದಿಂದ ಮಾಹಿತಿ ಬಂದಿದೆ. ಇಂದಿನ ವೇಗದ ವಿಭಾಗವನ್ನು ನಸೀಮ್ ಶಾ ಮತ್ತು ಶಾಹೀನ್ ಅಫ್ರಿದಿ ಮಾತ್ರ ನಿಭಾಯಿಸಲಿದ್ದಾರೆ. ರೌಫ್ ಬದಲಾಗಿ ಇಫ್ತಿಕರ್ ಅಹಮ್ಮದ್ ಬೌಲಿಂಗ್ ಮುಂದುವರೆಸಿದ್ದಾರೆ. ಆದರೆ, ವಿರಾಟ್ ಮತ್ತು ರಾಹುಲ್ ಅಬ್ಬರದ ಮುಂದೆ ಪಾಕ್ನ ಬೌಲಿಂಗ್ ಪ್ರಯೋಗ ಕೈ ಹಿಡಿಯುತ್ತಿಲ್ಲ.
ಇದನ್ನೂ ಓದಿ:'ಮಳೆ ನಮ್ಮನ್ನು ಉಳಿಸಿದೆ': ಏಷ್ಯಾಕಪ್‌ನ ಭಾರತ ಮತ್ತು ಪಾಕ್ ಹಣಾಹಣಿಯ ಬಗ್ಗೆ ಶೋಯೆಬ್ ಅಖ್ತರ್