ಲಾಹೋರ್ (ಪಾಕಿಸ್ತಾನ): ಏಷ್ಯಾಕಪ್ 2023ರ ಸೂಪರ್-4 ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಇಲ್ಲಿನ ಗಡಾಫಿ ಮೈದಾನದಲ್ಲಿ ಮುಖಾಮುಖಿ ಆಗುತ್ತಿದೆ. ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಬಾಂಗ್ಲಾದೇಶ ಒಂದು ಬದಲಾವಣೆ ಮಾಡಿಕೊಂಡಿದ್ದು, ಶಾಂಟೊ ಬದಲಾಗಿ ಲಿಟ್ಟನ್ ದಾಸ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ನಿನ್ನೆ ನಡೆದ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಶ್ರೀಲಂಕಾ ಮಣಿಸಿದ್ದರಿಂದ ಬಾಂಗ್ಲಾದೇಶ ಸೂಪರ್-4ನಲ್ಲಿ ಸ್ಥಾನ ಪಡೆದುಕೊಂಡಿತು. ಗುಂಪು ಹಂತದಲ್ಲಿ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನವನ್ನು ಮಣಿಸಿದ ಶ್ರೀಲಂಕಾ ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ.
-
The news from the center is that Bangladesh have won the toss, and chose to bat first on a belter of a Lahore track. We're expecting to see loads of runs and plenty of action from both sides 🔥🔥#AsiaCup2023 #PAKvsBAN pic.twitter.com/FcufwPnw4x
— AsianCricketCouncil (@ACCMedia1) September 6, 2023 " class="align-text-top noRightClick twitterSection" data="
">The news from the center is that Bangladesh have won the toss, and chose to bat first on a belter of a Lahore track. We're expecting to see loads of runs and plenty of action from both sides 🔥🔥#AsiaCup2023 #PAKvsBAN pic.twitter.com/FcufwPnw4x
— AsianCricketCouncil (@ACCMedia1) September 6, 2023The news from the center is that Bangladesh have won the toss, and chose to bat first on a belter of a Lahore track. We're expecting to see loads of runs and plenty of action from both sides 🔥🔥#AsiaCup2023 #PAKvsBAN pic.twitter.com/FcufwPnw4x
— AsianCricketCouncil (@ACCMedia1) September 6, 2023
ಪಾಕಿಸ್ತಾನ ತಂಡ ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದೆ. ಬಲಿಷ್ಠ ಬೌಲಿಂಗ್ ಮತ್ತು ಬ್ಯಾಟಿಂಗ್ ಪಡೆಯನ್ನು ಪಾಕ್ ತಂಡ ಹೊಂದಿದೆ. ನೇಪಾಳ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ನಾಯಕ ಬಾಬರ್ ಅಜಮ್ ಶತಕ ಗಳಿಸಿ ತಮ್ಮ ಗೋಲ್ಡನ್ ಫಾರ್ಮ್ ಅನ್ನು ಏಷ್ಯಾಕಪ್ನಲ್ಲೂ ಮುಂದುವರೆಸಿದ್ದಾರೆ. ಅವರಲ್ಲದೇ ಇಫ್ತಿಕರ್ ಅಹ್ಮದ್ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ರನ್ ಕಲೆಹಾಕಿದ್ದಾರೆ. ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಬಾಬರ್ ಅಜಮ್ ನಂ.1 ಆದರೆ, ಇಮಾಮ್ ಉಲ್ಹಕ್ 4 ಮತ್ತು ಫಾಕರ್ ಜಾಮಾನ್ 7ನೇ ಸ್ಥಾನದಲ್ಲಿದ್ದಾರೆ
ಶಾಹೀನ್ ಅಫ್ರಿದಿ, ನಸೀಮ್ ಶಾ ಮತ್ತು ಹ್ಯಾರಿಸ್ ರೌಫ್ ಪಾಕ್ನ ಸ್ಟಾರ್ ವೇಗಿಗಳು. ಮೊದಲ ಓವರ್ನಿಂದಲೇ ಎದುರಾಳಿ ತಂಡದ ಮೇಲೆ ಒತ್ತಡ ತರಬಲ್ಲರು. ಗಂಟೆಗೆ 145 ಕಿಮೀ. ಪ್ಲಸ್ ವೇಗದಲ್ಲಿ ಸತತ ದಾಳಿ ಮಾಡುವುದರಿಂದ ಬ್ಯಾಟರ್ಗಳಿಗೆ ಇವರನ್ನು ಎದುರಿಸುವುದು ಕಠಿಣವಾಗುತ್ತದೆ. ಅಲ್ಲದೇ ಈ ವರ್ಷ ಪಾಕಿಸ್ತಾನ ತಂಡ ತವರಿನಲ್ಲಿ ಹೆಚ್ಚು ಸರಣಿಗಳನ್ನು ಆಡಿದ್ದು, ಪಿಚ್ನ ಬಗ್ಗೆ ಆಟಗಾರರಿಗೆ ಹೆಚ್ಚು ಅರಿವಿದೆ. ಹೀಗಾಗಿ ಪಾಕ್ ತಂಡ ತವರು ಮೈದಾನದ ಲಾಭವನ್ನು ಪಡೆಯುತ್ತದೆ.
ತಂಡಗಳು ಇಂತಿವೆ.. ಪಾಕಿಸ್ತಾನ: ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಫಹೀಮ್ ಅಶ್ರಫ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್
ಬಾಂಗ್ಲಾದೇಶ: ಮೊಹಮ್ಮದ್ ನಯಿಮ್, ಮೆಹಿದಿ ಹಸನ್ ಮಿರಾಜ್, ಲಿಟ್ಟನ್ ದಾಸ್, ತೌಹಿದ್ ಹೃದಯೋಯ್, ಶಕೀಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಶಮೀಮ್ ಹೊಸೈನ್, ಅಫೀಫ್ ಹೊಸೈನ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಹಸನ್ ಮಹಮೂದ್
ಇದನ್ನೂ ಓದಿ: Asia Cup: ಇಂದಿನಿಂದ ಸೂಪರ್ 4 ಹಂತ.. ಕೊಲಂಬೊದಲ್ಲಿ 10 ದಿನ ಮಳೆ ಸಾಧ್ಯತೆ, ಪಂದ್ಯಗಳಿಗೆ ಅಡ್ಡಿ ಆತಂಕ