ಪಲ್ಲೆಕೆಲೆ (ಶ್ರೀಲಂಕಾ): ಭಾರತ ಮತ್ತು ನೇಪಾಳ ನಡುವಿನ ಪಂದ್ಯ ಇಂದು ಲಂಕಾದ ಪಲ್ಲೆಕಲೆ ಮೈದಾನದಲ್ಲಿ ನಡೆಯುತ್ತಿದ್ದು, ಟಾಸ್ ಗೆದ್ದ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಭಾರತದಲ್ಲಿ ಮೊದಲೇ ತಿಳಿದಂತೆ ಒಂದು ಬದಲಾವಣೆ ಆಗಿದ್ದು, ಬುಮ್ರಾ ಬದಲು ಶಮಿ ಮೈದಾನಕ್ಕಿಳಿಯುತ್ತಿದ್ದಾರೆ.
ಪಾಕಿಸ್ತಾನ ಎದುರಿನ ಪಂದ್ಯ ಇದೇ ಮೈದಾನದಲ್ಲಿ ಆಗಿತ್ತು ಅಂದು ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿದ್ದರು. ಭಾರತ 266 ರನ್ ಗಳಸಿ ಆಲ್ಔಟ್ ಆಗಿತ್ತು. ಪಾಕಿಸ್ತಾನ ಶಾಹೀನ್ ಅಫ್ರಿದಿ, ನಾಸೀಮ್ ಶಾ ಮತ್ತು ಹ್ಯಾರಿಸ್ ರೌಫ್ ಭಾರತದ 10 ವಿಕೆಟ್ನ್ನು ಕಬಳಿಸಿದ್ದರು. ಏಷ್ಯಾಕಪ್ನಲ್ಲೇ ಮೊದಲ ಬಾರಿಗೆ ಒಂದು ಪಂದ್ಯದಲ್ಲಿ 10 ವಿಕೆಟ್ನ್ನು ಬೌಲರ್ಗಳೇ ಪಡೆದ ದಾಖಲೆ ಆಗಿತ್ತು.
-
🚨 Toss & Team News 🚨#TeamIndia have elected to bowl against Nepal.
— BCCI (@BCCI) September 4, 2023 " class="align-text-top noRightClick twitterSection" data="
A look at our Playing XI 🔽
Follow the match ▶️ https://t.co/i1KYESEMV1 #AsiaCup2023 | #INDvNEP pic.twitter.com/wX572GyE07
">🚨 Toss & Team News 🚨#TeamIndia have elected to bowl against Nepal.
— BCCI (@BCCI) September 4, 2023
A look at our Playing XI 🔽
Follow the match ▶️ https://t.co/i1KYESEMV1 #AsiaCup2023 | #INDvNEP pic.twitter.com/wX572GyE07🚨 Toss & Team News 🚨#TeamIndia have elected to bowl against Nepal.
— BCCI (@BCCI) September 4, 2023
A look at our Playing XI 🔽
Follow the match ▶️ https://t.co/i1KYESEMV1 #AsiaCup2023 | #INDvNEP pic.twitter.com/wX572GyE07
ಭಾರತ ಇಂದು ಎರಡು ಪ್ರಮುಖ ವೇಗದ ಬೌಲಿಂಗ್ ದಾಳಿಯಾಗಿ ಮಹಮ್ಮದ್ ಸಿರಾಜ್ ಮತ್ತು ಶಮಿಯನ್ನು ಇಟ್ಟುಕೊಂಡಿದೆ. ಅವರ ಜೊತೆಯಲ್ಲಿ ಮಧ್ಯಮ ವೇಗಿಗಳಾದ ಶಾರ್ದೂಲ್ ಠಾಕೂರ್ ಮತ್ತು ಉಪನಾಯಕ ಹಾರ್ದಿಕ್ ಪಾಂಡ್ಯ ಸಹ ಆಡಲಿದ್ದಾರೆ. ಇನ್ನು ಸ್ಪಿನ್ ವಿಭಾಗದಲ್ಲಿ ಕುಲದೀಪ್ ಯಾದವ್ ಮತ್ತು ಆಲ್ರೌಂಡರ್ ಜಡೇಜಾ ಇರಲಿದ್ದಾರೆ.
ತವರಿಗೆ ಮರಳಿರುವ ಬುಮ್ರಾ: ಮೊದಲ ಮಗುವಿನ ಜನನದ ನಿರೀಕ್ಷೆಯಲ್ಲಿ ಬುಮ್ರಾ ನಿನ್ನೆ (ಭಾನುವಾರ) ಶ್ರೀಲಂಕಾದಿಂದ ಮುಂಬೈಗೆ ಮರಳಿದ್ದು, ಕುಟುಂಬದೊಂದಿಗಿದ್ದಾರೆ. ಇಂದು ಗಂಡು ಮಗುವಿನ ಜನನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಭಾರತದ ಸೂಪರ್ ಫೋರ್ ಹಂತದ ಪಂದ್ಯದ ವೇಳೆ ಮತ್ತೆ ತಂಡಕ್ಕೆ ಸೇರಿಕೊಳ್ಳುವ ನಿರೀಕ್ಷೆ ಇದೆ.
ಮಳೆ ಮುನ್ಸೂಚನೆ: ಪಲ್ಲೆಕೆಲೆಯಲ್ಲಿ ಮಳೆಯ ಮುನ್ಸೂಚನೆ ಇಂದಿನ ಪಂದ್ಯಕ್ಕೂ ಇದೇ. ಭಾರತ ಮತ್ತು ಪಾಕಿಸ್ತಾನ ಮುಖಾಮುಖಿ ವೇಳೆ ಒಂದು ಇನ್ನಿಂಗ್ಸ್ ಆಡಲು ವರುಣ ಅವಕಾಶ ನೀಡಿದ್ದ. ಪಾಕಿಸ್ತಾನಕ್ಕೆ ಬ್ಯಾಟಿಂಗೆ ಅವಕಾಶ ಸಿಗದ ಕಾರಣ ಪಂದ್ಯವನ್ನು ರದ್ದು ಮಾಡಲಾಯಿತು. ಮಳೆಯಿಂದಾಗಿ ಈ ಪಂದ್ಯವೂ ರದ್ದಾದಲ್ಲಿ ಭಾರತ ತಂಡ ಸೂಪರ್ ಫೋರ್ ಹಂತವನ್ನು ಪ್ರವೇಶಿಸಲಿದೆ.
ತಂಡಗಳು ಇಂತಿವೆ.. ನೇಪಾಳ: ಕುಶಾಲ್ ಭುರ್ಟೆಲ್, ಆಸಿಫ್ ಶೇಖ್ (ವಿಕೆಟ್ ಕೀಪರ್), ರೋಹಿತ್ ಪೌಡೆಲ್ (ನಾಯಕ), ಭೀಮ್ ಶರ್ಕಿ, ಸೋಂಪಾಲ್ ಕಾಮಿ, ಗುಲ್ಸನ್ ಝಾ, ದೀಪೇಂದ್ರ ಸಿಂಗ್ ಐರಿ, ಕುಶಾಲ್ ಮಲ್ಲಾ, ಸಂದೀಪ್ ಲಮಿಚಾನೆ, ಕರಣ್ ಕೆಸಿ, ಲಲಿತ್ ರಾಜ್ಬನ್ಶಿ
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ಇದನ್ನೂ ಓದಿ:ನೇಪಾಳ ಜೊತೆ ಭಾರತ ಸೆಣಸು.. ಮಳೆಯಿಂದ ಪಂದ್ಯ ರದ್ದಾದ್ರೂ ಸೂಪರ್4ಗೆ ಟೀಂ ಇಂಡಿಯಾ ಲಗ್ಗೆ!