ETV Bharat / sports

ನೇಪಾಳ ಜೊತೆ ಭಾರತ ಸೆಣಸು.. ಮಳೆಯಿಂದ ಪಂದ್ಯ ರದ್ದಾದ್ರೂ ಸೂಪರ್​4ಗೆ ಟೀಂ ಇಂಡಿಯಾ ಲಗ್ಗೆ! - ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಪಂದ್ಯ

ಟಾಪ್ ಆರ್ಡರ್ ವೈಫಲ್ಯ.. ನಿರೀಕ್ಷೆಗೆ ತಕ್ಕ ಆಟ ವಿಫಲ.. ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಮಾಡಿದ ರೀತಿ ಇದು. ಇದೀಗ ರೋಹಿತ್ ಬಳಗ ಈ ತಪ್ಪುಗಳನ್ನು ಸರಿಪಡಿಸಿಕೊಂಡು ನೇಪಾಳದ ಮೇಲೆ ದಾಳಿ ನಡೆಸುವ ಗುರಿ ಇಟ್ಟುಕೊಂಡಿದೆ.

Asia Cup 2023  India vs Nepal Match under clouds  high chances of rain  India vs Nepal 5th Match Group A  Asia Cup 2023  International Cricket Stadium in Pallekele  ಟಾಪ್​ ಆರ್ಡರ್​ ಮೇಲೆ ಕಣ್ಣು  ನೇಪಾಳ ವಿರುದ್ಧ ವಿಜೃಂಭಿಸಬೇಕಾಗಿದೆ ಬೌಲರ್​ಗಳು  ಪಾಕಿಸ್ತಾನದ ವೇಗಿಗಳ ವಿರುದ್ಧ ಸೆಣಸಿರುವ ಭಾರತ  ಅಭಿಮಾನಿಗಳು ತುಂಬಾ ಅಸಮಾಧಾನ  ಟೀಂ ಇಂಡಿಯಾ ಬೃಹತ್ ಗೆಲುವಿನೊಂದಿಗೆ ಟೂರ್ನಿ  ಹಸಿಗೂಸುಗಳ ಜೊತೆ ಭಾರತ ಸೆಣಸು  ಮಳೆಯಿಂದ ಪಂದ್ಯ ರದ್ದಾದ್ರೂ ಸೂಪರ್​4ಗೆ ಟೀಂ ಇಂಡಿಯಾ  ಪಂದ್ಯ ರದ್ದಾದ್ರೂ ಸೂಪರ್​4ಗೆ ಟೀಂ ಇಂಡಿಯಾ ಲಗ್ಗೆ  ಟಾಪ್ ಆರ್ಡರ್ ವೈಫಲ್ಯ  ನಿರೀಕ್ಷೆಗೆ ತಕ್ಕ ಆಟ ವಿಫಲ  ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಪಂದ್ಯ  ನೇಪಾಳದ ಮೇಲೆ ದಾಳಿ ನಡೆಸುವ ಆಶಯ
ಹಸಿಗೂಸುಗಳ ಜೊತೆ ಭಾರತ ಸೆಣಸು
author img

By ETV Bharat Karnataka Team

Published : Sep 4, 2023, 7:20 AM IST

ಪಲ್ಲೆಕೆಲೆ (ಶ್ರೀಲಂಕಾ): ಭಾರತ ಏಷ್ಯಾ ಕಪ್ ಅನ್ನು ಪ್ರಾರಂಭಿಸಿದೆ. ಆದ್ರೆ ಅಭಿಮಾನಿಗಳು ತುಂಬಾ ಅಸಮಾಧಾನಗೊಂಡಿದ್ದಾರೆ. ಪಾಕಿಸ್ತಾನದೊಂದಿಗಿನ ಕದನ ಮಳೆಯಿಂದಾಗಿ ರದ್ದಾಯ್ತಾಲ್ಲ ಎಂಬ ನಿರಾಸೆ. ಈಗ ರೋಹಿತ್ ಪಡೆ ಮತ್ತೊಂದು ಹೋರಾಟಕ್ಕೆ ಸಜ್ಜಾಗಿದೆ. ಈ ಬಾರಿ ಅದು ಕ್ರಿಕೆಟ್​ ಶಿಶು ನೇಪಾಳ. ಪಾಕಿಸ್ತಾನದ ಜತೆಗಿನ ಪಂದ್ಯದಲ್ಲಿ ಅಂಕ ಹಂಚಿಕೊಂಡಿರುವ ಟೀಂ ಇಂಡಿಯಾ ನೇಪಾಳ ವಿರುದ್ಧ ಭರ್ಜರಿ ಜಯ ಸಾಧಿಸಿ ಸೂಪರ್-4 ಸ್ಥಾನಕ್ಕೆ ಲಗ್ಗೆಯಿಡುವ ನಿರೀಕ್ಷೆಯಲ್ಲಿದೆ. ಆದರೆ, ಈ ಪಂದ್ಯಕ್ಕೂ ವರುಣನ ಭೀತಿ ಎದುರಾಗಿದೆ.

ಟೀಂ ಇಂಡಿಯಾ ಬೃಹತ್ ಗೆಲುವಿನೊಂದಿಗೆ ಟೂರ್ನಿಯನ್ನು ಉತ್ತಮವಾಗಿ ಆರಂಭಿಸಿದ್ದಲ್ಲದೆ ಗ್ರೂಪ್-ಎಯಲ್ಲಿ ಸೂಪರ್-4 ಸ್ಥಾನ ಭದ್ರಪಡಿಸಿಕೊಳ್ಳುವ ಸಂಕಲ್ಪ ತೊಟ್ಟಿದ್ದಾರೆ. ಈ ಪಂದ್ಯ ಮಳೆಯಿಂದ ರದ್ದಾದ್ರೂ ಭಾರತ 2 ಅಂಕಗಳಿಂದ ಮುನ್ನಡೆ ಸಾಧಿಸಲಿದೆ. ಹೀಗಾಗಿ ಭಾರತಕ್ಕೆ ಮಳೆಯಿಂದ ಪಂದ್ಯ ರದ್ದಾದ್ರೆ ಚಿಂತಿಲ್ಲ. ಆದ್ರೆ ನೇಪಾಳ ವಿರುದ್ಧ ಪಂದ್ಯ ಸೋಲನ್ನಪ್ಪಿದ್ರೆ ಸೂಪರ್​ 4ಗೆ ಲಗ್ಗೆಯಿಡದೇ ಮನೆಗೆ ವಾಪಸ್​ ಆಗಲಿದ್ದಾರೆ ರೋಹಿತ್​ ಬಳಗ. ಏಕೆಂದರೆ ನೇಪಾಳ ಈಗಾಗಲೇ ಪಾಕಿಸ್ತಾನದಿಂದ ಸೋತಿದೆ. ಈ ಪಂದ್ಯ ಗೆದ್ರೆ ಎರಡು ಅಂಕ ಪಡೆಯುವ ಮೂಲಕ ಮುನ್ನಡೆ ಸಾಧಿಸಲಿದೆ.

ಟಾಪ್​ ಆರ್ಡರ್​ ಮೇಲೆ ಕಣ್ಣು: ಪಾಕಿಸ್ತಾನದ ವೇಗಿಗಳ ವಿರುದ್ಧ ಸೆಣಸಿರುವ ಭಾರತದ ಅಗ್ರ ಕ್ರಮಾಂಕ ನೇಪಾಳ ಎದುರು ಮಿಂಚಬೇಕಿದೆ. ಪಾಕಿಸ್ತಾನದ ವಿರುದ್ಧ ವಿಫಲವಾಗಿರುವ ನಾಯಕ ರೋಹಿತ್ ಶರ್ಮಾ ಹಾಗೂ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಭರ್ಜರಿ ಇನ್ನಿಂಗ್ಸ್ ಆಡುತ್ತಾರೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಆಗಾಗ್ಗೆ ವೈಫಲ್ಯ ಅನುಭವಿಸುತ್ತಿರುವ ಶುಭಮನ್ ಗಿಲ್ ಕೂಡ ತಮ್ಮ ಫಾರ್ಮ್ ಕಂಡುಕೊಳ್ಳಲು ಇದು ಒಳ್ಳೆಯ ಅವಕಾಶ. ಗಾಯದಿಂದ ಚೇತರಿಸಿಕೊಂಡ ನಂತರ ಪುನರಾಗಮನ ಮಾಡಲು ವಿಫಲರಾದ ಶ್ರೇಯಸ್ ಅಯ್ಯರ್​ಗೂ ಇದು ಮತ್ತೊಂದು ಅವಕಾಶ. ಪಾಕಿಸ್ತಾನದ ವಿರುದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ಈ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕರೆ ಹೇಗೆ ಆಡುತ್ತಾರೆ ಎಂಬುದನ್ನು ನೋಡಬೇಕು. ವಿಶ್ವಕಪ್ ತಂಡದ ಆಯ್ಕೆಗೂ ಮುನ್ನ ತಪ್ಪುಗಳನ್ನು ತಿದ್ದಿಕೊಳ್ಳುವುದಲ್ಲದೆ, ತಂಡ ರಚನೆ ಬಗ್ಗೆ ಟೀಂ ಇಂಡಿಯಾ ಒಂದು ಅಂದಾಜಿಗೆ ಬರಬೇಕಿದೆ.

ನೇಪಾಳ ವಿರುದ್ಧ ವಿಜೃಂಭಿಸಬೇಕಾಗಿದೆ ಬೌಲರ್​ಗಳು : ಪಾಕ್ ವಿರುದ್ಧದ ಪಂದ್ಯದಲ್ಲಿ ಮಳೆಯಿಂದಾಗಿ ಬೌಲಿಂಗ್ ಮಾಡುವ ಅವಕಾಶ ಸಿಗದ ಭಾರತದ ಬೌಲರ್​ಗಳು ಈ ಬಾರಿ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ವೈಯಕ್ತಿಕ ಕಾರಣಗಳಿಂದ ಬುಮ್ರಾ ದೂರವಾಗಿರುವುದರಿಂದ ಅವರ ಬದಲಿಗೆ ಮೊಹಮ್ಮದ್ ಶಮಿ ಅಂತಿಮ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ಸಿರಾಜ್ ಜತೆಯಾದರೆ ನೇಪಾಳಿ ಬ್ಯಾಟ್ಸ್​​ಮನ್​ಗಳಿಗೆ ಕಷ್ಟ. ವೇಗಿಗಳ ಜತೆಗೆ ಫಾರ್ಮ್​ನಲ್ಲಿರುವ ಸ್ಪಿನ್ನರ್ ಕುಲದೀಪ್ ಯಾದವ್ ಮಿಂಚಿದರೆ ನೇಪಾಳ ಸಂಕಷ್ಟಕ್ಕೆ ಸಿಲುಕಲಿದೆ. ಸ್ಪಿನ್ನರ್ ಸಂದೀಪ್ ಲಾಮಿಚಾನೆ ನೇಪಾಳ ತಂಡದಲ್ಲಿ ಐಪಿಎಲ್‌ನಲ್ಲಿ ಆಡಿರುವ ಏಕೈಕ ಆಟಗಾರ. ನಾಯಕ ರೋಹಿತ್ ಪೌಡೆಲ್ ಮತ್ತು ಕುಶಾಲ್ ಬರ್ತೆಲ್ ಕೂಡ ಪ್ರತಿಭಾವಂತರು. ಮೊದಲ ಪಂದ್ಯದಲ್ಲಿ 238 ರನ್‌ಗಳಿಂದ ಸೋತ ನೇಪಾಳಿ ತಂಡ ಭಾರತವನ್ನು ಎಷ್ಟರಮಟ್ಟಿಗೆ ಪ್ರತಿರೋಧಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಭಾರತ (ಸಂಭಾವ್ಯ ತಂಡ): ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿ.ಕೀ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್​ ಶೆಮಿ, ಮೊಹಮ್ಮದ್ ಸಿರಾಜ್.

ನೇಪಾಳ (ಸಂಭಾವ್ಯ ತಂಡ): ರೋಹಿತ್ ಪೌಡೆಲ್ (ನಾಯಕ), ಕುಶಾಲ್ ಬರ್ಟೆಲ್, ಆಸಿಫ್ ಶೇಖ್, ಆರಿಫ್ ಶೇಖ್, ಸೋಂಪಾಲ್, ದೀಪೇಂದ್ರ ಸಿಂಗ್, ಗುಲ್ಶನ್ ಝಾ, ಕುಶಾಲ್ ಮಲ್ಲಾ, ಕರಣ್, ಸಂದೀಪ್ ಲಮಿಚಾನೆ, ಲಲಿತ್ ರಾಜಬನ್ಶಿ..

ಓದಿ: ಅಫ್ಘಾನಿಸ್ತಾನ ಮಣಿಸಿದ ಬಾಂಗ್ಲಾದೇಶ.. 89 ರನ್​ಗಳ ಗೆಲುವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.