ETV Bharat / sports

ಏಷ್ಯಾಕಪ್‌ನಲ್ಲಿಂದು ಭಾರತ-ಬಾಂಗ್ಲಾದೇಶ ಫೈಟ್​: ಟಾಸ್‌ ಗೆದ್ದ ಭಾರತ ಬೌಲಿಂಗ್, ತಿಲಕ್​ ವರ್ಮಾ ಪಾದಾರ್ಪಣೆ - ಏಷ್ಯಾಕಪ್​ನ ಸೂಪರ್​ ಫೋರ್​

ಏಷ್ಯಾ ಕಪ್​ ಕ್ರಿಕೆಟ್‌ ಸರಣಿಯ ಸೂಪರ್​ ಫೋರ್​ ಹಂತದಲ್ಲಿಂದು ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ಔಪಚಾರಿಕ ಪಂದ್ಯ ನಡೆಯುತ್ತಿದೆ. ಟಾಸ್​ ಗೆದ್ದ ಭಾರತ ಬೌಲಿಂಗ್​ ಆಯ್ದುಕೊಂಡಿದೆ.

Asia Cup 2023
Asia Cup 2023
author img

By ETV Bharat Karnataka Team

Published : Sep 15, 2023, 3:09 PM IST

Updated : Sep 15, 2023, 3:22 PM IST

ಕೊಲಂಬೊ (ಶ್ರೀಲಂಕಾ): ಸತತ ಎರಡು ಪಂದ್ಯಗಳನ್ನು ಗೆದ್ದ ಭಾರತ ಏಷ್ಯಾಕಪ್ ಕ್ರಿಕೆಟ್‌ ಟೂರ್ನಿಯ ಫೈನಲ್​ ಪ್ರವೇಶಿಸಿದೆ. ಬಾಂಗ್ಲಾದೇಶ ತಂಡವು ಪಾಕಿಸ್ತಾನ ಹಾಗು ಶ್ರೀಲಂಕಾ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಹೀಗಾಗಿ ಇಂದಿನ ಭಾರತ-ಬಾಂಗ್ಲಾ ನಡುವಣ ಪಂದ್ಯ ಔಪಚಾರಿಕವಾಗಿದೆ. ಟಾಸ್​ ಗೆದ್ದ ಕ್ಯಾಪ್ಟನ್‌ ರೋಹಿತ್​ ಶರ್ಮಾ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ತಿಲಕ್​ ವರ್ಮಾ ಈ ಪಂದ್ಯದಲ್ಲಿ ಪಾದಾರ್ಪಣೆ ಮಾಡುತ್ತಿದ್ದಾರೆ. ಭಾರತ ತಂಡದಲ್ಲಿ ಐದು ಬದಲಾವಣೆ ಮಾಡಿದೆ.

ಶ್ರೀಲಂಕಾ ವಿರುದ್ಧದ ಫೈನಲ್​ ಪಂದ್ಯಕ್ಕೆ ಪ್ರಮುಖ ಆಟಗಾರರಿಗೆ ವಿಶ್ರಾಂತಿ​ ನೀಡಲಾಗಿದೆ. ವಿರಾಟ್​ ಕೊಹ್ಲಿ, ಜಸ್ಪ್ರೀತ್​ ಬುಮ್ರಾ, ಕುಲ್ದೀಪ್​ ಯಾದವ್​, ಮಹಮ್ಮದ್​ ಸಿರಾಜ್ ಮತ್ತು ಹಾರ್ದಿಕ್​ ಪಾಂಡ್ಯ ತಂಡದಲ್ಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಸೂರ್ಯ ಕುಮಾರ್ ಯಾದವ್​ ಮತ್ತು ತಿಲಕ್​ ವರ್ಮಾ ಅವರನ್ನು ಆಡಿಸಲಾಗುತ್ತಿದೆ. ಹಾರ್ದಿಕ್​ ಬದಲು ಶಾರ್ದೂಲ್​ ತಂಡ ಸೇರಿದ್ದಾರೆ. ವೇಗದ ಬೌಲಿಂಗ್​ ವಿಭಾಗವನ್ನು ಪ್ರಸಿದ್ಧ್ ಕೃಷ್ಣ ಮತ್ತು ಶಮಿ ನಿರ್ವಹಿಸುತ್ತಿದ್ದಾರೆ.

ಭಾರತ ತಂಡಕ್ಕೆ ಈ ಪಂದ್ಯದ ಸೋಲು-ಗೆಲುವಿನಿಂದ ಯಾವುದೇ ವ್ಯತ್ಯಾಸ ಆಗದಿರುವ ಕಾರಣ ಏಷ್ಯಾಕಪ್​ಗೆ ಆಯ್ಕೆಯಾಗಿ ಬೆಂಚ್​ ಕಾಯುತ್ತಿದ್ದ ಎಲ್ಲರಿಗೂ ಅವಕಾಶ ನೀಡುವ ನಿಟ್ಟಿನಲ್ಲಿ ತಂಡ ಸಂಪೂರ್ಣ ಬದಲಾಗಿದೆ. ಗಾಯದಿಂದ ಚೇತರಿಸಿಕೊಂಡು ಫಿಟ್​ ಆಗಿ ತಂಡಕ್ಕೆ ಮರಳಿದ್ದ ಅಯ್ಯರ್​ ಮತ್ತೆ ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿದ್ದಾರೆ. ಕಳೆದೆರಡು ಪಂದ್ಯದಿಂದ ಅವರು ಹೊರಗುಳಿದಿದ್ದರು. ಇದೇ ಕಾರಣಕ್ಕೆ ನಾಯಕ ರೋಹಿತ್​ ಶರ್ಮಾ, ಅಯ್ಯರ್​ ಆರೋಗ್ಯದ ಬಗ್ಗೆ ಟಾಸ್​ ವೇಳೆ ಯಾವುದೇ ಮಾಹಿತಿ ನೀಡಲಿಲ್ಲ. ವಿಶ್ವಕಪ್​ ವೇಳೆ ಮಧ್ಯಮ ಕ್ರಮಾಂಕಕ್ಕೆ ಅಯ್ಯರ್​ ಬದಲಾಗಿ ಬೇರೆ ಆಟಗಾರರ ಆಯ್ಕೆ ಮಾಡುವ ಸಾಧ್ಯತೆ ಇದೆ.

ಏಷ್ಯಾಕಪ್​ನಲ್ಲಿ ವೈಫಲ್ಯ ಕಂಡಿರುವ ಬಾಂಗ್ಲಾದೇಶ, ವಿಶ್ವಕಪ್​ಗೂ ಮುನ್ನ ಈ ಪಂದ್ಯ ಗೆದ್ದು ಭರವಸೆಯಿಂದ ಮೈದಾನಕ್ಕಿಳಿಯುವ ಚಿಂತನೆಯಲ್ಲಿದೆ. ತಂಝಿದ್ ಹಸನ್ ಆರಂಭಿಕರಾಗಿ ಬಾಂಗ್ಲಾ ತಂಡಕ್ಕೆ ಇಂದು ಪಾದಾರ್ಪಣೆ ಮಾಡುತ್ತಿದ್ದಾರೆ. ಮುಶ್ಫಿಕರ್ ರಹೀಮ್ ಎರಡನೇ ಮಗುವಿನ ಜನನದ ಹಿನ್ನೆಲೆಯಲ್ಲಿ ತವರಿಗೆ ತೆರಳಿದ್ದು, ರಜೆ ವಿಸ್ತರಿಸಿದ್ದಾರೆ. ಹೀಗಾಗಿ ಲಿಟ್ಟನ್ ದಾಸ್ ಕೀಪಿಂಗ್ ಮಾಡಲಿದ್ದಾರೆ. ​

ತಂಡಗಳು ಇಂತಿವೆ- ಬಾಂಗ್ಲಾದೇಶ: ಲಿಟ್ಟನ್ ದಾಸ್ (ವಿಕೆಟ್​ ಕೀಪರ್​), ತಂಝಿದ್ ಹಸನ್, ಅನಾಮುಲ್ ಹಕ್, ಶಕೀಬ್ ಅಲ್ ಹಸನ್ (ನಾಯಕ), ತೌಹಿದ್ ಹೃದಯೋಯ್, ಶಮೀಮ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ಮಹೇದಿ ಹಸನ್, ನಸುಮ್ ಅಹ್ಮದ್, ತಂಝಿಮ್ ಹಸನ್ ಸಾಕಿಬ್, ಮುಸ್ತಫಿಜುರ್ ರೆಹಮಾನ್

ಭಾರತ: ರೋಹಿತ್ ಶರ್ಮಾ (ನಾಯಕ), ಶುಭ್‌ಮನ್ ಗಿಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೆ.ಎಲ್.ರಾಹುಲ್, ಇಶಾನ್ ಕಿಶನ್ (ವಿಕೆಟ್​​ ಕೀಪರ್​), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ

ಇದನ್ನೂ ಓದಿ: ಏಷ್ಯಾಕಪ್ 2023: ಭಾರತ- ಬಾಂಗ್ಲಾದೇಶ ನಡುವೆ ಹಣಾಹಣಿ... ಪಂದ್ಯಕ್ಕೆ ವರುಣನ ಭೀತಿ

Last Updated : Sep 15, 2023, 3:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.