ದುಬೈ(ಯುಎಇ): ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ಹಾಂಗ್ ಕಾಂಗ್ ವಿರುದ್ಧ ನಡೆದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಬೌಂಡರಿ, ಸಿಕ್ಸರ್ಗಳ ಸುರಿಮಳೆಗೈದರು. ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟರ್ ಎಬಿ ಡಿವಿಲಿಯರ್ಸ್ ಶೈಲಿಯಲ್ಲಿ 360 ಡಿಗ್ರಿಯಲ್ಲಿ ಬ್ಯಾಟಿಂಗ್ ಮಾಡಿದ ಅವರು, ಕೊನೆಯ ಓವರ್ನಲ್ಲಿ ನಾಲ್ಕು ಸಿಕ್ಸರ್ ಬಾರಿಸಿ, ಗಮನ ಸೆಳೆದರು.
-
Suryakumar Yadav 4 sixes back to back #INDvsHK #Surya pic.twitter.com/AOVt6T1wPc
— DD Sports (@Mahesh13657481) August 31, 2022 " class="align-text-top noRightClick twitterSection" data="
">Suryakumar Yadav 4 sixes back to back #INDvsHK #Surya pic.twitter.com/AOVt6T1wPc
— DD Sports (@Mahesh13657481) August 31, 2022Suryakumar Yadav 4 sixes back to back #INDvsHK #Surya pic.twitter.com/AOVt6T1wPc
— DD Sports (@Mahesh13657481) August 31, 2022
ಕೆ ಎಲ್ ರಾಹುಲ್ ವಿಕೆಟ್ ಒಪ್ಪಿಸಿದ ಬಳಿಕ ಮೈದಾನಕ್ಕೆ ಬಂದ ಸೂರ್ಯಕುಮಾರ್ ಯಾದವ್, ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಜೊತೆ ಸೇರಿ ಅಬ್ಬರಿಸಿದರು. ತಾವು ಎದುರಿಸಿದ 26 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್ ಸೇರಿ ಅಜೇಯ 68 ರನ್ಗಳಿಕೆ ಮಾಡಿದರು. ಕೊನೆಯ ಓವರ್ನಲ್ಲಿ ನಾಲ್ಕು ಸಿಕ್ಸರ್ ಸಿಡಿಸಿ, ತಂಡದ ಮೊತ್ತ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ಇವರ ಆಟದ ವೈಖರಿಗೆ ವಿರಾಟ್ ಕೊಹ್ಲಿ ಶಿರಬಾಗಿ ನಮಿಸಿದ್ದಾರೆ.
-
Take A Bow To This Brilliant Partnership and massive innings of Virat Kohli & Suryakumar Yadav 🇮🇳😍
— Anjali ♡ (@imAnjalii718) August 31, 2022 " class="align-text-top noRightClick twitterSection" data="
Oh Virat The Way You Bows Down ❤️@imVkohli | @surya_14kumar | #INDvHKG pic.twitter.com/EXJ1yvl3aJ
">Take A Bow To This Brilliant Partnership and massive innings of Virat Kohli & Suryakumar Yadav 🇮🇳😍
— Anjali ♡ (@imAnjalii718) August 31, 2022
Oh Virat The Way You Bows Down ❤️@imVkohli | @surya_14kumar | #INDvHKG pic.twitter.com/EXJ1yvl3aJTake A Bow To This Brilliant Partnership and massive innings of Virat Kohli & Suryakumar Yadav 🇮🇳😍
— Anjali ♡ (@imAnjalii718) August 31, 2022
Oh Virat The Way You Bows Down ❤️@imVkohli | @surya_14kumar | #INDvHKG pic.twitter.com/EXJ1yvl3aJ
ಇದನ್ನೂ ಓದಿ: 'ನೀವು ಸ್ಫೂರ್ತಿ..' ಪಂದ್ಯ ಸೋತರೂ ಕೊಹ್ಲಿಗೆ ಟೀಂ ಜರ್ಸಿ ನೀಡಿ ಗಮನ ಸೆಳೆದ ಹಾಂಗ್ ಕಾಂಗ್
ದಾಖಲೆ ನಿರ್ಮಿಸಿದ ಸೂರ್ಯಕುಮಾರ್: ನಿನ್ನೆಯ ಪಂದ್ಯದಲ್ಲಿ ಆರಂಭದಿಂದಲೂ ಆರ್ಭಟಿಸಿದ ರೋಹಿತ್ ಶರ್ಮಾ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ವೇಗವಾಗಿ ಅರ್ಧಶತಕ ಸಿಡಿಸಿರುವ ಭಾರತದ 9ನೇ ಬ್ಯಾಟರ್ ಆಗಿ ಹೊರಹೊಮ್ಮಿದರು. ಇದರ ಜೊತೆಗೆ 22 ಎಸೆತಗಳಲ್ಲಿ ಅರ್ಧಶತಕ ಸಿಡಿಸಿರುವ ರೋಹಿತ್ ಶರ್ಮಾ ದಾಖಲೆ ಸರಿಗಟ್ಟಿದ್ದಾರೆ.
360 ಡಿಗ್ರಿಯಲ್ಲಿ ಬ್ಯಾಟಿಂಗ್: ಹಾಂಗ್ ಕಾಂಗ್ ಬೌಲರ್ ಹಾರೋನ್ ಅರ್ಷದ್ ಎಸೆದ ಕೊನೆಯ 20ನೇ ಓವರ್ ಸಂಪೂರ್ಣವಾಗಿ ಎದುರಿಸಿದ ಸೂರ್ಯಕುಮಾರ್ 26 ರನ್ ಕಲೆಹಾಕಿದರು. ಈ ಓವರ್ನಲ್ಲಿ 4 ಸಿಕ್ಸರ್ ಸಿಡಿಸಿ ಪರಾಕ್ರಮ ಮೆರೆದರು. ಮೊದಲ ಎಸೆತದಲ್ಲಿ ಫುಲ್ಟಾಸ್ ಬಾಲ್ಗೆ ಕವರ್ನಲ್ಲಿ ಸ್ವೀಪ್ ಶಾಟ್, 2ನೇ ಎಸೆತದಲ್ಲಿ ಡೀಪ್ ಎಕ್ಸ್ಟ್ರಾ ಕವರ್ ಸಿಕ್ಸ್, ಮೂರನೇ ಎಸೆತದಲ್ಲಿ ನೇರ ಸಿಕ್ಸ್ ಸಿಡಿಸಿದರು. ಇದಾದ ಬಳಿಕ 4ನೇ ಎಸೆತ ಡಾಟ್, 5ನೇ ಎಸೆತದಲ್ಲಿ ಫೈನ್ಲೆಗ್ ಮೂಲಕ ಇನ್ನೊಂದು ಸಿಕ್ಸರ್ ಸಿಡಿಸಿದ ಅವರು, ಕೊನೆಯ ಎಸೆತದಲ್ಲಿ ಎರಡು ರನ್ ಕಲೆ ಹಾಕಿದರು.