ದುಬೈ: ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಣ ಏಷ್ಯಾ ಕಪ್ ಫೈನಲ್ನಲ್ಲಿ ಪಾಕ್ ಆಟಗಾರರಿಬ್ಬರಿಂದ ರಾಜಪಕ್ಸೆ ಕ್ಯಾಚ್ ಕೈತಪ್ಪಿ ಸಿಕ್ಸರ್ ಆಗುತ್ತದೆ. ಇದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಗೀಡಾಗಿದೆ. ಶ್ರೀಲಂಕಾ 10 ಓವರ್ಗೆ 58ಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕ್ರೀಸಿಗೆ ಬಂದ ರಾಜಪಕ್ಸೆ ಸ್ಫೋಟಕ ಆಟದ ಮೂಲಕ 71 ರನ್ ಕೊಡುಗೆ ನೀಡಿದ್ದು, ಪಾಕಿಸ್ತಾನಕ್ಕೆ ಉತ್ತಮ ಟಾರ್ಗೆಟ್ ನೀಡಲು ಸಹಕಾರಿಯಾಗಿತ್ತು.
ಇದಕ್ಕೂ ಮುನ್ನ, ಮೊಹಮ್ಮದ್ ಹಸ್ನೇನ್ 19ನೇ ಓವರ್ನ ಕೊನೆಯ ಎಸೆತವನ್ನು ರಾಜಪಕ್ಸೆ ಡೀಪ್ ಮಿಡ್ ವಿಕೆಟ್ ಜಾಗದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ್ದರು. ಆಗಸದತ್ತ ಚಿಮ್ಮಿದ ಚೆಂಡನ್ನು ಹಿಡಿಯುವ ಭರದಲ್ಲಿ ಆಸಿಫ್ ಮತ್ತು ಶಾದಾಬ್ ಖಾನ್ ಮೈದಾನದ ಪರಸ್ಪರ ವಿರುದ್ಧ ದಿಕ್ಕಿನಿಂದ ಓಡಿಬಂದರು. ಆಸಿಫ್ ಕ್ಯಾಚ್ ಮಾಡುವಷ್ಟರಲ್ಲಿ ಶಾದಾಬ್ ಖಾನ್ ಬಂದು ಡಿಕ್ಕಿ ಹೊಡೆದರು. ಪರಿಣಾಮ, ಚೆಂಡು ಸಿಕ್ಸರ್ ಗೆರೆ ದಾಟಿತು.
-
ये छक्का क्रिकेट इतिहास में हमेशा याद रखा जाएगा. pic.twitter.com/yunCTCBufY
— उम्दा_पंक्तियां (@umda_panktiyan) September 11, 2022 " class="align-text-top noRightClick twitterSection" data="
">ये छक्का क्रिकेट इतिहास में हमेशा याद रखा जाएगा. pic.twitter.com/yunCTCBufY
— उम्दा_पंक्तियां (@umda_panktiyan) September 11, 2022ये छक्का क्रिकेट इतिहास में हमेशा याद रखा जाएगा. pic.twitter.com/yunCTCBufY
— उम्दा_पंक्तियां (@umda_panktiyan) September 11, 2022
18.5 ಓವರ್ಗೆ ಲಂಕಾದ ರನ್ ಮೊತ್ತ 149 ಆಗಿತ್ತು. ರಾಜಪಕ್ಸೆ 39 ಎಸೆತಗಳಲ್ಲಿ 51ರನ್ ಸಂಪಾದಿಸಿದ್ದರು. ನಸೀಮ್ ಶಾ ಕೊನೆಯ ಓವರ್ನಲ್ಲಿ 20 ರನ್ ಬಿಟ್ಟುಕೊಟ್ಟಿದ್ದರು. ಇದರಿಂದ ಪಾಕ್ಗೆ 170 ರನ್‌ಗಳ ಗುರಿಯನ್ನು ಶ್ರೀಲಂಕಾ ಶಕ್ತವಾಯಿತು. ಇನಿಂಗ್ಸ್‌ನ ಅಂತಿಮ ಓವರ್ನಲ್ಲಿ 20 ರನ್ ಕಡಿಮೆಯಾಗಿದ್ದರೆ ಪಾಕ್ಗೆ ಗುರಿ ಬೆನ್ನತ್ತುವಾಗ ಒತ್ತಡ ಕಡಿಮೆಯಾಗುತ್ತಿತ್ತು.
ಎರಡು ಕ್ಯಾಚ್ ಕೈಚೆಲ್ಲಿದ ಶದಾಬ್ ಖಾನ್: ಹ್ಯಾರಿಸ್ ರೌಫ್ 17.4ನೇ ಓವರ್ನಲ್ಲಿ ರಾಜಪಕ್ಸ ಲಾಂಗ್ ಆನ್ ಮೇಲೆ ಚೆಂಡು ಕಳುಹಿಸಿದ್ದರು. ಈ ಸಂದರ್ಭದಲ್ಲಿ ಶಾದಾಬ್ ಖಾನ್ ಕ್ಯಾಚ್ ಕೈಚೆಲ್ಲಿದರು. ಈ ಕ್ಯಾಚ್ ಸ್ವಲ್ಪ ಕಠಿಣವೇ ಇತ್ತಾದರೂ ಕೈಗೆ ತಾಗಿ ಬಿದ್ದಿದೆ. ಇದರಿಂದ ತಂಡಕ್ಕೆ 3 ರನ್ ಲಭ್ಯವಾಗಿತ್ತು.
ರೋಹಿತ್ ಶರ್ಮಾ ಕ್ಯಾಚ್ ಸಂದರ್ಭದಲ್ಲೂ ಇದೇ ರೀತಿ ಘಟನೆ: ಭಾರತ ಪಾಕ್ ನಡುವಣ ಸೂಪರ್ ಫೋರ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ಕ್ಯಾಚ್ನಲ್ಲೂ ಪಾಕಿಸ್ತಾನಿ ಆಟಗಾರರ ನಡುವೆ ಡಿಕ್ಕಿಯಾಗಿತ್ತು. ಬಿರುಸಿನಿಂದ ಆಡುತ್ತಿದ್ದ ರೋಹಿತ್, ಹ್ಯಾರಿಸ್ ರೌಫ್ ಅವರ ಎಸೆತವನ್ನು ಸಿಕ್ಸರ್‌ಗಟ್ಟುವ ಪ್ರಯತ್ನದಲ್ಲಿ ಬಾಟಮ್ ಹ್ಯಾಂಡ್ ಆದ ಕಾರಣ ಟಾಪ್ ಎಡ್ಜ್ ಆಗಿ ಎತ್ತರಕ್ಕೆ ಹೋದ ಚೆಂಡು ಹಿಡಿಯುವಾಗ ಖುಷ್ದಿಲ್ ಶಾ ಮತ್ತು ಬೌಲರ್ ಪರಸ್ಪರ ಡಿಕ್ಕಿಯಾಗಿದ್ದರು. ಆದರೆ, ಅಂದು ಖುಷ್ದಿಲ್ ಶಾ ಚೆಂಡನ್ನು ಬಲವಾಗಿ ಹಿಡಿದಿದ್ದರಿಂದ ರೋಹಿತ್ ಶರ್ಮಾ ಪೆವಿಲಿಯನ್ ದಾರಿ ಹಿಡಿಯಬೇಕಾಯಿತು.
ನೆಟ್ಟಿಗರಿಂದ ಭರಪೂರ ಟ್ರೋಲ್: ಶ್ರೀಲಂಕಾ ಮತ್ತು ಪಾಕಿಸ್ತಾನದ ಏಷ್ಯಾ ಕಪ್ ಫೈನಲ್ನಲ್ಲಿ ಕ್ಯಾಚ್ ಬಿಟ್ಟಿರುವುದು ತುಂಬಾ ಟ್ರೋಲ್ ಆಗುತ್ತಿದೆ. ಕೆಲವರು ಈದ್ನಲ್ಲಿ ಸಂಬಂಧಿಕರು ಉಡುಗೊರೆ ನೀಡುವಾಗ ನಾನು ನನ್ನ ತಂಗಿ ಹೀಗೆಯೇ ಗಲಾಟೆ ಮಾಡುತ್ತೇವೆ ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವು ಮಂದಿ, ಎಂದೂ ಮರೆಯಲಾಗದ ಸಿಕ್ಸರ್ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಳಸಿ ಹಂಚಿಕೊಳ್ಳುತ್ತಿದ್ದಾರೆ.
ಕೆಲವು ನೆಟ್ಟಿಗರು ಆಟಗಾರರ ಬೆಂಬಲಕ್ಕೆ ನಿಂತಿದ್ದಾರೆ. ಶಾದಾಬ್ಗೆ ಕಿವಿಯ ಬಳಿ ಗಾಯವಾಗಿ ರಕ್ತ ಬಂದಿತ್ತು. ಪ್ರಯತ್ನ ಉತ್ತಮವಾಗಿತ್ತು. ಶಾದಾಬ್ ಮತ್ತು ಆಸಿಫ್ ಉತ್ತಮವಾದ ಫೀಲ್ಡರ್ಗಳು ಎಂದು ಬೆಂಬಲಿಸಿದ್ದಾರೆ.
ಇದನ್ನೂ ಓದಿ: ಏಷ್ಯಾ ಕಪ್ಗೆ ಶ್ರೀಲಂಕಾ ದೊರೆ: ರೋಚಕ ಪಂದ್ಯದಲ್ಲಿ ಪಾಕ್ ಬಗ್ಗುಬಡಿದ ಸಿಂಹಳೀಯರು