ರೋಸೋ (ಡೊಮಿನಿಕಾ): ಭಾರತ ಕ್ರಿಕೆಟ್ ತಂಡದ ಅನುಭವಿ ಬೌಲರ್ ರವಿಚಂದ್ರನ್ ಅಶ್ವಿನ್ ಅವರು ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ. 5 ವಿಕೆಟ್ಗಳನ್ನು ಪಡೆದ ದಾಖಲೆ ಒಂದೆಡೆಯಾದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ತಂದೆ- ಮಗನನ್ನು ಪಾದಾರ್ಪಣೆ ಪಂದ್ಯದಲ್ಲೇ ಔಟ್ ಮಾಡಿದ ಭಾರತದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
-
When nothing happened, we 'turned' to Ashwin!
— FanCode (@FanCode) July 12, 2023 " class="align-text-top noRightClick twitterSection" data="
.
.#INDvWIonFanCode #WIvIND pic.twitter.com/wwPuS1QZG2
">When nothing happened, we 'turned' to Ashwin!
— FanCode (@FanCode) July 12, 2023
.
.#INDvWIonFanCode #WIvIND pic.twitter.com/wwPuS1QZG2When nothing happened, we 'turned' to Ashwin!
— FanCode (@FanCode) July 12, 2023
.
.#INDvWIonFanCode #WIvIND pic.twitter.com/wwPuS1QZG2
ಬುಧವಾರ ನಡೆದ ಮೊದಲ ಟೆಸ್ಟ್ನ ಪ್ರಥಮ ಇನ್ನಿಂಗ್ಸ್‌ನಲ್ಲಿ ಅಶ್ವಿನ್ ಟಾಗೆನರೈನ್ ಚಂದ್ರಪಾಲ್‌ರನ್ನು ಬೌಲ್ಡ್ ಮಾಡಿ ಪೆವಿಲಿಯನ್ಗೆ ಕಳುಹಿಸಿದರು. 2011ರಲ್ಲಿ ದೆಹಲಿಯಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಾದಾರ್ಪಣೆ ಟೆಸ್ಟ್ ಪಂದ್ಯದಲ್ಲಿ ಟಾಗೆನರೈನ್ ಅವರ ತಂದೆ ಶಿವನಾರಾಯಣ್ ಚಂದ್ರಪಾಲ್ ಅವರ ವಿಕೆಟ್ ಪಡೆಯುವಲ್ಲಿಯೂ ಅಶ್ವಿನ್ ಯಶಶ್ವಿಯಾಗಿದ್ದರು. 12 ವರ್ಷಗಳ ಹಿಂದೆ ನಡೆದ ಆ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಅಶ್ವಿನ್ ಅವರು ಶಿವನಾರಾಯಣ್ ಚಂದ್ರಪಾಲ್ ಅವರನ್ನು ಎಲ್ಬಿ ಬಲೆಗೆ ಬೀಳಿಸಿದ್ದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅಪ್ಪ-ಮಗನ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಾಧನೆಗೈದ ಮೊದಲ ಭಾರತೀಯ ಬೌಲರ್ ಕೂಡ ಇವರೇ ಆಗಿದ್ದು, ವಿಶ್ವದ 5ನೇ ಬೌಲರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಇಂಗ್ಲೆಂಡ್, ಪಾಕಿಸ್ತಾನ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಬೌಲರ್‌ಗಳು ಇಂಥ ಸಾಧಕರಾಗಿದ್ದರು.
ಈ ಹಿಂದೆಯೂ ಟಾಗೆನರೈನ್ ಚಂದ್ರಪಾಲ್ ಮತ್ತ ಅವರ ತಂದೆ ಶಿವನಾರಾಯಣ್ ಚಂದ್ರಪಾಲ್ ವಿಕೆಟ್ಅನ್ನು ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಬೌಲರ್‌ಗಳು ಉರುಳಿಸಿದ್ದರು. ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಮತ್ತು ದಕ್ಷಿಣ ಆಫ್ರಿಕಾದ ಆಫ್-ಸ್ಪಿನ್ನರ್ ಸೈಮನ್ ಹಾರ್ಮರ್ ಅವರು ಶಿವನಾರಾಯಣ್ ಮತ್ತು ಟಾಗೆನರೈನ್ ಅವರನ್ನು ಔಟ್ ಮಾಡಿದ ಇತರೆ ಇಬ್ಬರು ಬೌಲರ್‌ಗಳು. ಶಿವನಾರಾಯಣ್ 2015ರಲ್ಲಿ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಅವರ ಮಗ ಕಳೆದ ವರ್ಷ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದಾರೆ.
ತಂದೆ- ಮಗನ ಔಟ್ ಮಾಡಿದ ಬೌಲರ್‌ಗಳ ಪಟ್ಟಿ:
- ಇಯಾನ್ ಬೋಥಮ್ (ಇಂಗ್ಲೆಂಡ್) - ಲ್ಯಾನ್ಸ್ ಮತ್ತು ಕ್ರಿಸ್ ಕೈರ್ನ್ಸ್
- ವಾಸಿಂ ಅಕ್ರಮ್ (ಪಾಕಿಸ್ತಾನ) - ಲ್ಯಾನ್ಸ್ ಮತ್ತು ಕ್ರಿಸ್ ಕೈರ್ನ್ಸ್
- ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ ) - ಶಿವನಾರಾಯಣ್ ಮತ್ತು ಟಾಗೆನರೈನ್ ಚಂದ್ರಪಾಲ್
- ಸೈಮನ್ ಹಾರ್ಮರ್ (ದಕ್ಷಿಣ ಆಫ್ರಿಕಾ) - ಶಿವನಾರಾಯಣ್ ಮತ್ತು ಟಾಗೆನರೈನ್ ಚಂದ್ರಪಾಲ್
- ಆರ್. ಅಶ್ವಿನ್ (ಭಾರತ) - ಶಿವನಾರಾಯಣ್ ಮತ್ತು ಟಾಗೆನರೈನ್ ಚಂದ್ರಪಾಲ್
ಆ್ಯಂಡರ್ಸನ್ ದಾಖಲೆ ಮುರಿದ ಅಶ್ವಿನ್: ಟೆಸ್ಟ್ ಕ್ರಿಕೆಟ್‌ನಲ್ಲಿ 33ನೇ ಬಾರಿಗೆ 5 ವಿಕೆಟ್ ಪಡೆಯುವ ಮೂಲಕ ಅಶ್ವಿನ್ ಆ್ಯಂಡರ್ಸನ್ ಅವರ ದಾಖಲೆ ಮುರಿದಿದ್ದಾರೆ. ಆ್ಯಂಡರ್ಸನ್ ಅವರು ಟೆಸ್ಟ್‌ನಲ್ಲಿ 32 ಬಾರಿ ಪಂಚ ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಐದು ವಿಕೆಟ್ ಪಡೆದ ಮೊದಲಿಗರಲ್ಲಿ ಮುತ್ತಯ್ಯ ಮುರಳೀಧರನ್ ಇದ್ದು, ಇವರು 67 ಬಾರಿ 5 ವಿಕೆಟ್ ಕಿತ್ತಿದ್ದಾರೆ. ಶೇನ್ ವಾರ್ನ್ 37 ಬಾರಿ ವಿಕೆಟ್ ಪಡೆದು ಎರಡನೇ ಸ್ಥಾನದಲ್ಲಿದ್ದರೆ, ರಿಚರ್ಡ್ ಹ್ಯಾಡ್ಲಿ 36 ಬಾರಿ, ರಂಗನಾ ಹೆರಾತ್ 34 ಬಾರಿ ಐದು ವಿಕೆಟ್ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಅಶ್ವಿನ್ ಆರನೇ ಸ್ಥಾನದಲ್ಲಿದ್ದಾರೆ. ಅಶ್ವಿನ್ ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಬಾರಿ ಐದು ವಿಕೆಟ್ ಪಡೆದಿದ್ದಾರೆ. 7 ಬಾರಿ ಈ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: ಭಾರತ vs ವೆಸ್ಟ್ ಇಂಡೀಸ್ ಮೊದಲ ಟೆಸ್ಟ್: ಅಶ್ವಿನ್ 'ಫೈವ್‌ಸ್ಟಾರ್', ನಲುಗಿದ ವಿಂಡೀಸ್