ETV Bharat / sports

ಡೆಲ್ಲಿ ತಂಡದ ಮತ್ತೊಬ್ಬ ಆಟಗಾರನಿಗೆ ಕೊರೊನಾ; ಇಂದಿನ ಪಂದ್ಯದ ಗತಿ?

author img

By

Published : Apr 20, 2022, 5:34 PM IST

ಬುಧವಾರ ನಡೆಸಿದ ಆ್ಯಂಟಿಜನ್​ ಟೆಸ್ಟ್​​ನಲ್ಲಿ ಡೆಲ್ಲಿ ತಂಡದಲ್ಲಿ 6ನೇ ಕೋವಿಡ್​ 19 ಪ್ರಕರಣ ಕಂಡುಬಂದಿದೆ. ಬ್ರೆಬೋರ್ನ್​ನಲ್ಲಿ ಇಂದು ಸಂಜೆ ಪಂದ್ಯ ನಡೆಯುವುದಕ್ಕೂ ಮುನ್ನ ಬಿಸಿಸಿಐ ಮತ್ತೊಂದು ಸುತ್ತಿನ ಪರೀಕ್ಷೆ ನಡೆಸಲಿದೆ ಎಂದು ತಿಳಿದುಬಂದಿದೆ.

Delhi Capitals player tested COVID 19 test

ಮುಂಬೈ: ಆಸ್ಟ್ರೇಲಿಯಾದ ಮಿಚೆಲ್ ಮಾರ್ಷ್​ ಕೋವಿಡ್​ ಸೋಂಕು ತಗುಲಿ ಈಗಾಗಲೇ ಆಸ್ಪತ್ರೆ ಸೇರಿದ್ದಾರೆ. ಇದೀಗ ಬುಧವಾರ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಮತ್ತೊಬ್ಬ ವಿದೇಶಿ ಆಟಗಾರನಿಗೂ ಸೋಂಕು ತಗುಲಿದೆ ಎಂದು ತಿಳಿದುಬಂದಿದೆ.

ಬುಧವಾರ ಪಂಜಾಬ್​ ಕಿಂಗ್ಸ್ ವಿರುದ್ಧ ಪಂದ್ಯಕ್ಕೂ ಮುನ್ನ ಬಿಸಿಸಿಐ ನಡೆಸಿದ ಹೊಸ ಸುತ್ತಿನ ಕೋವಿಡ್​ 19 ​ ಟೆಸ್ಟ್​​ನಲ್ಲಿ ನ್ಯೂಜಿಲ್ಯಾಂಡ್​ನ ವಿಕೆಟ್​ ಕೀಪರ್ ಬ್ಯಾಟರ್​ ಟಿಮ್ ಸೀಫರ್ಟ್​​ ಪಾಸಿಟಿವ್ ಪಡೆದಿದ್ದಾರೆ. ಇದು ಡೆಲ್ಲಿ ಕ್ಯಾಂಪಟ್​ನಲ್ಲಿ ಕಂಡುಬಂದ 6ನೇ ಕೋವಿಡ್​ 19 ಪ್ರಕರಣವಾಗಿದೆ. ಬ್ರಬೋರ್ನ್​ನಲ್ಲಿ ಇಂದು ಸಂಜೆ ಪಂದ್ಯ ನಡೆಯುವುದಕ್ಕೂ ಮುನ್ನ ಬಿಸಿಸಿಐ ಮತ್ತೊಂದು ಸುತ್ತಿನ ಪರೀಕ್ಷೆ ನಡೆಸಲಿದೆ ಎಂದು ತಿಳಿದುಬಂದಿದೆ.

ಬ್ರಬೋರ್ನ್​ ಸ್ಟೇಡಿಯಂನಲ್ಲಿ ಆಡಲಿರುವ ಎಲ್ಲಾ ಆಟಗಾರರಿಗೂ ಸಂಜೆ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸುವಂತೆ ಬಿಸಿಸಿಐ ಡೆಲ್ಲಿ ಕ್ಯಾಪಿಟಲ್ಸ್​ಗೆ ಮಾಹಿತಿ ನೀಡಿದೆ. ಎಲ್ಲಾ ಆಟಗಾರರನ್ನು ತಮ್ಮ ರೂಮಿನಲ್ಲಿರಲು ತಿಳಿಸಲಾಗಿದ್ದು, ಆಟಗಾರರ ಕೊಠಡಿಗೆ ತೆರಳಿ ಪರೀಕ್ಷೆ ಮಾಡಲು ಬಿಸಿಸಿಐ ಯೋಜನೆ ರೂಪಿಸಿದೆ. ಈ ಪರೀಕ್ಷೆಯಲ್ಲಿ ನೆಗೆಟಿವ್ ಬಂದವರು ಪಂಜಾಬ್​ ವಿರುದ್ಧ ಕಣಕ್ಕಿಳಿಯಲಿದ್ದಾರೆ.

ಐಪಿಎಲ್ ನಿಯಮಗಳ ಪ್ರಕಾರ ಕಡಿಮೆ ಅಂದರೂ 7 ಭಾರತೀಯ ಆಟಗಾರರು ಸೇರಿದಂತೆ ತಂಡದಲ್ಲಿ 12 ಆಟಗಾರು ಇದ್ದರೆ ಮಾತ್ರ ಪಂದ್ಯ ವೇಳಾಪಟ್ಟಿಯಂತೆ ನಡೆಯಲಿದೆ. ಒಂದು ವೇಳೆ 12 ಆಟಗಾರರ ತಂಡ ಮಾಡಲು ಸಾಧ್ಯವಾಗದಿದ್ದರೆ ಪಂದ್ಯವನ್ನು ಮುಂದೂಡಬಹುದಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್-ಪಂಜಾಬ್ ಕಿಂಗ್ಸ್ ಪಂದ್ಯ ವೇಳಾಪಟ್ಟಿಯಂತೆ ಪುಣೆಯ ಮಹಾರಾಷ್ಟ್ರ ಕ್ರಿಕೆಟ್​ ಅಸೋಸಿಯೇಷನ್​​ ಸ್ಟೇಡಿಯಂನಲ್ಲಿ ನಡೆಯಬೇಕಿತ್ತು. ಆದರೆ ದೀರ್ಘ ಪ್ರಯಾಣದ ಸಂದರ್ಭದಲ್ಲಿ ಕೋವಿಡ್​ ವೈರಸ್​ ಹರಡುವುದನ್ನು ತಡೆಯುವ ಸಲುವಾಗಿ ಮುನ್ನೆಚ್ಚರಿಕೆಯ ಕ್ರಮವಾಗಿ ಪಂದ್ಯವನ್ನು ಬ್ರೆಬೋರ್ನ್​ ಸ್ಟೇಡಿಯಂಗೆ ಸ್ಥಳಾಂತರಿಸಲಾಗಿತ್ತು.

ಇದನ್ನೂ ಓದಿ:ಟಿ20ಯಲ್ಲಿ ವೇಗದ 6000 ರನ್​: ವಿರಾಟ್​ ಕೊಹ್ಲಿ ದಾಖಲೆ ಮುರಿದ ಕೆ.ಎಲ್.ರಾಹುಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.