ಬ್ರಿಡ್ಜ್‌ಟೌನ್ (ವೆಸ್ಟ್ ಇಂಡೀಸ್): ಹಿರಿಯ ವೇಗದ ಬೌಲಿಂಗ್ ಆಲ್‌ರೌಂಡರ್ ಆಂಡ್ರೆ ರಸೆಲ್ ಅವರು ಮುಂದಿನ ವಾರ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ವೆಸ್ಟ್ ಇಂಡೀಸ್‌ನ ಟಿ20 ತಂಡಕ್ಕೆ ಮರಳಿದ್ದಾರೆ. 2021ರ ಯುಎಇಯಲ್ಲಿ ನಡೆದ ಪುರುಷರ ಟಿ20 ವಿಶ್ವಕಪ್ ನಂತರ ಮೊದಲ ಬಾರಿಗೆ ರಸೆಲ್ ರಾಷ್ಟ್ರೀಯ ತಂಡದ ಚುಟುಕು ಮಾದರಿಯ ಕ್ರಿಕೆಟ್ನಲ್ಲಿ ಆಡುತ್ತಿದ್ದಾರೆ.
ರಸೆಲ್ ಮಂಗಳವಾರ ಬ್ರಿಡ್ಜ್‌ಟೌನ್‌ನಲ್ಲಿ ನಡೆಯಲಿರುವ ಮೊದಲ ಟಿ20ಗೆ ಮುಂಚಿತವಾಗಿ ವೆಸ್ಟ್ ಇಂಡೀಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ. 2024ರ ವಿಶ್ವಕಪ್ ತಯಾರಿ ಹಿನ್ನೆಲೆಯಲ್ಲಿ ಇಂಗ್ಲೆಂಡ್ 5ಟಿ 20 ಪಂದ್ಯಗಳ ಸರಣಿಯನ್ನು ಆಡುತ್ತಿದೆ. ಬಾರ್ಬಡೋಸ್ನಲ್ಲಿ 1, ಗ್ರೆನಡಾದಲ್ಲಿ 2 ಮತ್ತು ಟ್ರಿನಿಡಾಡ್ನಲ್ಲಿ 2 ಟಿ20 ಪಂದ್ಯಗಳು ನಡೆಯಲಿದೆ. ಇದಕ್ಕೂ ಮುಂಚಿತವಾಗಿ ನಡೆದ ಏಕದಿನ ಸರಣಿಯನ್ನು ವಿಂಡೀಸ್ 2-1 ರಿಂದ ಗೆದ್ದುಕೊಂಡಿದೆ.
-
Squad revealed for West Indies T2️⃣ 0️⃣I Series vs England🏏🌴#WIHomeforChristmas #WIvENG pic.twitter.com/b5Cs9wYeC7
— Windies Cricket (@windiescricket) December 9, 2023 " class="align-text-top noRightClick twitterSection" data="
">Squad revealed for West Indies T2️⃣ 0️⃣I Series vs England🏏🌴#WIHomeforChristmas #WIvENG pic.twitter.com/b5Cs9wYeC7
— Windies Cricket (@windiescricket) December 9, 2023Squad revealed for West Indies T2️⃣ 0️⃣I Series vs England🏏🌴#WIHomeforChristmas #WIvENG pic.twitter.com/b5Cs9wYeC7
— Windies Cricket (@windiescricket) December 9, 2023
2012 ಮತ್ತು 2016 ಟಿ20 ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ ತಂಡದ ಸದಸ್ಯರಾಗಿದ್ದ ರಸ್ಸೆಲ್ ಒಟ್ಟು 67 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ. ಆಲ್‌ರೌಂಡರ್ ಮ್ಯಾಥ್ಯೂ ಫೋರ್ಡ್ ಅವರು ಏಕದಿನ ಸರಣಿಯ ನಂತರ ಟಿ20 ತಂಡದಲ್ಲೂ ಮುಂದುವರೆದಿದ್ದಾರೆ. ಫೋರ್ಡ್ಗೆ ಇದು ಚೊಚ್ಚಲ ಅಂತಾರಾಷ್ಟ್ರೀಯ ಸರಣಿಯಾಗಿದೆ. ಆಲ್‌ರೌಂಡರ್ ಶೆರ್ಫೇನ್ ರುದರ್‌ಫೋರ್ಡ್ ಸಹ 2020ರ ನಂತರ ಮತ್ತೆ ಟಿ20 ಸ್ವರೂಪದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಇನ್ನು ಏಕದಿನ ಸರಣಿಯಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದ ಎಡಗೈ ಸ್ಪಿನ್ನರ್ ಗುಡಾಕೇಶ್ ಮೋಟಿ, ನಿಕೋಲಸ್ ಪೂರನ್ ಮತ್ತು ಜೇಸನ್ ಹೋಲ್ಡರ್ ಮುಂದುವರೆದಿದ್ದಾರೆ. ರೋವ್‌ಮನ್ ಪೊವೆಲ್ ಟಿ20 ನಾಯಕರಾದರೆ, ಏಕದಿನ ಕ್ಯಾಪ್ಟನ್ ಶಾಯ್ ಹೋಪ್ ಉಪನಾಯಕರಾಗಿದ್ದಾರೆ. ಈ ವರ್ಷದ ಆಗಸ್ಟ್‌ನಲ್ಲಿ ಭಾರತ ವಿರುದ್ಧದ ಸರಣಿಯಲ್ಲಿ ಆಡಿದ್ದ ಜಾನ್ಸನ್ ಚಾರ್ಲ್ಸ್, ಓಬೆಡ್ ಮೆಕಾಯ್, ಓಡಿಯನ್ ಸ್ಮಿತ್ ಮತ್ತು ಒಶಾನೆ ಥಾಮಸ್ ತಂಡದಿಂದ ಹೊರಗುಳಿದಿದ್ದಾರೆ.
ವಿಂಡೀಸ್ ಕ್ರಿಕೆಟ್ ತಂಡದ ಆಯ್ಕೆಗಾರ ಡೆಸ್ಮಂಡ್ ಹೇನ್ಸ್, "2023ರಲ್ಲಿ ವೆಸ್ಟ್ ಇಂಡೀಸ್‌ಗೆ ಅಂತಿಮ ಸ್ವದೇಶಿ ಟಿ20 ಸರಣಿಯಾಗಿದೆ. ಜೂನ್ 2024ರಲ್ಲಿ ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ನಲ್ಲಿ ಐಸಿಸಿ ಪುರುಷರ ಟಿ20 ವಿಶ್ವಕಪ್‌ಗಾಗಿ ಉಭಯ ತಂಡಗಳು ತಯಾರಿ ನಡೆಸುತ್ತಿದೆ. ವಿಶ್ವಕಪ್ ಉದ್ದೇಶದಿಂದ ಉತ್ತಮ ತಂಡವನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.
ವೆಸ್ಟ್ ಇಂಡೀಸ್ ತಂಡ: ರೋವ್‌ಮನ್ ಪೊವೆಲ್ (ನಾಯಕ), ಶಾಯ್ ಹೋಪ್ (ಉಪನಾಯಕ), ರೋಸ್ಟನ್ ಚೇಸ್, ಮ್ಯಾಥ್ಯೂ ಫೋರ್ಡ್, ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ಅಕೆಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಗುಡಕೇಶ್ ಮೋಟಿ, ನಿಕೋಲಸ್ ಪೂರನ್ ಮತ್ತು , ಶೆರ್ಫೇನ್ ರುದರ್ಫೋರ್ಡ್ ಮತ್ತು ರೊಮಾರಿಯೋ ಶೆಫರ್ಡ್
ಇದನ್ನೂ ಓದಿ: 1ನೇ ಟಿ20: ಬಲಿಷ್ಠ ಹರಿಣ ಪಡೆ ವಿರುದ್ಧ ಗೆಲುವು ದಾಖಲಿಸುತ್ತಾ ಯುವ ಭಾರತ?