ಮುಂಬೈ(ಮಹಾರಾಷ್ಟ್ರ): ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧದ ಏಕೈಕ ಟೆಸ್ಟ್ ಪಂದ್ಯವನ್ನು ಭಾರತ ಮಹಿಳಾ ತಂಡ ಗೆದ್ದುಕೊಂಡಿತು. ಇದು ಆಸ್ಟ್ರೇಲಿಯಾದ ವಿರುದ್ಧದ ಭಾರತದ ವನಿತೆಯರ ಮೊದಲ ಗೆಲುವಾಗಿದೆ. ತಂಡದ ಆಟಗಾರ್ತಿಯರ ಸಂಭ್ರಮದಲ್ಲಿ ಆಸ್ಟ್ರೇಲಿಯಾ ನಾಯಕಿ ಅಲಿಸ್ಸಾ ಹೀಲಿ ಕೂಡಾ ಪಾಲ್ಗೊಂಡು ಗಮನ ಸೆಳೆದರು.
-
Alyssa Healy, what a woman 🫶#INDvAUS pic.twitter.com/x4ZzAYjRU8
— Australian Women's Cricket Team 🏏 (@AusWomenCricket) December 24, 2023 " class="align-text-top noRightClick twitterSection" data="
">Alyssa Healy, what a woman 🫶#INDvAUS pic.twitter.com/x4ZzAYjRU8
— Australian Women's Cricket Team 🏏 (@AusWomenCricket) December 24, 2023Alyssa Healy, what a woman 🫶#INDvAUS pic.twitter.com/x4ZzAYjRU8
— Australian Women's Cricket Team 🏏 (@AusWomenCricket) December 24, 2023
ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ ಆಲ್‌ರೌಂಡರ್ ತಹ್ಲಿಯಾ ಮೆಕ್‌ಗ್ರಾತ್ (50), ಬೆತ್ ಮೂನಿ (40) ಮತ್ತು ಹೀಲಿ (38) ಅವರ ಇನ್ನಿಂಗ್ಸ್ ಬಲದಿಂದ ತಂಡ 219 ರನ್‌ಗಳಿಸಿ ಆಲೌಟಾಯಿತು. ಭಾರತದ ಪರ ಪೂಜಾ ವಸ್ತ್ರಾಕರ್ (4/53), ಸ್ನೇಹ ರಾಣಾ (3/56) ಮತ್ತು ದೀಪ್ತಿ ಶರ್ಮಾ (2/45) ಯಶಸ್ವಿ ಬೌಲಿಂಗ್ ಮಾಡಿದರು.
ಭಾರತ ಮೊದಲ ಇನಿಂಗ್ಸ್‌ನಲ್ಲಿ 406 ರನ್ ಗಳಿಸಿ ಆಲೌಟಾಯಿತು. ಈ ಮೂಲಕ 187 ರನ್‌ಗಳ ಮುನ್ನಡೆ ಸಾಧಿಸಿತು. ಶಫಾಲಿ ವರ್ಮಾ (40) ಮತ್ತು ಸ್ಮೃತಿ ಮಂಧಾನ (74) ಉತ್ತಮ ಆರಂಭ ನೀಡಿದರು. ಮಧ್ಯಮ ಕ್ರಮಾಂಕ ಮತ್ತು ಕೆಳ ಕ್ರಮಾಂಕದಲ್ಲಿ ರಿಚಾ ಘೋಷ್ (52), ಜೆಮಿಮಾ ರಾಡ್ರಿಗಸ್ (73), ದೀಪ್ತಿ ಶರ್ಮಾ (78) ಅರ್ಧಶತಕ ಗಳಿಸಿದರೆ, ವಸ್ತ್ರಾಕರ್ 47 ರನ್ ಗಳಿಸಿ ತಂಡಕ್ಕೆ ಕೊಡುಗೆ ನೀಡಿದರು. ಆಸೀಸ್ ಪರ ಆಶ್ಲೀಗ್ ಗಾರ್ಡ್ನರ್ 4 ಮತ್ತು ಕಿಮ್ ಗಾರ್ತ್, ಜೆಸ್ ಜೊನಾಸೆನ್ ತಲಾ ಎರಡು ವಿಕೆಟ್ ಪಡೆದರು.
ಎರಡನೇ ಇನ್ನಿಂಗ್ಸ್‌ನಲ್ಲಿ ಆಸೀಸ್ 261ಕ್ಕೆ ಆಲೌಟಾಯಿತು. ಇದರಿಂದ ಕೇವಲ 74 ರನ್‌ಗಳ ಗುರಿಯನ್ನು ಭಾರತಕ್ಕೆ ನೀಡಿತು. ಈ ಇನ್ನಿಂಗ್ಸ್‌ನಲ್ಲಿ ಮೆಕ್‌ಗ್ರಾತ್ (73), ಎಲ್ಲಿಸ್ ಪೆರ್ರಿ (45), ಮೂನಿ (33) ಮತ್ತು ಹೀಲಿ (32) ಗಮನಾರ್ಹ ಪ್ರದರ್ಶನ ನೀಡಿದರು. ಮತ್ತೆ ಸ್ನೇಹಾ ರಾಣಾ (4/63) ಆಸ್ಟ್ರೇಲಿಯಾವನ್ನು ಕಾಡಿದರು. ಅವರೊಂದಿಗೆ ರಾಜೇಶ್ವರಿ ಗಾಯಕ್ವಾಡ್, ನಾಯಕಿ ಹರ್ಮನ್‌ಪ್ರೀತ್ ಕೌರ್ ಎರಡು ವಿಕೆಟ್‌ಗಳನ್ನು ಕಬಳಿಸಿದರು.
-
We ❤️ @ahealy77 pic.twitter.com/H1oZFta20v
— Australian Women's Cricket Team 🏏 (@AusWomenCricket) December 24, 2023 ." class="align-text-top noRightClick twitterSection" data="
.">We ❤️ @ahealy77 pic.twitter.com/H1oZFta20v
— Australian Women's Cricket Team 🏏 (@AusWomenCricket) December 24, 2023
.We ❤️ @ahealy77 pic.twitter.com/H1oZFta20v
— Australian Women's Cricket Team 🏏 (@AusWomenCricket) December 24, 2023
ಭಾರತ ಎರಡು ವಿಕೆಟ್ ಕಳೆದುಕೊಂಡರೂ 75 ರನ್ ಗುರಿ ಸಾಧಿಸಿತು. ಸ್ಮೃತಿ ಅವರ ಅಜೇಯ 38 ರನ್ ತಂಡಕ್ಕೆ ವರ್ಷದ ಎರಡನೇ ಟೆಸ್ಟ್ ಗೆಲುವು ತಂದುಕೊಟ್ಟಿತು. ವಾರಗಳ ಹಿಂದೆ ಇಂಗ್ಲೆಂಡ್ ವಿರುದ್ಧ ಇದೇ ತಂಡ 347 ರನ್‌ಗಳ ದೊಡ್ಡ ಗೆಲುವು ದಾಖಲಿಸಿತ್ತು. ಈ ಪಂದ್ಯದಲ್ಲಿ 7 ವಿಕೆಟ್ ಪಡೆದು ಮಿಂಚಿದ ಸ್ನೇಹಾ ರಾಣಾ 'ಪಂದ್ಯಶ್ರೇಷ್ಠ' ಪ್ರಶಸ್ತಿಗೆ ಭಾಜನರಾದರು.
ಇದನ್ನೂ ಓದಿ: IND vs SA Test: ದಕ್ಷಿಣ ಆಫ್ರಿಕಾ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್, ತಂಡ ಸೇರಿದ ವಿರಾಟ್ ಕೊಹ್ಲಿ