ETV Bharat / sports

ನಾಳೆಯಿಂದ ವಿಶ್ವಕಪ್​ ಮಹಾಸಮರ.. 15 ವರ್ಷಗಳ ಬಳಿಕ ಭಾರತಕ್ಕೆ ಒಲಿಯುತ್ತಾ ಕಿರೀಟ

author img

By

Published : Oct 15, 2022, 12:49 PM IST

Updated : Oct 15, 2022, 1:20 PM IST

ಚುಟುಕು ವಿಶ್ವಕಪ್​ ಮಹಾಸಮರ ನಾಳೆಯಿಂದ ಆರಂಭವಾಗಲಿದ್ದು, ಇದಕ್ಕಾಗಿ ಆಸ್ಟ್ರೇಲಿಯಾ ಭೂಮಿಕೆ ಸಿದ್ಧ ಮಾಡಿದೆ. ಒಟ್ಟು 12 ತಂಡಗಳು ಮಹಾಸಮರದಲ್ಲಿ ಕಾದಾಡಲಿವೆ.

t20 world cup
ನಾಳೆಯಿಂದ ವಿಶ್ವಕಪ್​ ಮಹಾಸಮರ

ಟಿ20, ಕ್ರಿಕೆಟ್​ ಪ್ರೇಮಿಗಳಿಗೆ ರಸದೌತಣ ನೀಡುವ ಹಬ್ಬ. ಅಭಿಮಾನಿಗಳನ್ನು ತುದಿಗಾಲ ಮೇಲೆ ನಿಲ್ಲಿಸಿರುವ ಚುಟುಕು ಮಾದರಿಯ ವಿಶ್ವಕಪ್​ಗೆ ನಾಳೆಯಿಂದ ಆಸ್ಟ್ರೇಲಿಯಾದಲ್ಲಿ ವಿದ್ಯುಕ್ತ ಚಾಲನೆ ಸಿಗಲಿದೆ. ವಿಶ್ವಕಪ್​ ಕಾದಾಟಕ್ಕೆ ಆಸ್ಟ್ರೇಲಿಯಾದಲ್ಲಿ ಭೂಮಿಕೆ ಸಿದ್ಧವಾಗಿದ್ದು, ಅದಕ್ಕೂ ಮೊದಲು ಇಂದು ಕ್ಯಾಪ್ಟನ್​ ಡೇ ಕಾರ್ಯಕ್ರಮದಲ್ಲಿ 16 ತಂಡಗಳ ಎಲ್ಲ ನಾಯಕರು ಒಂದೇ ಫ್ರೇಮ್​​​ನಲ್ಲಿ ವಿಶ್ವಕಪ್​ ಟ್ರೋಫಿ ಜೊತೆಗೆ ಪೋಸ್​ ನೀಡಿದರು.

ಬಳಿಕ ಮಾಧ್ಯಮದವರೊಂದಿಗೆ ಸಂವಾದ ನಡೆಸಿ, ಮೆಗಾ ಟೂರ್ನ್​ಮೆಂಟ್‌ಗೆ ಹೇಗೆ ತಯಾರಿ ನಡೆಸಿದ್ದೇವೆ ಎಂದು ಹಂಚಿಕೊಂಡರು. ಎಲ್ಲ ನಾಯಕರುಳ್ಳ ಫೋಟೋವನ್ನು ಐಸಿಸಿ ತನ್ನ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. "ಒಂದೇ ಫ್ರೇಮ್​​​​ನಲ್ಲಿ 16 ನಾಯಕರು" ಎಂದು ಬರೆದುಕೊಂಡಿದ್ದು, ನಾಯಕರು ಸೆಲ್ಫಿ ತೆಗೆದುಕೊಂಡ ಫೋಟೋ ಕೂಡ ಇದೆ.

ಎಲ್ಲ ತಂಡಗಳ ನಾಯಕರ ಸೆಲ್ಫಿ
ಎಲ್ಲ ತಂಡಗಳ ನಾಯಕರ ಸೆಲ್ಫಿ

ಬಲಿಷ್ಠ ತಂಡವಾಗಿ ವಿಶ್ವಕಪ್​ಗೆ ಎಂಟ್ರಿ ಕೊಟ್ಟಿರುವ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಕೂಡ ತಂಡದ ತಯಾರಿ ಬಗ್ಗೆ ಮಾತನಾಡಿದರು. ಪಾಕಿಸ್ತಾನದ ಜೊತೆ ಕಣಕ್ಕಿಳಿಯುವ ಮೂಲಕ ವಿಶ್ವಕಪ್​ ಅಭಿಯಾನ ಆರಂಭಿಸುವ ಬಗ್ಗೆಯೂ ಅಭಿಪ್ರಾಯ ಹಂಚಿಕೊಂಡರು.

ನಾಳೆಯಿಂದ ಅರ್ಹತಾ ಸುತ್ತಿನ ಪಂದ್ಯಗಳು: ವಿಶ್ವಕಪ್​ಗಾಗಿ ಒಟ್ಟಾರೆ 12 ತಂಡಗಳು ಕಾದಾಟ ನಡೆಸಲಿವೆ. ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್​, ಬಾಂಗ್ಲಾದೇಶ, ಭಾರತ, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಈಗಾಗಲೇ ಸೂಪರ್-12 ಗೆ ಅರ್ಹತೆ ಪಡೆದಿವೆ.

ಅರ್ಹತಾ ಸುತ್ತಿನಲ್ಲಿ ಎ ಗುಂಪಿನಲ್ಲಿರುವ ನಮೀಬಿಯಾ, ನೆದರ್ಲೆಂಡ್ಸ್, ಶ್ರೀಲಂಕಾ, ಯುಎಇ ತಂಡಗಳು ಮತ್ತು ಬಿ ಗುಂಪಿನಲ್ಲಿರುವ ಐರ್ಲೆಂಡ್, ಸ್ಕಾಟ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ತಂಡಗಳು ಸೆಣಸಾಡಿ, ಇದರಲ್ಲಿ ಅಗ್ರ ನಾಲ್ಕು ತಂಡಗಳು ಸೂಪರ್​ 12 ಪ್ರವೇಶಿಸಲಿವೆ. ಪ್ರತಿ ತಂಡ ಗುಂಪಿನಲ್ಲಿರುವ ಉಳಿದ ಮೂರು ತಂಡಗಳ ವಿರುದ್ಧ ಒಂದು ಪಂದ್ಯ ಆಡಲಿವೆ. ಕೊನೆಯಲ್ಲಿ ಪ್ರತಿ ಗುಂಪಿನಲ್ಲಿ ಅಗ್ರ ಎರಡು ತಂಡಗಳು ಸೂಪರ್-12 ನಲ್ಲಿ ಆಡುವ ಅವಕಾಶವನ್ನು ಪಡೆಯುತ್ತವೆ.

22 ರಿಂದ ಸೂಪರ್​ 12 ಪಂದ್ಯಗಳು: ನಾಳೆಯಿಂದ ಶುರುವಾಗುವ ಅರ್ಹತಾ ಸುತ್ತಿನ ಪಂದ್ಯಗಳು ಮುಕ್ತಾಯದ ಬಳಿಕ ಅ.22 ರಿಂದ ಸೂಪರ್-12 ಪಂದ್ಯಗಳು ಆರಂಭವಾಗಲಿವೆ. ವಿಶ್ವಕಪ್​ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿ ಆಸ್ಟ್ರೇಲಿಯಾಕ್ಕೆ ಜಿಗಿದಿರುವ ಭಾರತ 2007ರ ಬಳಿಕ ಮತ್ತೆ ಚುಟುಕು ಮಾದರಿಯ ವಿಶ್ವಕಪ್​ ಎತ್ತಿ ಹಿಡಿಯಲಿ ಎಂದು ಆಲ್​ ದ ಬೆಸ್ಟ್​ ಹೇಳೋಣ.

ಓದಿ: ಟಿ20 ವಿಶ್ವಕಪ್‌ 2022ಗೆ ಬುಮ್ರಾ ಬದಲಿಗೆ ಶಮಿ ಫಿಕ್ಸ್​.. ಬಿಸಿಸಿಐ ಕನ್ಫರ್ಮ್​

Last Updated : Oct 15, 2022, 1:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.