ಮುಂಬೈ: ನ್ಯೂಜಿಲ್ಯಾಂಡ್ ತಂಡವನ್ನು ಕೇವಲ 62 ರನ್ಗಳಿಗೆ ಆಲೌಟ್ ಮಾಡಿರುವ ಭಾರತ 2ನೇ ಇನ್ನಿಂಗ್ಸ್ನಲ್ಲಿ ವಿಕೆಟ್ ನಷ್ಟವಿಲ್ಲದೆ 69 ರನ್ಗಳಿಸುವ ಮೂಲಕ ಅತ್ಯುತ್ತಮ ಆರಂಭ ಪಡೆದಿದೆ. ಮೊದಲ ಇನ್ನಿಂಗ್ಸ್ನ 263 ರನ್ಗಳ ಮುನ್ನಡೆ ಸೇರಿದಂತೆ ಒಟ್ಟಾರೆ 332 ರನ್ಗಳ ಬೃಹತ್ ಮುನ್ನಡೆ ಸಾಧಿಸಿದೆ.
ಮೊದಲ ದಿನ 4 ವಿಕೆಟ್ ಕಳೆದುಕೊಂಡು 221 ರನ್ಗಳಿಸಿದ್ದ ಭಾರತ ಶನಿವಾರ ಆ ಮೊತ್ತವನ್ನು 325ಕ್ಕೇರಿಸಿ ಆಲೌಟ್ ಆಯಿತು. ಮಯಾಂಕ್ ಅಗರ್ವಾಲ್ 150 ಮತ್ತು ಅಕ್ಷರ್ ಪಟೇಲ್ 52 ರನ್ಗಳಿಸಿದ್ದರು. ನ್ಯೂಜಿಲ್ಯಾಂಡ್ ಪರ ಭಾರತೀಯ ಮೂಲದ ಅಜಾಜ್ ಪಟೇಲ್ ವಿಶ್ವದಾಖಲೆಯ 10 ವಿಕೆಟ್ ಪಡೆದಿದ್ದರು.
-
That's Stumps on Day 2 of the 2nd @Paytm #INDvNZ Test in Mumbai!
— BCCI (@BCCI) December 4, 2021 " class="align-text-top noRightClick twitterSection" data="
A superb show with bat & ball from #TeamIndia! 👏 👏
We will be back for the Day 3 action tomorrow.
Scorecard ▶️ https://t.co/CmrJV47AeP pic.twitter.com/8BhB6LpZKg
">That's Stumps on Day 2 of the 2nd @Paytm #INDvNZ Test in Mumbai!
— BCCI (@BCCI) December 4, 2021
A superb show with bat & ball from #TeamIndia! 👏 👏
We will be back for the Day 3 action tomorrow.
Scorecard ▶️ https://t.co/CmrJV47AeP pic.twitter.com/8BhB6LpZKgThat's Stumps on Day 2 of the 2nd @Paytm #INDvNZ Test in Mumbai!
— BCCI (@BCCI) December 4, 2021
A superb show with bat & ball from #TeamIndia! 👏 👏
We will be back for the Day 3 action tomorrow.
Scorecard ▶️ https://t.co/CmrJV47AeP pic.twitter.com/8BhB6LpZKg
ಭಾರತದಲ್ಲಿ ಅತ್ಯಂತ ಕಡಿಮೆ ಮೊತ್ತಕ್ಕೆ ಕಿವೀಸ್ ಆಲೌಟ್
325 ರನ್ಗಳನ್ನು ಹಿಂಬಾಲಿಸಿ ನ್ಯೂಜಿಲ್ಯಾಂಡ್ ತಂಡ ಕೇವಲ 28.1 ಓವರ್ಗಳಲ್ಲಿ 62 ರನ್ಗಳಿಗೆ ಸರ್ವಪತನಕಂಡಿತು. ಈ ಮೂಲಕ ಭಾರತದ ನೆಲದಲ್ಲಿ ಅತ್ಯಂತ ಕಡಿಮೆ ಮೊತ್ತ ದಾಖಲಿಸಿತು. ಕೈಲ್ ಜೇಮಿಸನ್(17) ಮತ್ತು ಟಾಮ್ ಲೇಥಮ್(10) ಮಾತ್ರ ಎರಡಂಕಿ ಮೊತ್ತ ದಾಖಲಿಸಿದರು.
ಡೇರಿಲ್ ಮಿಚೆಲ್(8), ವಿಲ್ ಯಂಗ್(4) ರಾಸ್ ಟೇಲರ್(1), ರಚಿನ್ ರವೀಂದ್ರ(4), ಹೆನ್ರಿ ನಿಕೋಲ್ಸ್(7), ಟಾಮ್ ಬ್ಲೆಂಡೆಲ್(8), ಸೌಥಿ(0)ಸಮರ್ವಿಲ್(0) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.
ಭಾರತದ ಪರ ಮೊಹಮ್ಮದ್ ಸಿರಾಜ್ 19ಕ್ಕೆ 3, ರವಿಚಂದ್ರನ್ ಅಶ್ವಿನ್ 8ಕ್ಕೆ4, ಅಕ್ಷರ್ ಪಟೇಲ್ 14ಕ್ಕೆ2 ಮತ್ತು ಜಯಂತ್ ಯಾದವ್ 13ಕ್ಕೆ1 ವಿಕೆಟ್ ಪಡೆದರು.
ಎರಡನೇ ಇನ್ನಿಂಗ್ಸ್ನಲ್ಲಿ ವಿಕೆಟ್ ನಷ್ಟವಿಲ್ಲದೆ 69:
263 ರನ್ಗಳ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ನಲ್ಲಿ ಆರಂಭಿಸಿದ ಭಾರತ ವಿಕೆಟ್ ನಷ್ಟವಿಲ್ಲದೆ 69 ರನ್ಗಳಿಸುವ ಮೂಲಕ ಆರಂಭ ಪಡೆದುಕೊಂಡು ಒಟ್ಟಾರೆ 332 ರನ್ಗಳ ಮುನ್ನಡೆ ಪಡೆದುಕೊಂಡಿದೆ. ಮಯಾಂಕ್ ಅಜೇಯ38 ಮತ್ತು ಪೂಜಾರ ಅಜೇಯ 29 ರನ್ಗಳಿಸಿದ್ದಾರೆ.
ಇದನ್ನೂ ಓದಿ:ಗಿಲ್ ಯಾವುದೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಲ್ಲ ತಂತ್ರಗಾರಿಕೆ ಹೊಂದಿದ್ದಾರೆ: ತೆಂಡೂಲ್ಕರ್ ಪ್ರಶಂಸೆ