ಜೋಹನ್ಸ್ಬರ್ಗ್ : ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಕೋವಿಡ್ 19 ಮುನ್ನೆಚ್ಚರಿಕೆ ಕಾರಣದಿಂದ 4 ದಿನಗಳ ಟೂರ್ನಮೆಂಟ್ ಅನ್ನು ಮುಂದೂಡಿರುವುದಾಗಿ ಭಾನುವಾರ ಘೋಷಣೆ ಮಾಡಿದೆ.
ಕ್ರಿಕೆಟ್ ದಕ್ಷಿಣ ಆಫ್ರಿಕಾ(CSA) ಭಾರತದ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಗೆ ಕೇವಲ ಒಂದು ವಾರ ಇರುವಾಗ ತನ್ನ ಪ್ರಮುಖ ಪ್ರಥಮ ದರ್ಜೆ ಟೂರ್ನೆಮೆಂಟ್ ಮುಂದೂಡಿರುವುದಾಗಿ ಪ್ರಕಟಣೆ ಹೊರಡಿಸಿದೆ.
ಕಳೆದ ಕೆಲವು ವಾರಗಳಿಂದ ಕೋವಿಡ್ 19 ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಮಂಡಳಿ ತಿಳಿಸಿದೆ. ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಬಯೋಬಬಲ್ ಹೊರಗೆ ಡಿಸೆಂಬರ್ 16-19 ಮತ್ತು ಡಿಸೆಂಬರ್ 19-22 ನಡುವೆ ನಡೆಯಬೇಕಿದ್ದ ಐದನೇ ಸುತ್ತಿನ ಡೊಮೆಸ್ಟಿಕ್ ಪಂದ್ಯಗಳನ್ನು ಮುಂದೂಡುವ ನಿರ್ಧಾರವನ್ನು ಕ್ರಿಕೆಟ್ ದಕ್ಷಿಣ ಆಫ್ರಿಕಾ ಆಟಗಾರರ ಆರೋಗ್ಯ ಸುರಕ್ಷತೆಯ ಕಾರಣ ಮುಂದೂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಮುಂದೂಡಿರುವ ನಾಲ್ಕನೇ ಸುತ್ತಿನ ಪ್ರಥಮ ದರ್ಜೆ ಪಂದ್ಯಗಳ ಮರು ವೇಳಾಪಟ್ಟಿಯನ್ನು ಹೊಸ ವರ್ಷದಲ್ಲಿ ಪ್ರಕಟಿಸಲಾಗುವುದು ಎಂದು ಬೋರ್ಡ್ ಹೇಳಿದೆ. ದಕ್ಷಿಣ ಆಫ್ರಿಕಾದಲ್ಲಿ ಪ್ರಸ್ತುತ 4ನೇ ಅಲೆಯ ಕೊರೊನಾ ಬಿಕ್ಕಟ್ಟು ತಲೆದೂರಿದೆ. ಕಳೆದ ತಿಂಗಳು ಇಲ್ಲಿಯೇ ಮೊದಲ ಒಮಿಕ್ರಾನ್ ಪ್ರಕರಣ ದಾಖಲಾಗಿದ್ದು, ಹಲವಾರು ಕ್ರೀಡಾಕೂಟಗಳು ರದ್ದಾಗಿವೆ.
ಇದನ್ನೂ ಓದಿ: 2ನೇ ಆ್ಯಶಸ್ ಟೆಸ್ಟ್ : ಇಂಗ್ಲೆಂಡ್ 468 ರನ್ಗಳ ಬೃಹತ್ ಗುರಿ ನೀಡಿ ಆಸ್ಟ್ರೇಲಿಯಾ