ನವದೆಹಲಿ : ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್ ಧೋನಿ ದೇಶಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟಿಗರಲ್ಲಿ ಒಬ್ಬರು. ತಮ್ಮ ಅದ್ಭುತ ಬ್ಯಾಟಿಂಗ್ ಮತ್ತು ಕೀಪಿಂಗ್ ಮೂಲಕ ಮಿಂಚು ಹರಿಸುವ ಎಂ.ಎಸ್ ಧೋನಿ ಎಂದರೆ ಕೋಟ್ಯಂತರ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಧೋನಿ ಕ್ರೀಸಿನಲ್ಲಿದ್ದರಂತೂ ಅಭಿಮಾನಿಗಳು ಧೋನಿ ಬ್ಯಾಟಿನಿಂದ ಸಿಕ್ಸರ್ ಸಿಡಿಯುವ ಕ್ಷಣಕ್ಕಾಗಿ ಕಾದು ಕುಳಿತಿರುತ್ತಾರೆ.
ಬುಧವಾರ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಚೆನ್ನೈ ಭರ್ಜರಿ ಜಯ ಸಾಧಿಸಿದೆ. ಅಲ್ಪ ಮೊತ್ತವನ್ನು ಬೆನ್ನಟ್ಟಿದ ವಾರ್ನರ್ ಪಡೆ 27 ರನ್ಗಳಿಂದ ಸೋಲನ್ನು ಅನುಭವಿಸಿತು. ಈ ಪಂದ್ಯದಲ್ಲಿ ಚೆನ್ನೈ ಪರ ಧೋನಿ 9 ಎಸೆತಗಳಲ್ಲಿ 20 ರನ್ ಗಳಿಸಿದ್ದರು. ಪಂದ್ಯದ ಬಳಿಕ ಧೋನಿ ಮೈದಾನದಲ್ಲಿದ್ದಾಗ ಮಗಳು ಜೀವಾ ತಂದೆಯನ್ನು ಭೇಟಿ ಮಾಡಲು ಓಡಿಕೊಂಡು ಬಂದು ಅಪ್ಪನನ್ನು ತಬ್ಬಿಕೊಂಡಿದ್ದಾಳೆ. ಈ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
-
This duo 💛#TATAIPL | @ChennaiIPL | @msdhoni pic.twitter.com/LCcd38fluT
— IndianPremierLeague (@IPL) May 11, 2023 " class="align-text-top noRightClick twitterSection" data="
">This duo 💛#TATAIPL | @ChennaiIPL | @msdhoni pic.twitter.com/LCcd38fluT
— IndianPremierLeague (@IPL) May 11, 2023This duo 💛#TATAIPL | @ChennaiIPL | @msdhoni pic.twitter.com/LCcd38fluT
— IndianPremierLeague (@IPL) May 11, 2023
ಓಡಿಬಂದು ಮೈದಾನದಲ್ಲಿ ಧೋನಿಯನ್ನು ಅಪ್ಪಿಕೊಂಡ ಜೀವಾ : ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಎಂ.ಎಸ್ ಧೋನಿಯನ್ನು ಹುರಿದುಂಬಿಸಲು ಪತ್ನಿ ಸಾಕ್ಷಿ ಮತ್ತು ಮಗಳು ಜೀವಾ ಆಗಮಿಸಿದ್ದರು. ಈ ಪಂದ್ಯದಲ್ಲಿ ಧೋನಿ 2 ಸಿಕ್ಸರ್ ಮತ್ತು 1 ಬೌಂಡರಿ ಮೂಲಕ 20 ರನ್ ಗಳಿಸಿದ್ದರು. ಧೋನಿ ಸಿಕ್ಸರ್ ಬಾರಿಸಿದಾಗ ಮಗಳು ಜೀವಾ ಸಂಭ್ರಮಿಸಿದ್ದು ಕಂಡುಬಂತು. ಪಂದ್ಯದ ಬಳಿಕ ಧೋನಿಯನ್ನು ಭೇಟಿ ಮಾಡಲು ಆಗಮಿಸಿದ ಜೀವಾ ಓಡಿ ಬಂದು ಧೋನಿಯನ್ನು ಅಪ್ಪಿಕೊಂಡಿದ್ದಾಳೆ. ಈ ವಿಡಿಯೋವನ್ನು ಐಪಿಎಲ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ಸುಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ವೈರಲ್ ಆಗಿದೆ.
-
Oh what a GOOD night!🥳#CSKvDC #WhistlePodu #Yellove 🦁💛 @msdhoni pic.twitter.com/6ANRdTGPZs
— Chennai Super Kings (@ChennaiIPL) May 10, 2023 " class="align-text-top noRightClick twitterSection" data="
">Oh what a GOOD night!🥳#CSKvDC #WhistlePodu #Yellove 🦁💛 @msdhoni pic.twitter.com/6ANRdTGPZs
— Chennai Super Kings (@ChennaiIPL) May 10, 2023Oh what a GOOD night!🥳#CSKvDC #WhistlePodu #Yellove 🦁💛 @msdhoni pic.twitter.com/6ANRdTGPZs
— Chennai Super Kings (@ChennaiIPL) May 10, 2023
2023ರ ಐಪಿಎಲ್ನಲ್ಲಿ ಧೋನಿ ಪ್ರದರ್ಶನ : ಎಂ.ಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ತಂಡವು ಉತ್ತಮ ಪ್ರದರ್ಶನ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅಷ್ಟೇ ಅಲ್ಲದೆ ಬೆಸ್ಟ್ ಫಿನಿಷರ್ ಆಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. 2023ರ ಐಪಿಎಲ್ ಆವೃತ್ತಿಯಲ್ಲಿ ಧೋನಿ ಒಟ್ಟು 11 ಪಂದ್ಯಗಳನ್ನು ಆಡಿದ್ದು, 96 ರನ್ ಗಳಿಸಿದ್ದಾರೆ. 204.26 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಈ ಆವೃತ್ತಿಯಲ್ಲಿ 32 ರನ್ ಇವರು ಗಳಿಸಿದ ಅತ್ಯಧಿಕ ರನ್. ಇದುವರೆಗೆ 10 ಸಿಕ್ಸರ್ ಮತ್ತು 3 ಬೌಂಡರಿ ಸಿಡಿಸಿದ್ದಾರೆ.
ಇದನ್ನೂ ಓದಿ : ಮಹತ್ವದ ಪಂದ್ಯ ಸೋತ ಡೆಲ್ಲಿ; ಪ್ಲೇ ಆಫ್‌ಗೆ ಹತ್ತಿರವಾದ ಚೆನ್ನೈ- ರೋಚಕ ಕ್ಷಣಗಳ Photos