ETV Bharat / sports

ಕ್ರಿಕೆಟ್​ನಿಂದ ಬ್ರೇಕ್ ತೆಗೆದುಕೊಳ್ಳಲಿದ್ದಾರೆ ಹಳೆಯ ಟ್ವೀಟ್​​ಗಳಿಂದ ಶಿಕ್ಷೆ ಅನುಭವಿಸುತ್ತಿರುವ ರಾಬಿನ್​ಸನ್

author img

By

Published : Jun 10, 2021, 9:43 PM IST

ರಾಬಿನ್​ಸನ್​ ಒಂದು ವಾರದಿಂದ ಮಾನಸಿಕ ಹಿಂಸೆ ಅನುಭವಿಸುತ್ತಿದ್ದು, ಕ್ರಿಕೆಟ್​ನಿಂದ ಬ್ರೇಕ್ ಪಡೆದು ತಮ್ಮ ಕುಟುಂಬದ ಜೊತೆಯಲ್ಲಿ ಕೆಲವು ಸಮಯ ಕಳೆಯಲು ನಿರ್ಧರಿಸಿದ್ದಾರೆ ಎಂದು ಸಸೆಕ್ಸ್​ ಕ್ರಿಕೆಟ್​ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಆಲ್ಲಿ ರಾಬಿನ್​ಸನ್​
ಆಲ್ಲಿ ರಾಬಿನ್​ಸನ್​

ಲಂಡನ್: 8 ವರ್ಷಗಳ ಹಿಂದೆ ಮಾಡಿರುವ ಅವಹೇಳನ ಕಾರಿ ಟ್ವೀಟ್​ಗಳು ವೈರಲ್ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಅಮಾನತಾಗಿರುವ ಇಂಗ್ಲೆಂಡ್ ವೇಗದ ಬೌಲರ್​ ದೇಶಿ ಕ್ರಿಕೆಟ್​ನಿಂದ ಚಿಕ್ಕ ಬ್ರೇಕ್ ತೆಗೆದುಕೊಂಡಿದ್ದಾರೆ. ಅವರು ಮುಂಬರುವ ವಿಟಾಲಿಟಿ ಬ್ಲಾಸ್ಟ್​ ಟಿ-20 ಟೂರ್ನಿಯಲ್ಲಿ ಗ್ಲೌಸೆಸ್ಟರ್‌ಶೈರ್ ಮತ್ತು ಹ್ಯಾಂಪ್‌ಶೈರ್ ಹಾಕ್ಸ್ ವಿರುದ್ಧದ ಪಂದ್ಯಗಳಿಗೆ ಲಭ್ಯರಿರುವುದಿಲ್ಲ ಎಂದು ಸಸೆಕ್ಸ್ ತಂಡ ತಿಳಿಸಿದೆ.

ನ್ಯೂಜಿಲ್ಯಾಂಡ್​ ವಿರುದ್ಧದ ಮೊದಲ ಟೆಸ್ಟ್​ ನಂತರ ಆಲ್ಲಿ ರಾಬಿನ್​ಸನ್ ಅವರನ್ನು 2012 ಮತ್ತು 2013ರಲ್ಲಿ ಏಷ್ಯಾ ಜನರು ಮತ್ತು ಮಹಿಳೆಯರ ಬಗ್ಗೆ ಅವಹೇಳನಕಾರಿ ಟ್ವೀಟ್ ಮಾಡಿರುವುದರ ಆರೋಪದ ಮೇಲೆ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಇಸಿಬಿ ಅಮಾನತು ಮಾಡಿತ್ತು. ಆದರೆ ಇದಕ್ಕೆ ಇಂಗ್ಲೆಂಡ್ ಪ್ರಧಾನಿ ಸೇರಿದಂತೆ ಕೆಲವು ರಾಜಕೀಯ ಮುಖಂಡರು ಮತ್ತು ಮಾಜಿ ಕ್ರಿಕೆಟಿಗರು ಆಕ್ಷೇಪ ವ್ಯಕ್ತಪಡಿಸಿ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಹೇಳಿದ್ದರು.

ರಾಬಿನ್​ಸನ್​ ಒಂದು ವಾರದಿಂದ ಮಾನಸಿಕ ಹಿಂಸೆ ಅನುಭವಿಸುತ್ತಿದ್ದು, ಕ್ರಿಕೆಟ್​ನಿಂದ ಸಣ್ನ ಬ್ರೇಕ್ ಪಡೆದು ತಮ್ಮ ಕುಟುಂಬದ ಜೊತೆಯಲ್ಲಿ ಕೆಲವು ಸಮಯ ಕಳೆಯಲು ನಿರ್ಧರಿಸಿದ್ದಾರೆ ಎಂದು ಸಸೆಕ್ಸ್​ ಕ್ರಿಕೆಟ್​ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮ ಸೇರಿದಂತೆ ಆಟಗಾರರು ಮತ್ತು ಸಿಬ್ಬಂದಿಗಳ ಮಾನಸಿಕ ಆರೋಗ್ಯಕ್ಕೆ ಕ್ಲಬ್​ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ. ಹಾಗಾಗಿ ಸಸೆಕ್ಸ್ ಕ್ರಿಕೆಟ್​ ಆಲ್ಲಿ ರಾಬಿನ್​ಸನ್​ ಅವರ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತದೆ. ಅವರು ಯಾವಾಗ ಹಿಂತಿರುಗಲು ಬಯಸುತ್ತಾರೋ, ಆಗ ಅವರನ್ನು ಕ್ಲಬ್​ ಸ್ವಾಗತಿಸುತ್ತದೆ. ಒಂದು ವಾರದಿಂದ ತಂಡದ ಇತರ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಳ ಜೊತೆ ಚರ್ಚೆ ನಡೆಸಿದ ನಂತರ ಅವರ ಈ ನಿರ್ಧಾರಕ್ಕೆ ಎಲ್ಲರಿಂದಲೂ ಬೆಂಬಲ ಪಡೆದಿದ್ದಾರೆ. ನಾವು ಯೋಗಕ್ಷೇಮದ ಹಿತದೃಷ್ಟಿಯಿಂದ ಅಲ್ಲಿ ಅವರೊಂದಿಗೆ ನಿಕಟ ಸಂಪರ್ಕದಲ್ಲಿರುತ್ತೇವೆ. ಮುಂದಿನ ಅಪ್​ಡೇಟ್​ಗಳನ್ನು ತಿಳಿಸುತ್ತಿರುತ್ತೇವೆ ಎಂದು ಕ್ರಿಕೆಟ್​ ಕ್ಲಬ್​ ತಿಳಿಸಿದೆ.

ಇದನ್ನು ಓದಿ: ದ್ರಾವಿಡ್ ಭಾಯ್​ ಪ್ರಸಿದ್ಧನಲ್ಲದ ನನ್ನಂಥವನ ಕರೆಗೆ ಓಗೊಟ್ಟು 15 ನಿಮಿಷ ಮಾತನಾಡಿದ್ರು!: ಪಾಕ್ ಕ್ರಿಕೆಟಿಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.