ಲಾಹೋರ್ (ಪಾಕಿಸ್ತಾನ): ಏಷ್ಯಾಕಪ್ನ ಸೂಪರ್ ಫೂರ್ ಹಂತರಕ್ಕೆ ತಲುಪ ಬೇಕಾದರೆ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನಕ್ಕೆ ಇಂದಿನ ಪಂದ್ಯದ ಗೆಲುವು ಅಗತ್ಯ. ಈ ನಿಟ್ಟಿನಲ್ಲಿ ಉಭಯ ತಂಡಗಳು ಕಠಿಣ ಪೈಪೋಟಿ ನಡೆಸುತ್ತಿವೆ. ಮಾಡು ಇಲ್ಲವೇ ಮಡಿ ಎಂಬಂತಿರುವ ಪಂದ್ಯದಲ್ಲಿ ಲಂಕಾದ ವಿಕೆಟ್ ಕೀಪರ್ ಕುಸಲ್ ಮೆಂಡಿಸ್ ಅವರ 92ನ ಅದ್ಭುತ ಇನ್ನಿಂಗ್ಸ್ ಆಡಿದರು. ಮೆಂಡಿಸ್ ಅವರ ಅರ್ಧಶತಕದ ನೆರವಿನಿಂದ ಲಂಕಾ ನಿಗದಿತ ಓವರ್ ಅಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 291 ರನ್ ಕಲೆಹಾಕಿದೆ. ಸೂಪರ್ ಫೋರ್ನಲ್ಲಿ ಸ್ಥಾನ ಪಡೆಯಲು ಆಫ್ಘನ್ 292 ರನ್ನ ಗುರಿಯನ್ನು ಭೇದಿಸಬೇಕಿದೆ.
-
Sri Lanka finish the first innings at 291/8.
— AsianCricketCouncil (@ACCMedia1) September 5, 2023 " class="align-text-top noRightClick twitterSection" data="
A competitive score by Sri Lanka on the back of a batting masterclass by Kusal Mendis. Afghanistan need to chase down 292 in 37.1 overs to qualify for the Super 4s. Do you fancy Afghanistan's chances?#AsiaCup2023 #AFGvsSL pic.twitter.com/DCMKF0QShz
">Sri Lanka finish the first innings at 291/8.
— AsianCricketCouncil (@ACCMedia1) September 5, 2023
A competitive score by Sri Lanka on the back of a batting masterclass by Kusal Mendis. Afghanistan need to chase down 292 in 37.1 overs to qualify for the Super 4s. Do you fancy Afghanistan's chances?#AsiaCup2023 #AFGvsSL pic.twitter.com/DCMKF0QShzSri Lanka finish the first innings at 291/8.
— AsianCricketCouncil (@ACCMedia1) September 5, 2023
A competitive score by Sri Lanka on the back of a batting masterclass by Kusal Mendis. Afghanistan need to chase down 292 in 37.1 overs to qualify for the Super 4s. Do you fancy Afghanistan's chances?#AsiaCup2023 #AFGvsSL pic.twitter.com/DCMKF0QShz
ಟಾಸ್ ಗೆದ್ದು ಬ್ಯಾಟಿಂಗ್ಗೆ ಬಂದ ಲಂಕಾ ಉತ್ತಮ ಆರಂಭವನ್ನು ಪಡೆಯಿತು. ವಿಶ್ವಕಪ್ ಅರ್ಹತಾ ಪಂದ್ಯಗಳಿಂದ ಉತ್ತಮ ಫಾರ್ಮ್ನಲ್ಲಿರುವ ಲಂಕಾದ ಆರಂಭಿಕರು ಪಾಕ್ ನೆಲದಲ್ಲಿ ಆಫ್ಘನ್ನರ ಮೇಲೆ ಸವಾರಿ ಮಾಡಿದರು. ಮೊದಲ ಪವರ್ ಪ್ಲೇ ಅಂತ್ಯಕ್ಕೆ ಲಂಕಾ ವಿಕೆಟ್ ನಷ್ಟವಿಲ್ಲದೇ 62 ರನ್ ಕಲೆಹಾಕಿತ್ತು. 11ನೇ ಓವರ್ನಲ್ಲಿ ಗುಲ್ಬದಿನ್ ನೈಬ್ 32 ರನ್ ಗಳಸಿ ಆಡುತ್ತಿದ್ದ ದಿಮುತ್ ಕರುಣಾರತ್ನೆ ವಿಕೆಟ್ ಪಡೆದರು. ಮತ್ತೆ ಮೂರು ಓವರ್ ಅಂತರದಲ್ಲಿ ಗುಲ್ಬದಿನ್ ನೈಬ್ ಇನ್ನೊಬ್ಬ ಆರಂಭಿಕ ಆಟಗಾರ ಪಾತುಮ್ ನಿಸ್ಸಾಂಕ ಅವರ ವಿಕೆಟ್ ಪಡೆದರು. ನಿಸ್ಸಾಂಕ ಈ ಇನ್ನಿಂಗ್ಸ್ನಲ್ಲಿ 6 ಬೌಂಡರಿಯಿಂದ 41 ರನ್ ಗಳಿಸಿ ವಿಕೆಟ್ ಕೊಟ್ಟರು.
ಮೂರನೇ ವಿಕೆಟ್ ಆಗಿ ಬಂದ ಕುಸಲ್ ಮೆಂಡಿಸ್ ಅಫ್ಘನ್ನರ ದಾಳಿಯನ್ನು ಸಮರ್ಥವಾಗಿ ಎದುರಿಸುತ್ತಾ ಬಂದರು. ಆದರೆ, ಅವರಿಗೆ ಮಧ್ಯಮ ಕ್ರಮಾಂಕದಲ್ಲಿ ಯಾವುದೇ ಬ್ಯಾಟರ್ನ ಸಹಕಾರ ದೊರೆಯಲಿಲ್ಲ. ಸದೀರ ಸಮರವಿಕ್ರಮ 3 ರನ್ ವಿಕೆಟ್ ಒಪ್ಪಿಸಿದರು. ಚರಿತ್ ಅಸಲಂಕಾ (36) ಮತ್ತು ಧನಂಜಯ ಡಿ ಸಿಲ್ವಾ (14) ಕೊಂಚ ಜೊತೆಯಾಟವಾಡಿದರು. ಈ ವೇಳೆಗೆ ಕುಸಲ್ ಮೆಂಡಿಸ್ ಅರ್ಧಶತಕ ದಾಖಲಿಸಿದ್ದರು. 84 ಬಾಲ್ನಲ್ಲಿ 6 ಬೌಂಡರಿ ಮತ್ತು 3 ಸಿಕ್ಸ್ನಿಂದ 92 ರನ್ ಗಳಿಸಿದ್ದ ವೇಳೆ ರನ್ಔಟ್ಗೆ ಬಲಿಯಾದರು. ಇದರಿಂದ 8 ರನ್ನಿಂದ ಶತಕದಿಂದ ವಂಚಿತರಾದರು. ನಂತರ ನಾಯಕ ದಸುನ್ ಶನಕ 5 ರನ್ಗೆ ವಿಕೆಟ್ ಕೊಟ್ಟರು.
ಟೇಲ್ ಎಂಡರ್ಗಳಾದ ದುನಿತ್ ವೆಲ್ಲಲಾಗೆ (33*) ಮತ್ತು ಮಹೀಶ್ ತೀಕ್ಷಣ (28) ಕೊನೆಯಲ್ಲಿ 50 ಪ್ಲೆಸ್ ರನ್ನ ಜೊತೆಯಾಟ ಮಾಡಿದರು. ಈ ಇಬ್ಬರು ಬ್ಯಾಟರ್ಗಳ ರನ್ನ ಸಹಾಯದಿಂದ ಲಂಕಾ 250 ರನ್ ಗಡಿದಾಟಿತು. ಲಂಕಾ ನಿಗದಿತ ಓವರ್ ಅಂತ್ಯಕ್ಕೆ 8 ವಿಕೆಟ್ ಗಳನ್ನು ಕಳೆದುಕೊಂಡು 291 ರನ್ ಕಲೆಹಾಕಿತು. ಅಫ್ಘಾನಿಸ್ಥಾನದ ಪರ ಗುಲ್ಬದಿನ್ ನೈಬ್ 4 ವಿಕೆಟ್ ಪಡೆದರೆ, ರಶೀದ್ ಖಾನ್ 2 ಮತ್ತು ಮುಜೀಬ್ ಉರ್ ರಹಮಾನ್ ಒಂದು ವಿಕೆಟ್ ಕಬಳಿಸಿದರು.
ಇದನ್ನೂ ಓದಿ: Asia Cup 2023: ಸೂಪರ್ ಫೋರ್ನ ಕೊಲಂಬೊ ಪಂದ್ಯಗಳ ಸ್ಥಳ ಬದಲಾವಣೆ..