ಮೆಲ್ಬೋರ್ನ್: ಐರ್ಲೆಂಡ್ ಮತ್ತು ಅಫ್ಘಾನಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಎರಡೂ ತಂಡಗಳಿಗೆ ಒಂದೊಂದು ಅಂಕ ಹಂಚಿಕೆ ಮಾಡಲಾಗಿದೆ. ನಗರದಲ್ಲಿ ದಿನವಿಡೀ ತುಂತುರು ಮಳೆಯಾಗುತ್ತಿದ್ದು, ಹೀಗಾಗಿ ಟಾಸ್ ಅನಿರ್ದಿಷ್ಟವಾಗಿ ವಿಳಂಬವಾಗಿತ್ತು. 5 ಓವರ್ಗಳ ಪಂದ್ಯ ನಡೆಸುವ ಚಿಂತನೆ ಮಾಡಲಾಗಿತ್ತಾದರೂ ಮಳೆ ಬಿಡದ ಹಿನ್ನೆಲೆ ಪಂದ್ಯ ರದ್ದಾಗಿದೆ.
ಅಫ್ಘಾನಿಸ್ತಾನದ ಎರಡನೇ ಪಂದ್ಯವೂ ಮಳೆಯಿಂದ ರದ್ದಾಗಿದ್ದಕ್ಕೆ ಅಭಿಮಾನಿಗಳು ತೀವ್ರ ಬೇಸರ ವ್ಯಕ್ತ ಪಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಅವಿಸ್ಮರಣೀಯ ಗೆಲುವನ್ನು ಐರ್ಲೆಂಡ್ ಸಾಧಿಸಿದೆ. ಸೂಪರ್ 12 ಹಂತದ ಮೂರನೇ ಪಂದ್ಯ ಐರ್ಲೆಂಡ್ ಆಡುತ್ತಿದ್ದು, ಶ್ರೀಲಂಕಾ ಎದುರು ಸೋತು, ಇಂಗ್ಲೆಂಡ್ ಎದುರು ಮಳೆಯಿಂದಾಗಿ ಡಿಎಲ್ಎಸ್ ನಿಯಮದಿಂದ 5 ರನ್ಗಳ ಗೆಲುವು ಸಾಧಿಸಿತ್ತು.
-
Group 1 clash between Afghanistan and Ireland has been abandoned due to persistent rain in Melbourne 🌧#T20WorldCup | #AFGvIRE pic.twitter.com/jhZAbWxuUW
— ICC (@ICC) October 28, 2022 " class="align-text-top noRightClick twitterSection" data="
">Group 1 clash between Afghanistan and Ireland has been abandoned due to persistent rain in Melbourne 🌧#T20WorldCup | #AFGvIRE pic.twitter.com/jhZAbWxuUW
— ICC (@ICC) October 28, 2022Group 1 clash between Afghanistan and Ireland has been abandoned due to persistent rain in Melbourne 🌧#T20WorldCup | #AFGvIRE pic.twitter.com/jhZAbWxuUW
— ICC (@ICC) October 28, 2022
ನ್ಯೂಜಿಲ್ಯಾಂಡ್ ಎದುರಿನ ಪಂದ್ಯದಲ್ಲಿ ಅಫ್ಘಾನಿಸ್ತಾನಕ್ಕೆ ಮಳೆಯಿಂದ ರದ್ದಾಗಿ ಒಂದು ಅಂಕ ದೊರೆತಿತ್ತು. ಈ ಪಂದ್ಯದಲ್ಲೂ ಅಫ್ಘಾನಿಸ್ತಾನಕ್ಕೆ ಒಂದು ಅಂಕ ದೊರೆತಿದ್ದು ಗುಂಪು 1ರ ಅಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಒಂದು ಪಂದ್ಯ ಗೆದ್ದು ಒಂದು ರದ್ದಾಗಿ ಐರ್ಲೆಂಡ್ ಮೂರು ಅಂಕದಿಂದ ಎರಡನೇ ಸ್ಥಾನದಲ್ಲಿದೆ.
ಇಂದಿನ ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಸೆಣಸಲಿದ್ದು, ಗೆದ್ದವರು ಗುಂಪು ಒಂದರ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಲಿದೆ. ಈ ಪಂದ್ಯಕ್ಕೂ ಮಳೆ ಕಾಡುವ ಭಯ ಇದೆ.
ಇದನ್ನೂ ಓದಿ : ಪಾಕ್ಗೆ ಮತ್ತೆ ನವಾಜ್ ವಿಲನ್! ಟಿ20 ವಿಶ್ವಕಪ್‌ನಲ್ಲಿ ಜಿಂಬಾಬ್ವೆಗೆ ಐತಿಹಾಸಿಕ ಗೆಲುವು