ಚೆನ್ನೈ (ತಮಿಳುನಾಡು): ಅಫ್ಘಾನಿಸ್ತಾನ ತಾನೂ ಕೂಡಾ ಬಲಿಷ್ಠ ಕ್ರಿಕೆಟ್ ತಂಡ ಎಂಬ ಸಂದೇಶವನ್ನು 2023ರ ವಿಶ್ವಕಪ್ ಟೂರ್ನಿಯಲ್ಲಿ ನೀಡಿದೆ. ಮೂರನೇ ವಿಶ್ವಕಪ್ ಆಡುತ್ತಿರುವ ತಂಡ ಸೋಮವಾರ ಚೆಪಾಕ್ ಕ್ರೀಡಾಂಗಣದಲ್ಲಿ ಪಾಕಿಸ್ತಾನವನ್ನು ಮಣಿಸಿ ಅಚ್ಚರಿ ಮೂಡಿಸಿತು. ಸತತ ಏಳು ಏಕದಿನ ಪಂದ್ಯಗಳಲ್ಲಿ ಪಾಕ್ ವಿರುದ್ಧ ಸೋಲುಂಡಿದ್ದ ಅಫ್ಘನ್ ವಿಶ್ವ ವೇದಿಕೆಯಲ್ಲಿ ಸೇಡು ತೀರಿಸಿಕೊಂಡಿದೆ. ಈ ಐತಿಹಾಸಿಕ ವಿಜಯದ ನಂತರ ಅಫ್ಘಾನಿಸ್ತಾನ ಕ್ರಿಕೆಟಿಗರ ಸಂಭ್ರಮ ಮುಗಿಲು ಮುಟ್ಟಿತ್ತು. ಪಂದ್ಯಕ್ಕೂ ಮುನ್ನ ಅಂಕಪಟ್ಟಿಯಲ್ಲಿ ಕೆಳಹಂತದಲ್ಲಿದ್ದ ತಂಡ ನಂತರ 6ನೇ ಸ್ಥಾನಕ್ಕೆ ಏರಿದ್ದಲ್ಲದೇ ಪ್ಲೇ ಆಫ್ ಕನಸನ್ನು ಜೀವಂತ ಉಳಿಸಿಕೊಂಡಿದೆ.
-
Afghanistan players dancing on 'Lungi Dance'.
— Mufaddal Vohra (@mufaddal_vohra) October 24, 2023 " class="align-text-top noRightClick twitterSection" data="
- The victory means so much to them.pic.twitter.com/5nKiBFeLen
">Afghanistan players dancing on 'Lungi Dance'.
— Mufaddal Vohra (@mufaddal_vohra) October 24, 2023
- The victory means so much to them.pic.twitter.com/5nKiBFeLenAfghanistan players dancing on 'Lungi Dance'.
— Mufaddal Vohra (@mufaddal_vohra) October 24, 2023
- The victory means so much to them.pic.twitter.com/5nKiBFeLen
ರೋಚಕ ವಿಜಯವನ್ನು ತಂಡದ ಆಟಗಾರರು ಶಾರುಖ್ ಖಾನ್ ಅವರ 'ಚೆನ್ನೈ ಎಕ್ಸ್ಪ್ರೆಸ್' ಸಿನಿಮಾದ ಜನಪ್ರಿಯ 'ಲುಂಗಿ ಡ್ಯಾನ್ಸ್' ಹಾಡಿನೊಂದಿಗೆ ಸಂಭ್ರಮಿಸಿದರು. ಮೈದಾನದಿಂದ ಹೊಟೇಲ್ಗೆ ತೆರಳುವಾಗ ಟೀಂ ಬಸ್‌ನಲ್ಲಿ ಆಟಗಾರರು ಈ ಹಾಡಿಗೆ ನೃತ್ಯ ಮಾಡಿದ್ದಾರೆ. ಸಂಭ್ರಮಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ವಿಕ್ಷಣೆ ಗಳಿಸುವುದರೊಂದಿಗೆ, ಸಾಕಷ್ಟು ಪ್ರಮಾಣದಲ್ಲಿ ಹಂಚಿಕೆಯೂ ಆಗಿದೆ.
-
Afghanistan team thanking the Chepauk crowd and the Chennai crowd appreciating the gesture by giving standing ovation.
— Mufaddal Vohra (@mufaddal_vohra) October 23, 2023 " class="align-text-top noRightClick twitterSection" data="
Beautiful scenes! 😍❤️pic.twitter.com/V4UasZbKQd
">Afghanistan team thanking the Chepauk crowd and the Chennai crowd appreciating the gesture by giving standing ovation.
— Mufaddal Vohra (@mufaddal_vohra) October 23, 2023
Beautiful scenes! 😍❤️pic.twitter.com/V4UasZbKQdAfghanistan team thanking the Chepauk crowd and the Chennai crowd appreciating the gesture by giving standing ovation.
— Mufaddal Vohra (@mufaddal_vohra) October 23, 2023
Beautiful scenes! 😍❤️pic.twitter.com/V4UasZbKQd
ಪಂದ್ಯ ಗೆದ್ದ ನಂತರ ಅಫ್ಘಾನಿಸ್ತಾನ ತಂಡದ ಸದಸ್ಯರು ಕ್ರೀಡಾಂಗಣಕ್ಕೆ ಒಂದು ಸುತ್ತು ಬಂದು ನೆರೆದಿದ್ದ ಅಭಿಮಾನಿಗಳ ಜತೆ ಸಂತಸ ಹಂಚಿಕೊಂಡರು. ಸ್ಟಾರ್ ಸ್ಪೋರ್ಟ್ಸ್ ವಾಹಿನಿಗೆ ನಿರೂಪಣೆ ಮಾಡುತ್ತಿದ್ದ ಇರ್ಫಾನ್ ಪಠಾಣ್ ಅವರು ರಶೀದ್ ಖಾನ್ ಜತೆ ಸೇರಿಕೊಂಡು ಮೈದಾನದಲ್ಲೇ ಡ್ಯಾನ್ಸ್ ಮಾಡಿ ಸಂಭ್ರಮಿಸಿದರು.
-
The celebrations in Afghanistan. pic.twitter.com/7d040PgQgM
— Mufaddal Vohra (@mufaddal_vohra) October 23, 2023 " class="align-text-top noRightClick twitterSection" data="
">The celebrations in Afghanistan. pic.twitter.com/7d040PgQgM
— Mufaddal Vohra (@mufaddal_vohra) October 23, 2023The celebrations in Afghanistan. pic.twitter.com/7d040PgQgM
— Mufaddal Vohra (@mufaddal_vohra) October 23, 2023
ಅಫ್ಘಾನಿಸ್ತಾನದಲ್ಲೂ ಸಂಭ್ರಮಾಚರಣೆ: ಪಾಕಿಸ್ತಾನವನ್ನು ಅಫ್ಘಾನಿಸ್ತಾನ 8 ವಿಕೆಟ್‌ಗಳಿಂದ ಮಣಿಸಿದ ನಂತರ ಅಲ್ಲಿನ ಜನರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ತಾಲಿಬಾಲಿಗಳು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಸಂಭ್ರಮಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ರಸ್ತೆಯ ಸರ್ಕಲ್‌ವೊಂದರಲ್ಲಿ ಜನರು ಸಂತೋಷ ಹಂಚಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ರೋಚಕ ಪಂದ್ಯ: ಚೆನ್ನೈನ ಚೆಪಾಕ್ ಪಿಚ್ನಲ್ಲಿ ಟಾಸ್ ಗೆದ್ದ ಪಾಕ್ ನಾಯಕ ಬಾಬರ್ ಆಜಂ, ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡರು. ಪಾಕಿಸ್ತಾನವನ್ನು ನಿಯಂತ್ರಿಸಲು ಅಫ್ಘನ್ 38 ಸ್ಪಿನ್ ಓವರ್ ಮಾಡಿದರೂ, ಶಫಿಕ್ ಮತ್ತು ಬಾಬರ್ ಅರ್ಧಶತಕದ ನೆರವಿನಿಂದ 282 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ, ರಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ರಹಮತ್ ಶಾ ಮತ್ತು ಹಶ್ಮತುಲ್ಲಾ ಶಾಹಿದಿ ಅವರ ಬ್ಯಾಟಿಂಗ್ ನೆರವಿನಿಂದ 1 ಓವರ್ ಉಳಿಸಿಕೊಂಡು 8 ವಿಕೆಟ್ಗಳ ಜಯ ದಾಖಲಿಸಿತು.
ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್: ಡಿ ಕಾಕ್, ಮಾರ್ಕ್ರಾಮ್, ಕ್ಲಾಸೆನ್ ಅಬ್ಬರ; ಬಾಂಗ್ಲಾಕ್ಕೆ 383 ರನ್‌ಗಳ ಬೃಹತ್ ಗುರಿ