ಆ್ಯಂಟಿಗುವಾ(ವೆಸ್ಟ್ ಇಂಡೀಸ್): ಅಂಡರ್-19 ವಿಶ್ವಕಪ್ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಬಲಿಷ್ಠ ಶ್ರೀಲಂಕಾ ತಂಡಕ್ಕೆ ಸೋಲಿನ ರುಚಿ ತೋರಿಸಿರುವ ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ಚೊಚ್ಚಲ ಬಾರಿಗೆ ಸೆಮಿಫೈನಲ್ಗೆ ಲಗ್ಗೆ ಹಾಕಿದೆ. ನಿನ್ನೆ ಆ್ಯಂಟಿಗುವಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರೋಚಕ ಗೆಲುವು ದಾಖಲು ಮಾಡುವ ಮೂಲಕ ಎರಡನೇ ತಂಡವಾಗಿ ಸೆಮಿಫೈನಲ್ ಪ್ರವೇಶ ಮಾಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಅಫ್ಘಾನಿಸ್ತಾನ ತಂಡ 47.1 ಓವರ್ಗಳಲ್ಲಿ 134ರನ್ಗಳಿಗೆ ಆಲೌಟ್ ಆಯಿತು. ಈ ರನ್ ಗುರಿ ಬೆನ್ನತ್ತಿದ ಲಂಕಾ ತಂಡ 46 ಓವರ್ಗಳಲ್ಲಿ ಕೇವಲ 130ರನ್ಗಳಿಕೆ ಮಾಡುವಷ್ಟರಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 4 ರನ್ಗಳ ಸೋಲು ಕಂಡಿತ್ತು.
ಅಫ್ಘಾನ್ ತಂಡದ ಪರ ಅಬ್ದುಲ್ 37ರನ್, ನೂರ್ ಅಹ್ಮದ್ 30ರನ್ ಹಾಗೂ ಅಲ್ಲಾಹ್ ನೂರ್ 25ರನ್ಗಳಿಕೆ ಮಾಡಿದ್ರೆ, ಲಂಕಾ ಪರ ರಾನ್ಪುಲ್ 10ರನ್ ನೀಡಿ ಪ್ರಮುಖ 5 ವಿಕೆಟ್ ಕಿತ್ತರು. ಲಂಕಾ ತಂಡದ ಪರ ನಾಯಕ ದುನಿತ್ ವೆಲ್ಲಲಗೆ 34ರನ್ಗಳಿಕೆ ಮಾಡಿದ್ರೆ, ಉಳಿದೆಲ್ಲ ಪ್ಲೇಯರ್ಸ್ ನಿರಾಸೆ ಮೂಡಿಸಿದರು. ಈಗಾಗಲೇ ಸಮಿಫೈನಲ್ಗೆ ಲಗ್ಗೆ ಹಾಕಿರುವ ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ ಮುಂದಿನ ಪಂದ್ಯದಲ್ಲಿ ಸೆಣಸಾಟ ನಡೆಸಲಿದೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ