ತರೊಬಾ(ವೆಸ್ಟ್ ಇಂಡೀಸ್): ಚುಟುಕು ಕ್ರಿಕೆಟ್ನಲ್ಲಿ ಬಲಾಢ್ಯರು ಎಂದೇ ಗುರುತಿಸಿಕೊಂಡ ವೆಸ್ಟ್ ಇಂಡೀಸ್ ತಂಡ, ಭಾರತ ವಿರುದ್ಧದ ಮೊದಲ ಟಿ-20ಯಲ್ಲಿ ಹೀನಾಯ ಸೋಲು ಅನುಭವಿಸಿದ್ದಾರೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ನೀಡಿದ 190 ರನ್ ಗುರು ಬೆನ್ನಟ್ಟಿ ಕೇವಲ 122 ಗಳಿಸಿ 68 ರನ್ಗಳ ಸೋಲೊಪ್ಪಿಕೊಂಡಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆಯಿತು.
-
.@DineshKarthik played a stroke-filled knock of 41* off 19 balls & bagged the Player of the Match award as #TeamIndia beat West Indies in the first T20I. 👏 👏
— BCCI (@BCCI) July 29, 2022 " class="align-text-top noRightClick twitterSection" data="
Scorecard ▶️ https://t.co/qWZ7LSCo82 #WIvIND pic.twitter.com/lZDxvVUVWS
">.@DineshKarthik played a stroke-filled knock of 41* off 19 balls & bagged the Player of the Match award as #TeamIndia beat West Indies in the first T20I. 👏 👏
— BCCI (@BCCI) July 29, 2022
Scorecard ▶️ https://t.co/qWZ7LSCo82 #WIvIND pic.twitter.com/lZDxvVUVWS.@DineshKarthik played a stroke-filled knock of 41* off 19 balls & bagged the Player of the Match award as #TeamIndia beat West Indies in the first T20I. 👏 👏
— BCCI (@BCCI) July 29, 2022
Scorecard ▶️ https://t.co/qWZ7LSCo82 #WIvIND pic.twitter.com/lZDxvVUVWS
ಸ್ಪಿನ್ನರ್ಗಳ ಕರಾಮತ್ತು: ನಿಧಾನಗತಿಯ ಪಿಚ್ನ ಲಾಭ ಪಡೆದ ಭಾರತೀಯ ಸ್ಪಿನ್ನರ್ಗಳು ವೆಸ್ಟ್ ಇಂಡೀಸ್ ಆಟಗಾರರು ಪೆವಿಲಿಯನ್ ಪರೇಡ್ ನಡೆಸುವಂತೆ ಮಾಡಿದರು. ಇದಕ್ಕೆ ಸಾಕ್ಷಿ ಎಂಬಂತೆ ತಂಡದ ಯಾವೊಬ್ಬ ಆಟಗಾರನೂ 20 ಕ್ಕೂ ಅಧಿಕ ರನ್ ಗಳಿಸುವಲ್ಲಿ ಸಫಲವಾಗಲಿಲ್ಲ.
ಏಕದಿನ ಸರಣಿಯಲ್ಲಿ ಮಿಂಚಿದ್ದ ಆಲ್ರೌಂಡರ್ ಕೈಲ್ ಮೇಯರ್ಸ್ ಮಿಂಚಿನ ಆರಂಭ ಪಡೆದರು. 1 ಸಿಕ್ಸ್ 2 ಬೌಂಡರಿ ಬಾರಿಸಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದರು. ಆದರೆ, ಇದಕ್ಕೆ ಅರ್ಷದೀಪ್ ಸಿಂಗ್ ಅವಕಾಶ ಮಾಡಿಕೊಡದೇ 15 ರನ್ಗೆ ಕಟ್ಟಿ ಹಾಕಿದರು. ಆಮ್ರಾಹ್ ಬ್ರೂಕ್ಸ್ 20 ರನ್ ಗಳಿಸಿದ್ದೇ ತಂಡದ ಆಟಗಾರರ ಅತ್ಯಧಿಕ ಮೊತ್ತವಾಗಿದೆ.
-
A commanding performance from India in the first T20I 💪
— ICC (@ICC) July 29, 2022 " class="align-text-top noRightClick twitterSection" data="
Watch #WIvIND for FREE on https://t.co/CPDKNxoJ9v (in select regions) 📺 | 📝 Scorecard: https://t.co/2MDSoy6W3V pic.twitter.com/mjU8nFoiB1
">A commanding performance from India in the first T20I 💪
— ICC (@ICC) July 29, 2022
Watch #WIvIND for FREE on https://t.co/CPDKNxoJ9v (in select regions) 📺 | 📝 Scorecard: https://t.co/2MDSoy6W3V pic.twitter.com/mjU8nFoiB1A commanding performance from India in the first T20I 💪
— ICC (@ICC) July 29, 2022
Watch #WIvIND for FREE on https://t.co/CPDKNxoJ9v (in select regions) 📺 | 📝 Scorecard: https://t.co/2MDSoy6W3V pic.twitter.com/mjU8nFoiB1
ಜಾಸನ್ ಹೋಲ್ಡರ್ ಸೊನ್ನೆ ಸುತ್ತಿದರೆ, ನಾಯಕ ನಿಕೋಲಸ್ ಪೂರನ್ 18, ರೋವಮನ್ ಪೊವೆಲ್14, ಶಿಮ್ರಾನ ಹೆಟ್ಮಾಯಿರ್ 14, ಅಕೀಲ್ ಹುಸೈನ್ 11 ಕೀಮೋ ಪೌಲ್ 19 ರನ್ ಗಳಿಸಿದರು. ತಂಡ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡ 122 ರನ್ ಗಳಿಸಿಲಷ್ಟೇ ಸಾಧ್ಯವಾಯಿತು.
ತ್ರಿವಳಿ ಸ್ಪಿನ್ನರ್ಗಳಾದ ಆರ್.ಅಶ್ವಿನ್, ರವಿ ಬಿಷ್ಣೋಯಿ ತಲಾ 2 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 1, ಅರ್ಷದೀಪ್ ಸಿಂಗ್ 2, ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದು ಗೆಲುವಿನ ಶಾಸ್ತ್ರ ಮುಗಿಸಿದರು.
ರೋಹಿತ್, ಕಾರ್ತಿಕ್ ಧಮಾಕಾ: ಟಾಸ್ ಗೆದ್ದು ಮೊದಲು ಬ್ಯಾಟ್ ಆಯ್ದುಕೊಂಡ ನಾಯಕ ರೋಹಿತ್, ಇದೇ ಮೊದಲ ಬಾರಿಗೆ ಸೂರ್ಯಕುಮಾರ್ ಯಾದವ್ರನ್ನು ಆರಂಭಿಕರನ್ನಾಗಿ ಕಣಕ್ಕಿಳಿಸಿದರು. ಇಬ್ಬರೂ ಸೇರಿ ಮೊದಲ ವಿಕೆಟ್ಗೆ 44 ರನ್ ಗಳಿಸಿದರು. ಉತ್ತಮವಾಗಿ ಆಡುತ್ತಿದ್ದ ಸೂರ್ಯಕುಮಾರ್(24) ಅಕೀಲ್ ಹುಸೈನ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಔಟಾದರು.
ಏಕದಿನ ಸರಣಿಯಲ್ಲಿ ವಿಂಡೀಸ್ ಬೌಲರ್ಗಳ ಚಳಿ ಬಿಡಿಸಿದ್ದ ಶ್ರೇಯಸ್ ಅಯ್ಯರ್ ಸೊನ್ನೆ ಸುತ್ತಿದರು. ವಿಶ್ರಾಂತಿಯ ಬಳಿಕ ತಂಡ ಸೇರಿದ ರಿಷಬ್ ಪಂತ್ 14 ರನ್ ಮಾಡಿದರೆ, ಬಹು ನಿರೀಕ್ಷೆಯ ಆಟಗಾರನಾಗಿ ಗುರುತಿಸಿಕೊಂಡ ಹಾರ್ದಿಕ್ ಪಾಂಡ್ಯಾ 1 ರನ್ ಗಳಿಸಿ ಅಭಿಮಾನಿಗಳ ನಂಬಿಕೆ ಹುಸಿ ಮಾಡಿದರು.ಆಲ್ರೌಂಡರ್ ರವೀಂದ್ರ ಜಡೇಜಾ 16 ರನ್ಗಳಿಗೆ ಔಟಾದರು.
ಒಂದೆಡೆ ವಿಕೆಟ್ ಬೀಳುತ್ತಿದ್ದರೆ ಗಟ್ಟಿಯಾಗಿ ನಿಂತ ನಾಯಕ ರೋಹಿತ್ ಶರ್ಮಾ 44 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್, 7 ಬೌಂಡರಿ ಸಮೇತ 64 ರನ್ ಸಿಡಿಸಿ ಔಟಾದರು. ಕೊನೆಯಲ್ಲಿ ರನ್ ಪೇರಿಸುವ ಜವಾಬ್ದಾರಿ ಹೊತ್ತ ದಿನೇಶ್ ಕಾರ್ತಿಕ್, ಆರ್. ಅಶ್ವಿನ್ (13) ಜೊತೆಗೂಡಿ
52 ರನ್ ಬಾರಿಸಿದರು. ಕಾರ್ತಿಕ್ 2 ಸಿಕ್ಸರ್, 4 ಬೌಂಡರಿ ಸಮೇತ 41 ರನ್ ಸಿಡಿಸಿದರು. ಇದರಿಂದ ಭಾರತ 6 ವಿಕೆಟ್ ನಷ್ಟಕ್ಕೆ 190 ರನ್ಗಳ ಬೃಹತ್ ಮೊತ್ತ ಪೇರಿಸಿತು. ವೆಸ್ಟ್ ಇಂಡೀಸ್ ಪರವಾಗಿ ಜೋಸೆಪ್ 2 ವಿಕೆಟ್ ಪಡೆದರೆ, ಹೋಲ್ಡರ್, ಒಬ್ಡೆ, ಕಿಮೋ ತಲಾ 1 ವಿಕೆಟ್ ಪಡೆದುಕೊಂಡರು.
ಓದಿ: ಟಿ-20 ಪಂದ್ಯ ನಡೆಯುತ್ತಿದ್ದಾಗ ಮೈದಾನದಲ್ಲಿ ಬಾಂಬ್ ಸ್ಫೋಟ.. ನಾಲ್ವರಿಗೆ ಗಾಯ