ETV Bharat / sports

IND vs NZ​ 2nd T20: ಟಾಸ್​ ಗೆದ್ದ ಭಾರತ ಬೌಲಿಂಗ್​​ ಆಯ್ಕೆ, ಹರ್ಷಲ್ ಪಟೇಲ್​ ಪದಾರ್ಪಣೆ

ನ್ಯೂಜಿಲ್ಯಾಂಡ್ (​New Zealand) ವಿರುದ್ಧದ ಎರಡನೇ ಟಿ20 (T20 Series) ಪಂದ್ಯದಲ್ಲಿ ಟಾಸ್​ ಗೆದ್ದಿರುವ ಟೀಂ ಇಂಡಿಯಾ (Team India) ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ. ಸ್ಟಾರ್​ ಬೌಲರ್​ ಹರ್ಷಲ್ ಪಟೇಲ್ (Harshal Patel )​ ಡೆಬ್ಯು ಮಾಡಿದ್ದಾರೆ.

New Zealand
New Zealand
author img

By

Published : Nov 19, 2021, 7:05 PM IST

ರಾಂಚಿ(ಜಾರ್ಖಂಡ್​): ಪ್ರವಾಸಿ ನ್ಯೂಜಿಲ್ಯಾಂಡ್​ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಟಾಸ್​ ಗೆದ್ದ ಟೀಂ ಇಂಡಿಯಾ (India vs New Zealand) ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ. ತಂಡದ ಪರ ಬಲಗೈ ವೇಗದ ಬೌಲರ್​ ಹರ್ಷಲ್​ ಪಟೇಲ್​​ ಪದಾರ್ಪಣೆ ಮಾಡಿದ್ದಾರೆ.

ಜೈಪುರ್​ ಸವಾಯಿ ಮಾನ್ಸಿಂಗ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಈಗಾಗಲೇ ಗೆಲುವು ದಾಖಲು ಮಾಡಿರುವ ರೋಹಿತ್ ಶರ್ಮಾ ಇಂದಿನ ಪಂದ್ಯದಲ್ಲಿ ಗೆದ್ದು, ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ದಾಖಲು ಮಾಡಿದರೆ ಕ್ಯಾಪ್ಟನ್​ ಆಗಿ ರೋಹಿತ್ ಶರ್ಮಾ (Rohit Sharma) ಹಾಗೂ ಕೋಚ್​ ರಾಹುಲ್​ ದ್ರಾವಿಡ್​ಗೆ ಸ್ಮರಣಿಯ ಸರಣಿಯಾಗಲಿದೆ. ಜೈಪುರ್​ದ ರಾಂಚಿಯಲ್ಲಿ ಈ ಪಂದ್ಯ ಆರಂಭಗೊಂಡಿದೆ.

ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ(IPL) ಆರ್​ಸಿಬಿ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿರುವ ಹರ್ಷಲ್ ಪಟೇಲ್ ಇಂದಿನ ಪಂದ್ಯಕ್ಕಾಗಿ ಟೀಂ ಇಂಡಿಯಾ ಪರ ಡೆಬ್ಯು ಮಾಡಿದ್ದು, ಮೊಹಮ್ಮದ್ ಸಿರಾಜ್​ ಬದಲಿಗೆ ಈ ಬೌಲರ್​ಗೆ ಮಣೆ ಹಾಕಲಾಗಿದೆ.

ಇದನ್ನೂ ಓದಿ: ವಿಗ್ರಹಕ್ಕೆ ಚಿಕಿತ್ಸೆ ನೀಡಲು ನಿರಾಕರಿಸಿದ ವೈದ್ಯ.. ಕೋಪಗೊಂಡ ಅರ್ಚಕ ಮಾಡಿದ್ದೇನು ಗೊತ್ತಾ?

ಆಡುವ 11ರ ಬಳಗ ಇಂತಿದೆ

ಟೀಂ ಇಂಡಿಯಾ: ಕೆ.ಎಲ್ ರಾಹುಲ್​, ರೋಹಿತ್ ಶರ್ಮಾ(ಕ್ಯಾಪ್ಟನ್​), ಸೂರ್ಯಕುಮಾರ್​ ಯಾದವ್​, ರಿಷಭ್ ಪಂತ್​(ವಿ.ಕೀ), ಶ್ರೇಯಸ್​ ಅಯ್ಯರ್​, ವೆಂಕಟೇಶ್​​ ಅಯ್ಯರ್​, ಅಕ್ಸರ್ ಪಟೇಲ್​​, ಆರ್​.ಅಶ್ವಿನ್​, ಭುವನೇಶ್ವರ್​​ ಕುಮಾರ್​​, ದೀಪಕ್​ ಚಹರ್​​, ಹರ್ಷಲ್ ಪಟೇಲ್​

ನ್ಯೂಜಿಲ್ಯಾಂಡ್​: ಮಾರ್ಟಿನ್​ ಗಪ್ಟಿಲ್​,ಡರ್ಲೆ ಮಿಚೆಲ್​, ಮಾರ್ಕ್​ ಚಾಂಪನ್​, ಗ್ಲೆನ್​​ ಪಿಲಿಪ್ಸ್​, ಟಿಮ್​​ ಸಿಫರ್ಟ್​(ವಿ,ಕೀ), ಜೆಮ್ಸ್​ ನಿಶಮ್​, ಮಿಚೆನ್​ ಸ್ನ್ಯಾಂಟರ್, ಇಶಾ ಶೋಧಿ, ಥಿಮ್​ ಸೌಥಿ(ಕ್ಯಾಪ್ಟನ್​), ಆ್ಯಡಂ ಮಿಲ್ನೆ, ಟ್ರೆಂಟ್​ ಬೌಲ್ಟ್

ಮೊದಲ ಟಿ20 ಪಂದ್ಯದಲ್ಲಿ ಸ್ಟಾರ್​ ಆಟಗಾರರ ಅನುಪಸ್ಥಿತಿಯಲ್ಲಿ ಕಣಕ್ಕಿಳಿದಿದ್ದ ನ್ಯೂಜಿಲ್ಯಾಂಡ್​ ಸೋಲು ಕಂಡಿದ್ದು, ಹೀಗಾಗಿ ಇಂದಿನ ಪಂದ್ಯಕ್ಕಾಗಿ ಕೆಲವೊಂದು ಮಹತ್ವದ ಬದಲಾವಣೆ ಮಾಡಿಕೊಂಡು ಕಣಕ್ಕಿಳಿಯುತ್ತಿದೆ. ಪ್ರಮುಖವಾಗಿ ಆಲ್​ರೌಂಡರ್ ನೀಶಮ್​ ಮತ್ತು ಸ್ಪಿನ್ನರ್​ ಸೋಧಿ ಆಡುವ 11ರ ಬಳಗದಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.