ಸೆಂಚುರಿಯನ್ : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ನ 2ನೇ ದಿನದಾಟ ಮಳೆಯಿಂದ ರದ್ದಾಗಿದೆ. ಬೆಳಗ್ಗೆಯಿಂದ ನಿರಂತರ ಮಳೆ ಸುರಿದಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ.
ಸೋಮವಾರ ಬೆಳಗ್ಗೆ ಸಣ್ಣದಾಗಿ ಶುರುವಾರ ಮಳೆ ನಂತರ ಹೆಚ್ಚಾಗಿ 2ನೇ ದಿನದ 90 ಓವರ್ಗಳ ಆಟ ನಷ್ಟವಾಗುವಂತೆ ಮಾಡಿದೆ. ಇದರಿಂದ ಭಾರತ ತಾನು ನೀಡಬೇಕೆಂದುಕೊಂಡಿದ್ದ ಟಾರ್ಗೆಟ್ನಲ್ಲಿ ಅನಿವಾರ್ಯವಾಗಿ ಬದಲಾವಣೆ ಮಾಡಿಕೊಳ್ಳಬೇಕಿದೆ. ಮತ್ತು 3ನೇ ದಿನದಾಟದಲ್ಲಿ ತುಸು ವೇಗವಾಗಿ ಆಡಬೇಕಾಗಿದೆ.
-
Unfortunately, due to the large volume of rain today at Centurion, play has been called off for the day. #SAvIND pic.twitter.com/NQ5Jbc8MlJ
— BCCI (@BCCI) December 27, 2021 " class="align-text-top noRightClick twitterSection" data="
">Unfortunately, due to the large volume of rain today at Centurion, play has been called off for the day. #SAvIND pic.twitter.com/NQ5Jbc8MlJ
— BCCI (@BCCI) December 27, 2021Unfortunately, due to the large volume of rain today at Centurion, play has been called off for the day. #SAvIND pic.twitter.com/NQ5Jbc8MlJ
— BCCI (@BCCI) December 27, 2021
ಪ್ರಸ್ತುತ ವಿರಾಟ್ ಕೊಹ್ಲಿ ಬಳಗ 3 ವಿಕೆಟ್ ಕಳೆದುಕೊಂಡು 272 ರನ್ಗಳಿಸಿದೆ. ಪಂದ್ಯವನ್ನು ಕೇವಲ ಉಳಿದ ಮೂರು ದಿನಗಳಲ್ಲಿ ಗೆಲ್ಲಬೇಕಾದರೆ ಮಂಗಳವಾರ ವೇಗವಾಗಿ ರನ್ಗಳಿಸಬೇಕಿದೆ.
ಸೋಮವಾರ ಎರಡು ಬಾರಿ ಮಳೆ ನಿಂತರೂ ಇನ್ನೇನು ಮೈದಾನಕ್ಕೆ ಪ್ರವೇಶಿಸಬೇಕು ಎನ್ನುವಷ್ಟರಲ್ಲಿ ಮತ್ತೆ ಶುರುವಾಗಿ ಎರಡೂ ತಂಡದ ಆಟಗಾರರನ್ನು ಹತಾಷೆಗೊಳ್ಳುವಂತೆ ಮಾಡಿತು.
ಐದಾರು ಗಂಟೆ ನಿರಂತರ ಮಳೆಯಾಗಿದ್ದರಿಂದ ಸೆಂಚುರಿಯನ್ ಮೈದಾನ ಸಂಪೂರ್ಣ ತೇವವಾಗಿದೆ. ಹಾಗಾಗಿ, ಎರಡನೇ ದಿನದಾಟವನ್ನು ರದ್ದುಗೊಳಿಸಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
ಕೆಎಲ್ ರಾಹುಲ್ 248 ಎಸೆತಗಳಲ್ಲಿ 17 ಬೌಂಡರಿ ಮತ್ತು 1 ಸಿಕ್ಸರ್ ಸಹಿತ ಅಜೇಯ 122 ಮತ್ತು ಅಜಿಂಕ್ಯ ರಹಾನೆ 81 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ ಅಜೇಯ 40 ರನ್ಗಳಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಮಾಡಲು ಕಾಯುತ್ತಿದ್ದಾರೆ. ಆರಂಭಿಕ ಬ್ಯಾಟರ್ ಮಯಾಂಕ್ ಅಗರ್ವಾಲ್ 60 ಮತ್ತು ನಾಯಕ ವಿರಾಟ್ ಕೊಹ್ಲಿ 35 ರನ್ಗಳಿಸಿದ್ದರು.
ಇದನ್ನೂ ಓದಿ:ರೋಹಿತ್ಗೆ ಏಕದಿನ ನಾಯಕತ್ವ ವಹಿಸಿದ್ದು ಒಳ್ಳೆಯ ನಿರ್ಧಾರ: ರವಿಶಾಸ್ತ್ರಿ