ಪಲ್ಲೆಕೆಲೆ: ನಜ್ಮುಲ್ ಹೊಸೇನ್ ಹಾಗೂ ನಾಯಕ ಮೊಮಿನುಲ್ ಹಕ್ ಅವರ ಭರ್ಜರಿ ಶತಕದ ನೆರವಿನಿಂದ ಪ್ರವಾಸಿ ಬಾಂಗ್ಲಾದೇಶ ಮೊದಲ ಟೆಸ್ಟ್ನಲ್ಲಿ ಶ್ರೀಲಂಕಾ ವಿರುದ್ಧ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ.
2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ನಲ್ಲಿ 4 ವಿಕೆಟ್ ಕಳೆದುಕೊಂಡು 474 ರನ್ಗಳಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದೆ.
ಬುಧವಾರ ಮೊದಲ ದಿನ ಇನ್ನಿಂಗ್ಸ್ ಆರಂಭಿಸಿ ಬಾಂಗ್ಲಾದೇಶ 8 ರನ್ಗಳಾಗುವಷ್ಟರಲ್ಲಿ ಸೈಫ್ ಹಸನ್ (0) ವಿಕೆಟ್ ಕಳೆದುಕೊಂಡಿತು. ಆದರೆ, 2ನೇ ವಿಕೆಟ್ಗೆ ಒಂದಾದ ತಮೀಮ್ ಮತ್ತು ನಜ್ಮುಲ್ ಹುಸೇನೆ ಶಾಂಟೊ 144 ರನ್ಗಳ ಜೊತೆಯಾಟ ನೀಡಿದರು. 101 ಎಸೆತಗಳಲ್ಲಿ 15 ಬೌಂಡರಿ ಸಿಡಿಸಿದ್ದ ತಮೀಮ್ ಇಕ್ಬಾಲ್ 90 ರನ್ಗಳಿಸಿ ವಿಶ್ವ ಫರ್ನಾಂಡೊಗೆ ವಿಕೆಟ್ ಒಪ್ಪಿಸಿ 10 ರನ್ಗಳಿಂದ ಶತಕ ತಪ್ಪಿಸಿಕೊಂಡರು.
-
The solid 242-run partnership between Najmul Hossain and Mominul Haque is:
— ICC (@ICC) April 22, 2021 " class="align-text-top noRightClick twitterSection" data="
🔹 Bangladesh's highest for the third wicket in Tests
🔹 Their fifth-highest overall in terms of runs in Tests#SLvBAN | #WTC21 pic.twitter.com/cxwFbKMep5
">The solid 242-run partnership between Najmul Hossain and Mominul Haque is:
— ICC (@ICC) April 22, 2021
🔹 Bangladesh's highest for the third wicket in Tests
🔹 Their fifth-highest overall in terms of runs in Tests#SLvBAN | #WTC21 pic.twitter.com/cxwFbKMep5The solid 242-run partnership between Najmul Hossain and Mominul Haque is:
— ICC (@ICC) April 22, 2021
🔹 Bangladesh's highest for the third wicket in Tests
🔹 Their fifth-highest overall in terms of runs in Tests#SLvBAN | #WTC21 pic.twitter.com/cxwFbKMep5
ಇಕ್ಬಾಲ್ ನಂತರ ಶಾಂಟೊ ಜೊತೆಗೂಡಿದ ನಾಯಕ ಮೊಮಿನುಲ್ ಹಕ್ 242 ರನ್ಗಳ ಬೃಹತ್ ಜೊತೆಯಾಟ ನೀಡಿ ಲಂಕಾ ಬೌಲರ್ಗಳನ್ನು ಕಾಡಿದರು. ಶಾಂಟೊ 378 ಎಸೆತಗಳಲ್ಲಿ 17 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 163 ರನ್ಗಳಿಸಿ ಲಹಿರು ಕುಮಾರ ಬೌಲಿಂಗ್ನಲ್ಲಿ ಔಟ್ ಆದರು.
ನಾಯಕ ಮೊಮಿನುಲ್ ಹಕ್ ಕೂಡ ತಮ್ಮ 11ನೇ ಶತಕ ಪೂರೈಸಿದರು. ಅವರು 304 ಎಸೆತಗಳಲ್ಲಿ 11 ಬೌಂಡರಿ ಸಹಿತ 127 ರನ್ಗಳಿಸಿ ವಿದೇಶದಲ್ಲಿ ತಮ್ಮ ಮೊದಲ ಶತಕ ಬಾರಿಸಿದರು. ಈ ಹಿಂದಿನ 10 ಶತಕಗಳೂ ತವರಿನಲ್ಲಿ ಸಿಡಿಸಿದ್ದರು.
ಎರಡನೇ ದಿನದಂತ್ಯಕ್ಕೆ ಇನ್ನೂ 25 ಓವರ್ಗಳಿರುವಾಗ ಮಂದ ಬೆಳಕಿನ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಪ್ರಸ್ತುತ ಮುಶ್ಫೀಕರ್ ರಹೀಮ್ 43 ಮತ್ತು ಲಿಟ್ಟನ್ ದಾಸ್ 25 ರನ್ಗಳಿಸಿ ಕ್ರೀಸ್ನಲ್ಲಿದ್ದಾರೆ.
ಇದನ್ನು ಓದಿ:ತಮ್ಮ ಕ್ಷೇತ್ರದ ಜನತೆಗೆ ಫ್ಯಾಬಿಫ್ಲೂ ಉಚಿತವಾಗಿ ವಿತರಿಸುವುದಾಗಿ ಗಂಭೀರ್ ಘೋಷಣೆ: ಎಎಪಿ, ಕಾಂಗ್ರೆಸ್ ಟೀಕೆ