ETV Bharat / sports

1983 Cricket World cup: ಭಾರತದ 83ರ ವಿಶ್ವಕಪ್​ ಗೆಲುವಿಗೆ 40ರ ಸಂಭ್ರಮ: ಐತಿಹಾಸಿಕ ಫೈನಲ್ ಪಂದ್ಯ ಹೇಗಿತ್ತು ಗೊತ್ತೇ?

1983ರಲ್ಲಿ ನಡೆದ ಕ್ರಿಕೆಟ್ ಕದನದಲ್ಲಿ ವೆಸ್ಟ್​ ಇಂಡೀಸ್​ ದೈತ್ಯರನ್ನು ಸೋಲಿಸಿ ಗೆಲುವು ಸಾಧಿಸಿದ ಭಾರತಕ್ಕೆ ಚೊಚ್ಚಲ ವಿಶ್ವಕಪ್​ ಪ್ರಾಪ್ತವಾಗಿತ್ತು. ಆ ಗೆಲುವಿಗೀಗ 40 ವರ್ಷ ಸಂದಿದೆ.

1983 ರ ವಿಶ್ವಕಪ್​ ಗೆಲುವಿಗೆ ಇಂದಿಗೆ 40 ರ ಸಂಭ್ರಮ

author img

By

Published : Jun 25, 2023, 7:25 AM IST

ಅದು ಜೂನ್​ 25, 1983. ಭಾರತ ಕ್ರಿಕೆಟ್​ಗೆ ಐತಿಹಾಸಿಕ ದಿನ. ಅಂದು ವಿಶ್ವದ ಬಲಾಢ್ಯ ತಂಡವಾಗಿದ್ದ ವೆಸ್ಟ್​ ಇಂಡೀಸ್​ ದೈತ್ಯರನ್ನು ಸದೆಬಡಿದು ಭಾರತ ಚೊಚ್ಚಲ ಏಕದಿನ ವಿಶ್ವಕಪ್​ ಎತ್ತಿ ಹಿಡಿದಿತ್ತು. ಅಂದಿನ ಮಹತ್ಸಾಧನೆಗೆ ಇಂದಿಗೆ 40ರ ತುಂಬು ಸಂಭ್ರಮ. ಎಲ್ಲ ಅಸಾಧ್ಯಗಳನ್ನು ಮೆಟ್ಟಿನಿಂತು ಕಪಿಲ್​ ದೇವ್​ ನಾಯಕತ್ವದ ಭಾರತ ತಂಡ ಚಾಂಪಿಯನ್​ ಆಗಿದ್ದನ್ನು ವಿಶ್ವವೇ ಬೆರಗುಗಣ್ಣಿನಿಂದ ನೋಡಿ ಖುಷಿಪಟ್ಟಿತ್ತು. ವಿಶ್ವಕಪ್​ ಗೆದ್ದು 40 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅದಾನಿ ಸಮೂಹ ಅಂದಿನ ವಿಜೇತ ತಂಡದ ಸದಸ್ಯರನ್ನು ಗೌರವಿಸಿದೆ.

ಆ ದಿನಗಳಲ್ಲಿ ಕ್ರಿಕೆಟ್​ ಅಂದರೆ ಅದು ವೆಸ್ಟ್​ ಇಂಡೀಸ್​ ಎಂಬಂತಿತ್ತು. ಕ್ಲೈವ್​ ಲಾಯ್ಡ್​, ವಿವ್​ ರಿಚರ್ಡ್ಸ್‌​, ಲ್ಯಾರಿ ಗೋಮ್ಸ್, ಆ್ಯಂಡಿ ರಾಬರ್ಟ್ಸ್, ಮೈಕೆಲ್ ಹೋಲ್ಡಿಂಗ್​ರಂತಹ ದೈತ್ಯ ಆಟಗಾರರು ಇದ್ದಲ್ಲಿ ಜಯ ಕಟ್ಟಿಟ್ಟ ಬುತ್ತಿಯಾಗಿತ್ತು. 15 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ತಂಡ ಪ್ರಾಬಲ್ಯ ಸಾಧಿಸಿತ್ತು. 1983ರ ವಿಶ್ವಕಪ್​ ಗೆಲುವಿನ ಏಕೈಕ ನೆಚ್ಚಿನ ತಂಡವಾಗಿತ್ತು.

  • Honoured by the presence of the Heroes of India's 1983 World Cup triumph on Adani Day. Their grit and resilience inspired an entire generation of Indians to think big. Privileged to join them in wishing our team victory at the 2023 Cricket World Cup. #JeetengeHum pic.twitter.com/bUTEQJCNOD

    — Gautam Adani (@gautam_adani) June 24, 2023 " class="align-text-top noRightClick twitterSection" data=" ">

ಆದರೆ, ಭಾರತದ ಕಪಿಲ್​ ದೇವ್​, ಸುನೀಲ್​ ಗವಾಸ್ಕರ್​, ಮದನ್​ನಾಲ್​, ಕೃಷ್ಣಮಾಚಾರಿ ಶ್ರೀಕಾಂತ್​, ಮೊಹಿಂದರ್ ಅಮರನಾಥ್ ಅವರನ್ನೊಳಗೊಂಡ ತಂಡ ವಿಂಡೀಸ್​ ಸಂಹಾರ ಮಾಡಿ ವಿಶ್ವಕಪ್​ ಜಯಿಸುತ್ತೆ ಅಂತ ಯಾರೂ ಕೂಡ ಊಹಿಸಿರಲಿಲ್ಲ. ಕೃಷ್ಣಮಾಚಾರಿ ಶ್ರೀಕಾಂತ್​ ಅವರ ಬ್ಯಾಟಿಂಗ್​, ಮದನ್​ಲಾಲ್​ ಮತ್ತು ಮೊಹಿಂದರ್​ ಅಮರನಾಥ್​ರ ಸಾಹಸದಿಂದ ತಂಡ ಫೈನಲ್​ ಗೆದ್ದು ನೂತನ ಚಾಂಪಿಯನ್​ ಆಗಿ ಹೊರಹೊಮ್ಮಿತ್ತು.

ಹೀಗಿತ್ತು ರೋಚಕ ಫೈನಲ್​ ಪಂದ್ಯ: ಭಾರತ ಆಡಿದ 7 ಪಂದ್ಯಗಳಲ್ಲಿ 6ರಲ್ಲಿ ಗೆದ್ದು ವೆಸ್ಟ್​ ಇಂಡೀಸ್ ವಿರುದ್ಧವೇ 1 ಪಂದ್ಯ ಸೋತು ಫೈನಲ್​ಗೇರಿತ್ತು. ಅತ್ತ ಕೆರೆಬಿಯನ್ನರು ಕೂಡ ಅದೇ ಹಾದಿಯಲ್ಲಿ ಅಂತಿಮ ಕದನಕ್ಕೆ ಬಂದಿದ್ದರು. ಫೈನಲ್​ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್​ ಎದುರಾದಾಗ ಇಡೀ ವಿಶ್ವವೇ ಮತ್ತೊಮ್ಮೆ ವಿಂಡೀಸ್​ ಚಾಂಪಿಯನ್​ ಆಗಲಿದೆ ಎಂದು ಷರಾ ಬರೆದಿದ್ದರು. ಆದರೆ, ಕಪಿಲ್​ದೇವ್​ ನೇತೃತ್ವದ ಭಾರತ ತಂಡ ಅಸಾಧಾರಣ ಪ್ರದರ್ಶನ ತೋರಿತು. ದೈತ್ಯ ವಿಂಡೀಸ್​ ಬೌಲರ್​ಗಳನ್ನು ಎದುರಿಸಿ 183 ರನ್​ ಗಳಿಸಿತು.

  • 𝐇𝐈𝐒𝐓𝐎𝐑𝐈𝐂 & 𝐈𝐂𝐎𝐍𝐈𝐂 🏆#OnThisDay in the 1983 Prudential Cup, a team united a nation to fall in love with this great game after their incredible victory! 🇮🇳

    Who else wants to rewatch the highlights of our maiden World Cup triumph? 🥹#PlayBold #TeamIndia pic.twitter.com/Hm46mS8TIQ

    — Royal Challengers Bangalore (@RCBTweets) June 25, 2023 " class="align-text-top noRightClick twitterSection" data=" ">

184 ರನ್​ಗಳ ಗುರಿ ಪಡೆದ ವಿಂಡೀಸ್​ಗೆ ಭಾರತ ಸುಲಭ ತುತ್ತಾಗಲಿದೆ ಎಂದೇ ಭಾವಿಸಲಾಗಿತ್ತು. ಛಲ ಬಿಡದ ಮದನ್​ಲಾಲ್​ ಮತ್ತು ಮೊಹಿಂದರ್​ ಅಮರ್​ನಾಥ್​ ಅತಿರಥರ ಸಂಹಾರ ನಡೆಸಿ (ತಲಾ 3 ವಿಕೆಟ್​) ಕೆರೆಬಿಯನ್ನರನ್ನು 140 ರನ್​​ಗೆ ಆಲೌಟ್​ ಮಾಡುವ ಮೂಲಕ 43 ರನ್​ಗಳಿಂದ ಗೆಲುವು ಸಾಧಿಸಿ ದೇಶಕ್ಕೆ ಮೊದಲ ಏಕದಿನ ವಿಶ್ವಕಪ್​ ತಂದುಕೊಟ್ಟರು. ವಿವ್​ ರಿಚರ್ಡ್ಸ್​ 33, ಕ್ಲೈವ್​ ಲಾಯ್ಡ್​ರನ್ನು 8 ರನ್​ಗೆ ಕಟ್ಟಿ ಹಾಕಲಾಗಿತ್ತು. ನಾಯಕ ಕಪಿಲ್​ದೇವ್​ ಅವರು ಕಪ್​ ಎತ್ತಿ ಹಿಡಿದು ಭಾರತದ ವಿಜಯ ಪತಾಕೆ ಹಾರಿಸಿದ್ದರು.

ಅದಾನಿ ಗ್ರೂಪ್​ನಿಂದ ಗೌರವ: 1983ರ ವಿಶ್ವಕಪ್​ ಗೆಲುವಿಗೆ 40 ವರ್ಷ ಸಂದಿದ ಹಿನ್ನೆಲೆಯಲ್ಲಿ ಅದಾನಿ ಗ್ರೂಪ್​ ಅಹಮದಾಬಾದ್​ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು. ವಿಶ್ವಕಪ್ ವಿಜೇತ ಸದಸ್ಯರನ್ನು ಒಂದೆಡೆ ಸೇರಿಸಿ ಎಲ್ಲರನ್ನು ಗೌರವಿಸಿತು. ಅದಾನಿ ಗ್ರೂಪ್​ ಸಮೂಹದ ಮುಖ್ಯಸ್ಥ ಗೌತಮ್​ ಅದಾನಿ ಕಪಿಲ್​ ದೇವ್​ ಸೇರಿದಂತೆ ಎಲ್ಲ ಆಟಗಾರರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಿದರು.

ಇದನ್ನೂ ಓದಿ: IND vs WI: ವೆಸ್ಟ್​ ಇಂಡೀಸ್​ ಪ್ರವಾಸದಿಂದ ಪೂಜಾರಗೆ ಕೊಕ್​.. ಮೊದಲಿನಿಂದ ಮತ್ತೆ ಆರಂಭಕ್ಕೆ ಚೇತೇಶ್ವರ ಅಣಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.