ಮೆಲ್ಬೋರ್ನ್: ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ತೋರಿ ಮುನ್ನಡೆ ಸಾಧಿಸುತ್ತಿದ್ದಂತೆ ಎಂಸಿಜಿಯಲ್ಲಿ ನೆರದಿದ್ದ ಆಸ್ಟ್ರೇಲಿಯನ್ ಅಭಿಮಾನಿಗಳು ಸಂಭ್ರಮಾಚರಣೆ ಮಾಡುವ ಕುಡಿದು ಅನುಚಿತವಾಗಿ ವರ್ತಿಸಿದ್ದಾರೆ. ಈ ಕಾರಣ ಸಾಕಷ್ಟು ಅಭಿಮಾನಿಗಳನ್ನು ಪೊಲೀಸರು ಮೈದಾನದಿಂದ ಹೊರಹಾಕಿದ್ದಾರೆ.
ಮೊದಲ ದಿನವೇ ಇಂಗ್ಲೆಂಡ್ ತಂಡವನ್ನು 185ಕ್ಕೆ ಆಲೌಟ್ ಮಾಡಿದ್ದ ಆಸ್ಟ್ರೇಲಿಯಾ ತಂಡ ಎರಡನೇ ಇನ್ನಿಂಗ್ಸ್ನಲ್ಲಿ 267 ರನ್ಗಳಿಸಿ 82 ರನ್ಗಳ ಮುನ್ನಡೆ ಪಡೆದುಕೊಂಡಿತ್ತು. ಇದರ ಜೊತೆಗೆ ಸ್ಥಳೀಯ ಆಟಗಾರರಾದ ಮಾರ್ಕಸ್ ಹ್ಯಾರಿಸ್ 72 ರನ್ಗಳಿಸಿದರೆ, ಎರಡನೇ ಇನ್ನಿಂಗ್ಸ್ನಲ್ಲಿ ಸ್ಕಾಟ್ ಬೋಲೆಂಡ್ 2 ವಿಕೆಟ್ ಜೊತೆಗೆ ಪಡೆದು ಮಿಂಚಿದ್ದರು. ಈ ಕಾರಣದಿಂದ ಸ್ಥಳೀಯ ಅಭಿಮಾನಿಗಳು ಶೂನಲ್ಲಿ ಮಧ್ಯಪಾನ ಮಾಡಿ ಅನುಚಿತವಾಗಿ ವರ್ತಿಸಿದ್ದರಿಂದ ಅವರನ್ನು ಮೈದಾನದಿಂದ ಹೊರಹಾಕಲಾಗಿದೆ.
ಡೈಲಿ ಮೇಲ್ ವರದಿಯ ಪ್ರಕಾರ ವಿಕ್ಟೋರಿಯಾ ಪೊಲೀಸರು ಕುಡಿದು ಗಲಾಟೆ ಮಾಡುತ್ತಿದ್ದ 100 ವೀಕ್ಷಕರನ್ನು ಮೈದಾನದಿಂದ ಹೊರ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ 2ನೇ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ನಿರಂತರ ವಿಕೆಟ್ ಕಳೆದುಕೊಳ್ಳುತ್ತಿದ್ದರೆ ಆಸೀಸ್ ಪ್ರೇಕ್ಷಕರು ಸಂಭ್ರಮಾಚರಣೆ ಜೋರಾಗುತ್ತಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಸ್ತುತ ಇಂಗ್ಲೆಂಡ್ 31 ರನ್ಗಳಿಸಿ 4 ವಿಕೆಟ್ ಕಳೆದುಕೊಂಡಿದೆ. ನಾಯಕ ಜೋ ರೂಟ್ ಮತ್ತು ಬೆನ್ ಸ್ಟೋಕ್ಸ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇನ್ನು 51 ರನ್ಗಳ ಹಿನ್ನಡೆಯಲ್ಲಿದೆ.
ಇದನ್ನೂ ಓದಿ:Ashes series : 2ನೇ ಇನ್ನಿಂಗ್ಸ್ನಲ್ಲೂ ಇಂಗ್ಲೆಂಡ್ ಕಳಪೆ ಆರಂಭ, ಆಸೀಸ್ ಹಿಡಿತದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್