ETV Bharat / sports

ವರ್ಲ್ಡ್​ ಟೂರ್​ ಫೈನಲ್ಸ್​ನಲ್ಲಿ 2ನೇ ಸೋಲು ಕಂಡ ಸಿಂಧು, ಶ್ರೀಕಾಂತ್​: ಸೆಮೀಸ್ ಹಾದಿ ಕಠಿಣ - PV Sindhu latest news

ಗುರುವಾರ ನಡೆದ ಪಂದ್ಯದಲ್ಲಿ ಸಿಂಧು ವಿರುದ್ಧ ಥಾಯ್​ ಆಟಗಾರ್ತಿ 21-18, 21-13ರಲ್ಲಿ ಗೆಲುವು ಸಾಧಿಸಿದರು. ಮೊದಲ ಸೆಟ್​ನಲ್ಲಿ ಇಬ್ಬರಿಂದಲೂ ಕಠಿಣ ಪೈಪೋಟಿ ಕಂಡುಬಂದಿತು. ಒಂದು ಹಂತದಲ್ಲಿ ಇಬ್ಬರು 18-18ರಲ್ಲಿ ಸಮಬಲ ಸಾಧಿಸಿದ್ದರು. ಆದರೆ ಇಂಟಾನನ್​ ಭಾರತೀಯ ಆಟಗಾರ್ತಿಯ ಸವಾಲನ್ನು ಮೆಟ್ಟಿ ನಿಂತು 21-18ರಲ್ಲಿ ಗೇಮ್ ಗೆದ್ದರು.

ವರ್ಲ್ಡ್​ ಟೂರ್​ ಫೈನಲ್ಸ್​ನಲ್ಲಿ ಸಿಂಧುಗೆ ಸೋಲು

author img

By

Published : Jan 28, 2021, 3:42 PM IST

ಬ್ಯಾಂಕಾಕ್​: ಭಾರತ ತಂಡದ ಸ್ಟಾರ್​ ಶಟ್ಲರ್​ ಪಿ.ವಿ.ಸಿಂಧು ಗುರುವಾರ ವರ್ಲ್ಡ್​ ಟೂರ್​ ಫೈನಲ್ಸ್​ನ ಗುಂಪು ಹಂತದ 2ನೇ ಪಂದ್ಯದಲ್ಲೂ ಸೋಲು ಕಂಡಿದ್ದಾರೆ. ಒಲಿಂಪಿಕ್ಸ್​ ಬೆಳ್ಳಿ ಪದಕ ವಿಜೇತೆ ರಾಚನೊಕ್​ ಇಂಟಾನನ್​ ವಿರುದ್ಧ ಸೋಲು ಕಂಡಿದ್ದಾರೆ.

ಗುರುವಾರ ನಡೆದ ಪಂದ್ಯದಲ್ಲಿ ಸಿಂಧು ವಿರುದ್ಧ ಥಾಯ್​ ಆಟಗಾರ್ತಿ 21-18, 21-13ರಲ್ಲಿ ಗೆಲುವು ಸಾಧಿಸಿದರು. ಮೊದಲ ಸೆಟ್​ನಲ್ಲಿ ಇಬ್ಬರಿಂದಲೂ ಕಠಿಣ ಪೈಪೋಟಿ ಕಂಡುಬಂದಿತು. ಒಂದು ಹಂತದಲ್ಲಿ ಇಬ್ಬರು 18-18ರಲ್ಲಿ ಸಮಬಲ ಸಾಧಿಸಿದ್ದರು. ಆದರೆ ಇಂಟಾನನ್​ ಭಾರತೀಯ ಆಟಗಾರ್ತಿಯ ಸವಾಲನ್ನು ಮೆಟ್ಟಿ ನಿಂತು 21-18ರಲ್ಲಿ ಗೇಮ್ ಗೆದ್ದರು.

ಕಿಡಂಬಿ ಶ್ರೀಕಾಂತ್​
ಕಿಡಂಬಿ ಶ್ರೀಕಾಂತ್​

ಎರಡನೇ ಗೇಮ್​ನ ಆರಂಭದಲ್ಲಿ ಇದೇ ರೀತಿಯ ಪೈಪೋಟಿ ಕಂಡುಬಂದಿತು. ಆದರೆ ಮಧ್ಯಂತರದಲ್ಲಿ ಗೇರ್​ ಬದಲಿಸಿದ ಇಂಟಾನನ್ ಸಂಪೂರ್ಣ ಪ್ರಾಬಲ್ಯ ಸಾಧಿಸಿ 21-13ರಲ್ಲಿ ಪಂದ್ಯವನ್ನೇ ಗೆದ್ದುಕೊಂಡರು.

ಈಗಾಗಲೇ ಮೊದಲ ಪಂದ್ಯದಲ್ಲಿ ಸಿಂಧು ತೈವಾನ್​ನ ತಾಯ್​ ಜು ಯಿಂಗ್ ಕೈಯಲ್ಲಿ 19-21, 21-12, 21-17ರಲ್ಲಿ ಸೋಲು ಕಂಡಿದ್ದರು.

ಇದಕ್ಕೂ ಮುನ್ನ ನಡೆದ ಪುರುಷರ ಪಂದ್ಯದಲ್ಲಿ ಕಿಡಂಬಿ ಶ್ರೀಕಾಂತ್​ ತೈವಾನ್​ನ ವಾಂಗ್​ ಜು ವೀ ವಿರುದ್ಧ 21-19, 9-21,19-21ರಲ್ಲಿ ಸೋಲು ಕಂಡಿದ್ದರು. ಸತತ ಎರಡು ಫೈನಲ್ಸ್​ ಪಂದ್ಯದಲ್ಲಿ ಸೋಲು ಕಂಡಿರುವ ಭಾರತೀಯ ಆಟಗಾರರ ಸೆಮಿಫೈನಲ್​ ಹಾದಿ ತುಂಬಾ ಕಠಿಣವಾಗಿದೆ.

ಇದನ್ನು ಓದಿ:ವೈದ್ಯಕೀಯ ಪರೀಕ್ಷೆಗೆ ಒಳಗಾಗಲಿರುವ ದಾದಾ: ವರದಿ ಬಂದ ನಂತರ ಸ್ಟಂಟ್ ಅಳವಡಿಕೆ ಬಗ್ಗೆ ನಿರ್ಧಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.