ಬ್ಯಾಂಕಾಕ್: ಥಾಯ್ಲೆಂಡ್ ಬ್ಯಾಡ್ಮಿಂಟನ್ ಓಪನ್ 2021 ಪಂದ್ಯಾವಳಿ ನಡೆಯುತ್ತಿದ್ದು, ಆಟಗಾರ ತಾನೊಂಗ್‌ಸಾಕ್ ಸಾನ್ಸೊಂಬೂನ್‌ಸುಕ್ ಅವರನ್ನು ಎರಡು ಪಂದ್ಯಗಳಲ್ಲಿ ಸೋಲಿಸಿ 3ನೇ ಶ್ರೇಯಾಂಕದ ಆಂಡರ್ಸ್ ಆಂಟೊನ್ಸನ್ ಟೊಯೋಟಾ ಎರಡನೇ ಸುತ್ತಿಗೆ ಪದಾರ್ಪಣೆ ಮಾಡಿದ್ದಾರೆ.
ಭಾರತದ ಸಮೀರ್ ವರ್ಮಾ ಸಹ ಮಲೇಷ್ಯಾದ 8ನೇ ಶ್ರೇಯಾಂಕದ ಲೀ ಜಿಯಾ ಅವರನ್ನು 18-21, 27-25, 21-19 ಅಂತರದಲ್ಲಿ ಪರಾಭವಗೊಳಿಸಿದ್ದಾರೆ.
ಮಹಿಳಾ ಸಿಂಗಲ್ಸ್‌ನಲ್ಲಿ 4ನೇ ಶ್ರೇಯಾಂಕಿತ ಆಟಗಾರ್ತಿ ರತ್ಚನೋಕ್ ಇಂಟಾನನ್, ತನ್ನ ಮೊದಲ ಸುತ್ತಿನ ಪಂದ್ಯವನ್ನು 21-17, 21-8ರಲ್ಲಿ ಅಂತರದಲ್ಲಿ ಭಾರತೀಯ ಶೆಟ್ಲರ್ ಸೈನಾ ನೆಹ್ವಾಲ್ ವಿರುದ್ಧ ಗೆದ್ದಿದಾರೆ.
ಇನ್ನು ಕೊರಿಯಾದ ಸುಂಗ್ ಜಿ ಹ್ಯುನ್ 21-9, 21-14 ಅಂತರದಲ್ಲಿ ಮಲೇಷ್ಯಾದ ಸೋನಿಯಾ ಚಿಯಾ ಅವರನ್ನು ಸೋಲಿಸಿ ಎರಡನೇ ಸುತ್ತನ್ನು ಪ್ರವೇಶಿಸಿದ್ದಾರೆ.