ಕೌಲಾಲಂಪುರ್: ಮಲೇಷ್ಯಾ ಮಾಸ್ಟರ್ ಪ್ರಶಸ್ತಿ ಗೆದ್ದು ಸ್ವದೇಶಕ್ಕೆ ತೆರಳಲು ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಜಪಾನಿನ ಕೆಂಟೊ ಮೊಮೊಟ ಭೀಕರ ರಸ್ತೆ ಅಪಘಾತಕ್ಕೊಳಗಾಗಿದ್ದಾರೆ.
ಬ್ಯಾಡ್ಮಿಂಟನ್ ವಿಶ್ವಚಾಂಪಿಯನ್ ಆಗಿರುವ ನಂಬರ್ ಒನ್ ಬ್ಯಾಡ್ಮಿಂಟನ್ ತಾರೆ ಕೆಂಟೋ ಮೊಮೊಟ ಇತ್ತೀಚೆಗೆ ಕೌಲಾಲಂಪುರದಲ್ಲಿ ನಡೆದ ಮಲೇಷ್ಯಾ ಮಾಸ್ಟರ್ ಚಾಂಪಿಯನ್ಶಿಪ್ ಗೆದ್ದಿದ್ದರು. ಸ್ವದೇಶಕ್ಕೆ ಮರಳಲು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಕೆಂಟೋ ಇದ್ದ ಅವರಿದ್ದ ಕಾರಿಗೆ 30 ಟನ್ ತೂಕ್ ಟ್ರಕ್ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಈ ಅಪಘಾತದಲ್ಲಿ ಕೆಂಟೋ ಡ್ರೈವರ್ ಬವನ್ ನಗೆಸ್ವರವು ಎಂಬಾತ ಮೃತಪಟ್ಟಿದ್ದು, ಕೆಂಟೂ ಸೇರಿದಂತೆ ಇತರ ನಾಲ್ಕು ಜನರು ಗಂಭೀರಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮೊಮೊಟ ಅವರ ಮೂಗಿನ ಮೂಳೆ ಮುರಿದಿದ್ದು, ಮುಖದ ಮೇಲೆ ಕೂಡ ಗಾಯಗಳಾಗಿವೆ. ಇವರ ಜೊತೆಗಿದ್ದ ಇಂಗ್ಲೆಂಡ್ನ ಹಾಕೆಯ್ ಸಿಸ್ಟಮ್ ಆಪರೇಟರ್ ವಿಲಿಯಮ್ ಥಾಮಸ್ , ಜಪಾನ್ ಫಿಸಿಯೋಥೆರೆಫಿಸ್ಟ್ ಯು ಹರಯಮ ಹಾಗೂ ಅಸಿಸ್ಟಂಟ್ ಕೋಚ್ ಅರ್ಕಿಫುಕಿ ಮೊರಿಮೊಟೊ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವಿಶ್ವ ಬ್ಯಾಡ್ಮಿಂಟನ್ ಫಡರೇಷನ್ ತಿಳಿಸಿದೆ.