ನವದೆಹಲಿ: ಒಲಿಂಪಿಕ್ಸ್ ಬ್ಯಾಡ್ಮಿಂಟನ್ ವೇಳಾಪಟ್ಟಿ ಬಿಡುಗಡೆಯಾಗಿದೆ. ಭಾರತೀಯ ಸ್ಟಾರ್ಗಳಾದ ಪಿ.ವಿ ಸಿಂಧು-ಸಾಯಿ ಪ್ರಣೀತ್ ಮತ್ತು ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಅವರ ಆರಂಭಿಕ ಪಂದ್ಯಗಳ ವಿವರಣೆಗಳನ್ನು ಒಲಿಂಪಿಕ್ಸ್ ನಿರ್ವಾಹಕರು ಬಿಡುಗಡೆ ಮಾಡಿದ್ದಾರೆ.
ಮಹಿಳಾ ಸಿಂಗಲ್ಸ್ನಲ್ಲಿ 6 ನೇ ಶ್ರೇಯಾಂಕಿತರಾಗಿ ಆಡಲಿರುವ ಸಿಂಧು ಜುಲೈ 25ರಂದು ಇಸ್ರೇಲ್ನ ಪೊಲಿಕಾರ್ಪೋವಾ ಕ್ಸೆನಿಯಾ (Polikarpova Ksenia) ಅವರ ವಿರುದ್ಧ ಆಡಲಿದ್ದಾರೆ. ಪುರುಷರ ಸಿಂಗಲ್ಸ್ನಲ್ಲಿ ಸಾಯಿ ಪ್ರಣೀತ್ ಜುಲೈ 24ರಂದು ಡಿ ಗುಂಪಿನಲ್ಲಿ ಇಸ್ರೇಲ್ನ ಮಿಷ ಜಿಲ್ಬರ್ಮನ್ ಎದುರು ಕಾದಾಡಲಿದ್ದಾರೆ. ಸಿಂಗಲ್ಸ್ ವಿಭಾಗದಲ್ಲಿ ಗುಂಪು ಹಂತದ ಅಗ್ರಸ್ಥಾನಿಗಳು ನಾಕೌಟ್ ಹಂತಕ್ಕೆ ಪ್ರವೇಶ ಪಡೆಯಲಿದ್ದಾರೆ.
ವಿಶ್ವ ಡಬಲ್ಸ್ನಲ್ಲಿ 10ನೇ ಸ್ಥಾನದಲ್ಲಿರುವ ಸಾತ್ವಿಕ್-ಚಿರಾಗ್ ಶೆಟ್ಟಿ ಎ ಗುಂಪಿನಲ್ಲಿದ್ದು ತಮ್ಮ ಮೊದಲ ಪಂದ್ಯದಲ್ಲಿ ಚೈನೀಸ್ ತೈಪೆಯ ಲೀ ಯಂಗ್ ಮತ್ತು ವಾಂಗ್ ಚಿ-ಲಿನ್ ಅವರ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.
ಇದನ್ನೂ ಓದಿ: PV Sindhu ಬ್ಯಾಡ್ಮಿಂಟನ್ ಅಕಾಡೆಮಿಗಾಗಿ 2 ಎಕರೆ ಸ್ಥಳ ಮಂಜೂರು ಮಾಡಿದ ಸರ್ಕಾರ