ಬಾಲಿ(ಇಂಡೋನೇಷಿಯಾ) : ಇಂಡೋನೇಷಿಯಾ ಓಪನ್ನಲ್ಲಿ ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧು ಅವರ ಅಮೋಘ ಆಟ ಸೆಮಿಫೈನಲ್ಸ್ನಲ್ಲಿ ಅಂತ್ಯವಾಗಿದೆ. ಶನಿವಾರ ಅವರು ಥಾಯ್ಲೆಂಡ್ ರಚನಾಕ್ ಇಂಟನಾನ್ ವಿರುದ್ಧ ಸೋಲು ಕಂಡು ನಿರಾಶೆ ಅನುಭವಿಸಿದರು.
ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ 21-15, 9-21, 14-21ರಲ್ಲಿ 2ನೇ ಶ್ರೇಯಾಂಕದ ಥಾಯ್ ಶಟ್ಲರ್ ವಿರುದ್ಧ 54 ನಿಮಿಷಗಳ ಪಂದ್ಯದಲ್ಲಿ ಸೋಲು ಕಂಡರು.
ಪಿವಿ ಸಿಂಧು ವಾರದ ಹಿಂದೆಯಷ್ಟೇ ಇಂಡೋನೇಷ್ಯನ್ ಮಾಸ್ಟರ್ಸ್ನಲ್ಲಿ ಯಮಗಚಿ ವಿರುದ್ಧ ಸೆಮಿಫೈನಲ್ಸ್ನಲ್ಲಿ ಸೋಲು ಕಂಡಿದ್ದರು. ಅಕ್ಟೋಬರ್‌ನಲ್ಲಿ ಫ್ರೆಂಚ್ ಓಪನ್ನಲ್ಲೂ ಸೆಮಿಫೈನಲ್ನಲ್ಲೇ ಸೋಲು ಕಂಡಿದ್ದರು. ಇದೀಗ ಇಂಡೋನೇಷಿಯಾ ಓಪನ್ನಲ್ಲೂ ನಾಲ್ಕರ ಘಟ್ಟದಲ್ಲೇ ಸೋಲುಂಡರು.
ವಿಶ್ವದ 7ನೇ ಶ್ರೇಯಾಂಕದ ಸಿಂಧು ಈ ಪಂದ್ಯಕ್ಕೂ ಮುನ್ನ 4-6ರಲ್ಲಿ ರಚನಾಕ್ ವಿರುದ್ಧ ಹಿನ್ನಡೆ ಅನುಭವಿಸಿದ್ದರು. ಇದೀಗ ಮತ್ತೊಂದು ಸೋಲು ಒಪ್ಪಿಕೊಂಡಿದ್ದಾರೆ.
ಡಬಲ್ಸ್ನಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಸೆಮಿಫೈನಲ್ ಪ್ರವೇಶಿಸಿದ್ದ ಅವರು ಇಂದು ಅಗ್ರ ಶ್ರೇಯಾಂಕದ ಇಂಡೋನೇಷಿಯಾ ಜೋಡಿಯನ್ನು ಎದುರಿಸಲಿದ್ದಾರೆ.
ಇದನ್ನೂ ಓದಿ : World Championships TT: ಮಹಿಳಾ ಡಬಲ್ಸ್, ಮಿಕ್ಸಡ್ ಡಬಲ್ಸ್ನಲ್ಲಿ ಕ್ವಾರ್ಟರ್ ಫೈನಲ್ಗೆ ಭಾರತ