ಬಾಲಿ(ಇಂಡೋನೇಷಿಯಾ):ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧು ಜಪಾನ್ನ ಅಕಾನೆ ಯಮಗುಚಿಗೆ ಸೋಲುಣಿಸಿ BWF ವಿಶ್ವ ಟೂರ್ ಫೈನಲ್ಸ್ನಲ್ಲಿ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.
ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಡಬಲ್ ಒಲಿಂಪಿಕ್ ಮೆಡಲಿಸ್ಟ್ ಸಿಂಧು, ಯಮಗುಚಿ ವಿರುದ್ಧ ನಡೆದ ರೋಚಕ ಕದನದಲ್ಲಿ 21-15, 15-21, 21-19 ಸೆಟ್ಗಳ ಅಂತರದಲ್ಲಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದರು. ಈ ಗೆಲುವಿನ ಮೂಲಕ ವಿಶ್ವದ 3ನೇ ಶ್ರೇಯಾಂಕದ ಜಪಾನ್ ಆಟಗಾರ್ತಿಯ ವಿರುದ್ಧ 13-8ರಲ್ಲಿ ಗೆಲುವಿನ ಅಂತರವನ್ನು ಹೆಚ್ಚಿಸಿಕೊಂಡರು.
-
FINAL IT IS 👸😍
— BAI Media (@BAI_Media) December 4, 2021 " class="align-text-top noRightClick twitterSection" data="
Absolutely stunning display of #badminton by 2️⃣ time Olympic medalist- @Pvsindhu1 to storm into the final at #WorldTourFinals for the 2nd time. She beat WR- 3 🇯🇵's Akane Yamaguchi 21-15, 15-21, 21-19 in the last-4 💪#BWFWorldTourFinals2021#IndiaontheRise pic.twitter.com/TijTzQRlWZ
">FINAL IT IS 👸😍
— BAI Media (@BAI_Media) December 4, 2021
Absolutely stunning display of #badminton by 2️⃣ time Olympic medalist- @Pvsindhu1 to storm into the final at #WorldTourFinals for the 2nd time. She beat WR- 3 🇯🇵's Akane Yamaguchi 21-15, 15-21, 21-19 in the last-4 💪#BWFWorldTourFinals2021#IndiaontheRise pic.twitter.com/TijTzQRlWZFINAL IT IS 👸😍
— BAI Media (@BAI_Media) December 4, 2021
Absolutely stunning display of #badminton by 2️⃣ time Olympic medalist- @Pvsindhu1 to storm into the final at #WorldTourFinals for the 2nd time. She beat WR- 3 🇯🇵's Akane Yamaguchi 21-15, 15-21, 21-19 in the last-4 💪#BWFWorldTourFinals2021#IndiaontheRise pic.twitter.com/TijTzQRlWZ
ವರ್ಷದ ಕೊನೆಯಲ್ಲಿ ನಡೆಯುವ ಟೂರ್ನಮೆಂಟ್ನಲ್ಲಿ ಸಿಂಧುಗೆ ಇದು 3ನೇ ಫೈನಲ್ ಆಗಿದೆ. 2018ರಲ್ಲಿ ಚಾಂಪಿಯನ್ ಆಗುವ ಮೂಲಕ, ಪ್ರತಿಷ್ಠಿತ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎನಿಸಿಕೊಂಡಿದ್ದರು. ಹಾಲಿ ವಿಶ್ವ ಚಾಂಪಿಯನ್ ಫೈನಲ್ನಲ್ಲಿ ದಕ್ಷಿಣ ಕೊರಿಯಾದ ಆನ್ ಸೆಯಾಂಗ್ ವಿರುದ್ಧ ಕಾದಾಡಲಿದ್ದಾರೆ.
ಟೋಕಿಯೋದಲ್ಲಿ ಪದಕ ಗೆದ್ದ ನಂತರ ಸಿಂಧು ಅದ್ಭುತ ಫಾರ್ಮ್ನಲ್ಲಿದ್ದಾರೆ. ಅವರು ಫ್ರೆಂಚ್ ಓಪನ್, ಇಂಡೋನೇಷಿಯಾ ಓಪನ್ ಮತ್ತು ಇಂಡೋನೇಷಿಯಾ ಮಾಸ್ಟರ್ಸ್ ಟೂರ್ನಮೆಂಟ್ಗಳಲ್ಲಿ ಸೆಮಿಫೈನಲ್ ಪ್ರವೇಶಿಸಿ ಸೋಲು ಕಂಡಿದ್ದರು. ಮಾರ್ಚ್ನಲ್ಲಿ ಸ್ವಿಸ್ ಓಪನ್ನಲ್ಲಿ ರನ್ನರ್ ಅಪ್ ಆಗಿದ್ದ ಅವರೂ ಇದೀಗ ಟೂರ್ ಫೈನಲ್ಸ್ ಗೆದ್ದು ಪ್ರಶಸ್ತಿ ಬರ ನೀಗಿಸಿಕೊಳ್ಳುವರೇ ಎಂದು ಕಾದುನೋಡಬೇಕಿದೆ.
ಇದನ್ನೂ ಓದಿ: ಟೀಂ ಇಂಡಿಯಾ ವಿರುದ್ಧ ಒಂದೇ ಇನ್ಸಿಂಗ್ಸ್‌ನಲ್ಲಿ 10 ವಿಕೆಟ್ ಪಡೆದು ಅಜಾಜ್ ಪಟೇಲ್ ದಾಖಲೆ