ETV Bharat / sports

ಬಾರ್ಸಿಲೋನಾ ಸ್ಪೇನ್​ ಮಾಸ್ಟರ್​: ಕ್ವಾರ್ಟರ್​ ಫೈನಲ್​ಗೆ ಎಂಟ್ರಿಕೊಟ್ಟ ಸೈನಾ, ಸಮೀರ್​ ವರ್ಮಾ - ಸಮೀರ್​ ವರ್ಮಾ

ಟೋಕಿಯೋ ಒಲಿಂಪಿಕ್​​ಗೆ ಅರ್ಹತೆ ಗಿಟ್ಟಿಸಿಕೊಳ್ಳುವ ರೇಸ್​ನಲ್ಲಿರುವ ಸೈನಾ ಎರಡನೇ ಸುತ್ತಿನಲ್ಲಿ ಮರಿಯಾ ವಿರುದ್ಧ 21-10, 21-19 ಗೇಮ್​ಗಳಿಂದ ಭರ್ಜರಿ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ತೇರ್ಗಡೆಗೊಂಡರು.

ಬಾರ್ಸಿಲೋನಾ ಸ್ಪೇನ್​ ಮಾಸ್ಟರ್
ಕ್ವಾರ್ಟರ್​ ಫೈನಲ್​ಗೆ ಸೈನಾ
author img

By

Published : Feb 20, 2020, 11:42 PM IST

ಬಾರ್ಸಿಲೋನಾ​: ಲಂಡನ್​ ಒಲಿಂಪಿಕ್​ ಕಂಚಿನ ಪದಕ ವಿಜೇತೆ ಭಾರತದ ಸೈನಾ ನೆಹ್ವಾಲ್​ ಉಕ್ರೈನ್​ ಮರಿಯಾ ಉಲಿಟಿನಾ ವಿರುದ್ಧ ಸ್ಟ್ರೈಟ್​ ಗೇಮ್​ಗಳಿಂದ ಗೆದ್ದು ಬಾರ್ಸಿಲೋನಾ ಸ್ಪೈನ್​ ಮಾಸ್ಟರ್​ ಕ್ವಾರ್ಟರ್​ ಫೈನಲ್ ಪ್ರವೇಶ ಪಡೆದಿದ್ದಾರೆ.

ಟೋಕಿಯೋ ಒಲಿಂಪಿಕ್ಸ್​ಗೆ ಅರ್ಹತೆ ಗಿಟ್ಟಿಸಿಕೊಳ್ಳುವ ರೇಸ್​ನಲ್ಲಿರುವ ಸೈನಾ ಎರಡನೇ ಸುತ್ತಿನಲ್ಲಿ ಮರಿಯಾ ವಿರುದ್ಧ 21-10, 21-19 ಗೇಮ್​ಗಳಿಂದ ಭರ್ಜರಿ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ತೇರ್ಗಡೆಗೊಂಡರು.

ಸೈನಾ ಮುಂದಿನ ಸುತ್ತಿನಲ್ಲಿ ಥಾಯ್ಲೆಂಡ್‌ನ ಬುಸನನ್ ಒಂಗ್‌ಬಮ್ರುಂಗ್‌ಫಾನ್‌ ವಿರುದ್ಧ ಸೆಣಸಾಡಲಿದ್ದಾರೆ. ಸೈನಾ ಈ ಹಿಂದಿನ ಎರಡು ಮುಖಾಮುಖಿಯಲ್ಲಿ ಬುಸನನ್ ವಿರುದ್ಧ ಸೋಲನುಭವಿಸಿದ್ದಾರೆ.

ಇನ್ನು ಪುರುಷರ ವಿಭಾಗದಲ್ಲಿ ಸಮೀರ್​ ವರ್ಮಾ 21-14, 16-21, 21-15 ರಲ್ಲಿ ಜರ್ಮನಿಯ ಕಾಯ್​ ಸ್ಕೀಫೆರ್​ ವಿರುದ್ಧ ಜಯ ಸಾಧಿಸಿ ಎಂಟರಘಟ್ಟಕ್ಕೆ ಎಂಟ್ರಿಕೊಟ್ಟಿದ್ದಾರೆ. ಇವರು ಮುಂದಿನ ಸುತ್ತಿನಲ್ಲಿ ಥಾಯ್ಲೆಂಡ್​ನ ಕುನ್ಲಾವಟ್​ ಅಥವಾ ಐರ್ಲೆಂಡ್​ನ ನ್ಹಾಟ್​ ನ್ಗುಯೆನ್​ ವಿರುದ್ಧ ಸೆಣಸಾಡಲಿದ್ದಾರೆ.

ಮೊದಲ ಸುತ್ತಿನಲ್ಲೇ ಹೊರಬಿದ್ದ ಶ್ರೀಕಾಂತ್​

ಇನ್ನು ಭಾರತದ ಸ್ಟಾರ್​ ಆಟಗಾರ ಕಿಡಂಬಿ ಶ್ರೀಕಾಂತ್ ಮಲೇಷ್ಯಾ, ಇಂಡೋನೇಷ್ಯಾ, ಹಾಗೂ ಥಾಯ್ಲೆಂಡ್​ ಓಪನ್​ನಲ್ಲಿ ಮೊದಲ ಸುತ್ತಿನಲ್ಲಿ ಸೋಲನುಭವಿಸಿದಂತೆ ಈ ಟೂರ್ನಿಯಲ್ಲೂ ಭಾರತದವರೇ ಆದ ಅಜಯ್​ ಜಯರಾಮ್​ ವಿರುದ್ಧ 6-21, 17-21ರಲ್ಲಿ ಸೋಲುಕಾಣುವ ಮೂಲಕ ತಮ್ಮ ಒಲಿಂಪಿಕ್​​​ ಕನಸನ್ನು ಮತ್ತಷ್ಟು ಕಠಿಣಪಡಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.