ETV Bharat / sports

ಸ್ವಿಸ್ ಓಪನ್​​​ನಿಂದ ಹೊರ ಬಿದ್ದ ಸೈನಾ ನೆಹ್ವಾಲ್ - ಕಶ್ಯಪ್ ದಂಪತಿ - ಸ್ವಿಸ್ ಓಪನ್

ಬ್ಯಾಡ್ಮಿಂಟನ್ ಆಟಗಾರಾದ ಸೈನಾ ನೆಹ್ವಾಲ್ ಮತ್ತು ಪರುಪಲ್ಲಿ ಕಶ್ಯಪ್ ದಂಪತಿ ಮೊದಲ ಸುತ್ತಿನಲ್ಲೇ ಸ್ವಿಸ್ ಓಪನ್​‌ನಿಂದ ಹೊರ ಬಿದ್ದಿದೆ.

ಸೈನಾ ನೆಹ್ವಾಲ್- ಕಶ್ಯಪ್
Saina Nehwal, Parupalli Kashyap
author img

By

Published : Mar 4, 2021, 1:51 PM IST

ಬಾಸೆಲ್ [ಸ್ವಿಟ್ಜರ್ಲೆಂಡ್]: ಬ್ಯಾಡ್ಮಿಂಟನ್ ಆಟಗಾರಾದ ಸೈನಾ ನೆಹ್ವಾಲ್ ಮತ್ತು ಪರುಪಲ್ಲಿ ಕಶ್ಯಪ್ ದಂಪತಿ ಮೊದಲ ಸುತ್ತಿನಲ್ಲೇ ಸ್ವಿಸ್ ಓಪನ್​‌ನಿಂದ ಹೊರ ಬಿದ್ದಿದೆ.

ಯುವ ಆಟಗಾರರಾದ ಸಾಯಿ ಪ್ರಣೀತ್, ಸೌರಭ್ ವರ್ಮಾ ಮತ್ತು ಅಜಯ್ ಜಯರಾಮ್ ಆರಂಭಿಕ ಸುತ್ತಿನಲ್ಲಿ ಆಯಾ ಪಂದ್ಯಗಳನ್ನು ಗೆದ್ದ ನಂತರ ಪಂದ್ಯಾವಳಿಯ ಎರಡನೇ ಸುತ್ತಿಗೆ ಮುನ್ನಡೆ ಪಡೆದಿದ್ದರು.

ಒಲಿಂಪಿಕ್ ಪದಕ ವಿಜೇತ ನೆಹ್ವಾಲ್ ಥಾಯ್ಲೆಂಡ್​​​‌ನ ಫಿಟ್ಟಾಯಪೋರ್ನ್ ಚೈವಾನ್ ವಿರುದ್ಧ ಸುಮಾರು 58 ನಿಮಿಷಗಳ ಕಾಲ ಕಠಿಣ ಹೋರಾಟ ನಡೆಸಿದರು. ಆದರೆ, ಕೊನೆಗೆ 16-21, 21-17, 21-23 ಸೆಟ್​ಗಳ ಅಂತರದಲ್ಲಿ ಚೈವಾನ್​ ವಿರುದ್ಧ ಅಜೇಯರಾದರು.

ಇನ್ನು ನೆಹ್ವಾಲ್ ಪತಿ ಕಶ್ಯಪ್ ನೇರ ಪಂದ್ಯಗಳಲ್ಲಿ ಸ್ಪೇನ್‌ನ ಪ್ಯಾಬ್ಲೊ ಅಬಿಯಾನ್ ವಿರುದ್ಧ 15-21, 10-21 ಸೆಟ್​ಗಳಲ್ಲಿ ಸೋಲು ಅನುಭವಿಸಿದರು.

ಇನ್ನು ಮೊದಲನೇ ಸುತ್ತನಲ್ಲಿ ಉತ್ತ ಪ್ರದರ್ಶನ ತೋರಿದ ಪ್ರಣೀತ್​, ಮುಂದಿನ ಸುತ್ತಿಗೆ ಮುನ್ನಡೆಯಲು ಕೇವಲ 34 ನಿಮಿಷಗಳಲ್ಲಿ ಇಸ್ರೇಲ್‌ನ ಮಿಶಾ ಜಿಲ್ಬರ್ಮನ್ ಅವರನ್ನು 21-11,21-14ರಿಂದ ಹಿಂದಿಕ್ಕಿದರು.

ಓದಿ: ಟರ್ಕಿಯ ಯಿಗಿಟ್ ಸೋಲಿಸಿ ಎರಡನೇ ಸುತ್ತು ಪ್ರವೇಶಿಸಿದ ಸಿಂಧು

ಅದರಂತೆ ವರ್ಮಾ ತನ್ನ ಮೊದಲ ಸುತ್ತಿನ ಹಣಾಹಣಿಯಲ್ಲಿ ಸ್ವಿಟ್ಜರ್ಲೆಂಡ್‌ನ ಕ್ರಿಶ್ಚಿಯನ್ ಕಿರ್ಚ್‌ಮೇರ್ ವಿರುದ್ಧ 21-19 21-18 ರಿಂದ ಜಯಗಳಿಸಿದರು. ಅವರು 16 ನೇ ಸುತ್ತಿನಲ್ಲಿ ಎಂಟು ಶ್ರೇಯಾಂಕದ ಥಾಯ್ಲೆಂಡ್​​ನ ಕುನ್ಲಾವುತ್ ವಿಟಿಡ್ಸರ್ನ್ ಅವರನ್ನು ಎದುರಿಸಲಿದ್ದಾರೆ.

ಇನ್ನು ಅಜಯ್ ಜಯರಾಮ್ 21-12 21-13ರಲ್ಲಿ ಥಾಯ್ಲೆಂಡ್​​​​​ನ ಸಿತಿಕೋಮ್ ತಮ್ಮಸಿನ್ ಅವರನ್ನು ಸೋಲಿಸಿ 16 ನೇ ಸುತ್ತಿಗೆ ಪ್ರವೇಶಿಸಿದ್ದು, ಮೂರನೇ ಶ್ರೇಯಾಂಕದ ಡೆನ್ಮಾರ್ಕ್‌ನ ರಾಸ್‌ಮಸ್ ಜೆಮ್ಕೆ ಅವರನ್ನು ಎದುರಿಸಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.