ETV Bharat / sports

ಸೋಲು.. ಸೋಲು... ಥಾಯ್ಲೆಂಡ್​ ಮಾಸ್ಟರ್ಸ್​ನಲ್ಲೂ ಮೊದಲ ಸುತ್ತಿನಲ್ಲೇ ಹೊರಬಿದ್ದ ಸೈನಾ ನೆಹ್ವಾಲ್​ - ಸೈನಾ ನೆಹ್ವಾಲ್​ಗೆ ಸೋಲು

2020ರಲ್ಲಿ ಮಲೇಷ್ಯಾ ಮಾಸ್ಟರ್ಸ್​ನಲ್ಲಿ​ ಕ್ವಾರ್ಟರ್​ ಫೈನಲ್, ಇಂಡೋನೇಷ್ಯಾ ಓಪನ್​ನಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು. ಸೈನಾ ಬುಧವಾರ ನಡೆದ ಥಾಯ್ಲೆಂಡ್​ ಮಾಸ್ಟರ್ಸ್​​ನಲ್ಲೂ ಡೆನ್ಮಾರ್ಕ್​ನ ಲಿನೆ ಹೊಜ್ಮಾರ್ಕ್​ ವಿರುದ್ಧ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ್ದಾರೆ.

saina newhwal
saina newhwal
author img

By

Published : Jan 22, 2020, 7:53 PM IST

ಬ್ಯಾಂಕಾಂಕ್: ಭಾರತದ ಅನುಭವಿ ಬ್ಯಾಡ್ಮಿಂಟನ್​ ಆಟಗಾರ್ತಿ ಸೈನಾ ನೆಹ್ವಾಲ್ ಥಾಯ್ಲೆಂಡ್​ ಮಾಸ್ಟರ್ಸ್​ನಲ್ಲಿ ಮೊದಲ ಸುತ್ತಿನಲ್ಲಿ ಸೋಲು ಕಂಡಿದ್ದಾರೆ.

ಸೈನಾ ಮೊದಲ ಸುತ್ತಿನ ಪಂದ್ಯದಲ್ಲಿ ತಮಗಿಂತ ಶ್ರೇಯಾಂಕದಲ್ಲಿ ಹಿಂದಿರುವ ಡೆನ್ಮಾರ್ಕ್​ ಆಟಗಾರ್ತಿ ವಿರುದ್ಧ ಸೋಲುಕಾಣುವ ಮೂಲಕ ನೀರಸ ಪ್ರದರ್ಶನ ಮುಂದುವರಿಸಿದ್ದಾರೆ. 2020ರಲ್ಲಿ ಮಲೇಷ್ಯಾ ಮಾಸ್ಟರ್ಸ್​ನಲ್ಲಿ​ ಕ್ವಾರ್ಟರ್​ ಫೈನಲ್, ಇಂಡೋನೇಷ್ಯಾ ಓಪನ್​ನಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು. ಸೈನಾ ಬುಧವಾರ ನಡೆದ ಥಾಯ್ಲೆಂಡ್​ ಮಾಸ್ಟರ್ಸ್​​ನಲ್ಲೂ ಡೆನ್ಮಾರ್ಕ್​ನ ಲಿನೆ ಹೊಜ್ಮಾರ್ಕ್​ ವಿರುದ್ಧ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ್ದಾರೆ.

ಬಿಡಬ್ಲ್ಯೂ ಶ್ರೇಯಾಂಕದಲ್ಲಿ 18ನೇ ಸ್ಥಾನದಲ್ಲಿರುವ ಸೈನಾ 30ನೇ ಶ್ರೇಯಾಂಕದ ಡೆನ್ಮಾರ್ಕ್​ ಆಟಗಾರ್ತಿ ವಿರುದ್ಧ 13-21, 21-17, 15-21 ರ ಗೇಮ್​ಗಳ ಅಂತರದಲ್ಲಿ ಸೋಲುಕಂಡಿದ್ದಾರೆ. ಈ ಹಿಂದಿನ ನಾಲ್ಕು ಮುಖಾಮುಖಿಯಲ್ಲಿ ​ ಡೆನ್ಮಾರ್ಕ್​ ಆಟಗಾರ್ತಿಯ ವಿರುದ್ಧ ಪ್ರಾಬಲ್ಯ ಸಾಧಿಸಿದ್ದ ಸೈನಾ ನೆಹ್ವಾಲ್ ಇದೇ ಮೊದಲ ಬಾರಿಗೆ ಸೋಲನುಭವಿಸಿದ್ದಾರೆ.

ಸೈನಾ ಅಲ್ಲದೆ ಥಾಯ್ಲೆಂಡ್​ ಮಾಸ್ಟರ್ಸ್​ನಲ್ಲಿ ಭಾಗವಹಿಸಿದ್ದ ಭಾರತದ ಇತರ ಸ್ಪರ್ಧಿಗಳು ಕೂಡ ಸೋತು ಹೊರಬಿದ್ದಿದ್ದಾರೆ. ಕಿಡಂಬಿ ಶ್ರೀಕಾಂತ್​, ಹೆಚ್​ ಎಸ್​ ಪ್ರಣಯ್​, ಸಮೀರ್​ ವರ್ಮಾ ಕೂಡ ಮೊದಲ ಸುತ್ತಿನಲ್ಲೇ ಸೋಲುಕಂಡಿದ್ದಾರೆ. ​

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.