ನವದೆಹಲಿ: ಕೋವಿಡ್ 19 ನಿರ್ಬಂಧಗಳಿಂದಾಗಿ ವಿಶ್ವ ಬ್ಯಾಡ್ಮಿಂಟನ್ ಒಕ್ಕೂಟ 2021ರ ರಷ್ಯನ್ ಓಪನ್, ಇಂಡೋನೇಷ್ಯಾ ಮಾಸ್ಟರ್ಸ್ ಟೂರ್ನಿಗಳನ್ನು ಮುಂದೂಡಿದೆ.
ಪ್ರಸ್ತುತ ಕೋವಿಡ್-19 ನಿರ್ಬಂಧಗಳು ಮತ್ತು ಕೆಲವು ತೊಡಕುಗಳಿಂದ ಸ್ಥಳೀಯ ಸಂಘಟಕರಿಗೆ ಪಂದ್ಯಾವಳಿಗಳನ್ನು ರದ್ದುಗೊಳಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ" ಎಂದು ಬಿಡಬ್ಲ್ಯೂಎಫ್ ಸೋಮವಾರ ಪ್ರಕಟಣೆ ಹೊರಡಿಸಿದೆ.
" ನ್ಯಾಷನಲ್ ಬ್ಯಾಡ್ಮಿಂಟನ್ ಫೆಡರೇಶನ್ ಆಫ್ ರಷ್ಯಾ ಮತ್ತು ಬ್ಯಾಡ್ಮಿಂಟನ್ ಇಂಡೋನೇಷ್ಯಾ ಟೂರ್ನಿಗಳನ್ನು ರದ್ದುಗೊಳಿಸುವ ಸಂಬಂಧ ಬಿಡಬ್ಲ್ಯೂಎಫ್ ಜೊತೆ ಸಮಾಲೋಚಿಸಿ, ಒಪ್ಪಂದ ಮಾಡಿಕೊಳ್ಳಲಾಗಿದೆ" ಎಂದು ಹೇಳಿಕೆ ಬಿಡುಗಡೆ ಮಾಡಿದೆ.
ಇವರೆಡಲ್ಲದೆ ಜೂನ್ನಲ್ಲಿ ನಡೆಯಬೇಕಿದ್ದ ಕೆನಡಾ ಓಪನ್ ಕೂಡ ರದ್ದಾಗಿದೆ. ಇಂಡೋನೇಷ್ಯಾ ಮಾಸ್ಟರ್ ಅಕ್ಟೋಬರ್ 5ರಿಂದ 10 ಮತ್ತು ರಷ್ಯನ್ ಓಪನ್ ಜುಲೈ 20ರಿಂದ 25ರವರೆಗೆ ನಡೆಯಬೇಕಿತ್ತು.
ಭಾರತದಲ್ಲಿ ಆಗಸ್ಟ್ನಲ್ಲಿ ನಡೆಯಬೇಕಿದ್ದ ಹೈದರಾಬಾದ್ ಓಪನ್ ಮತ್ತು ಇಟಲಿಯ ಸೂಪರ್ 100 ಇವೆಂಟ್ ಕೂಡ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಎರಡೂ ದೇಶಗಳಲ್ಲಿ ಕೊರೊನಾ ಸಂಖ್ಯೆ ಮಿತಿ ಮೀರಿ ಏರಿಕೆಯಾಗುತ್ತಿರುವುದರಿಂದ ಟೂರ್ನಿಗಳ ಆಯೋಜನೆ ಬಗ್ಗೆ ಖಚಿತತೆ ಇಲ್ಲವಾಗಿದೆ.
ಇದನ್ನು ಓದಿ:ದುಬೈ ಪ್ಯಾರಾ-ಬ್ಯಾಡ್ಮಿಂಟನ್ ಟೂರ್ನಿ: ಪ್ರಮೋದ್‌ಗೆ ಡಬಲ್ ಧಮಾಕ, ಅಗ್ರಸ್ಥಾನದಲ್ಲಿ ಭಾರತ