ಹೈದರಾಬಾದ್: ಇತ್ತೀಚೆಗೆ ಮುಕ್ತಾಯವಾದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಭಾರತದ ಆಟಗಾರ್ತಿ ಪಿ.ವಿ.ಸಿಂಧು ಚಿನ್ನ ಗೆಲ್ಲುವ ಮೂಲಕ ದೇಶಕ್ಕೇ ಹೆಮ್ಮೆ ತಂದಿದ್ದಾಳೆ. ಈ ಸಾಧನೆಯ ಹಿಂದೆ ಕಠಿಣ ಪರಿಶ್ರಮ ಅಡಗಿದೆ ಎನ್ನುವುದು ಆಕೆಯ ತರಬೇತಿಯ ವಿಡಿಯೋದಲ್ಲಿ ತಿಳಿದು ಬಂದಿದೆ.
ಪಿ.ವಿ.ಸಿಂಧು ತರಬೇತಿಯ ವಿಡಿಯೋ ಒಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಖ್ಯಾತ ಉದ್ಯಮಿ ಆನಂದ್ ಮಹೀಂದ್ರ, ವಿಡಿಯೋ ನೋಡಿ ನಿಜಕ್ಕೂ ಸುಸ್ತಾಗಿ ಹೋದೆ ಎಂದು ಬರೆದುಕೊಂಡಿದ್ದಾರೆ.
-
Brutal. I’m exhausted just watching this. But now there’s no mystery about why she’s the World Champ. A whole generation of budding Indian sportspersons will follow her lead & not shrink from the commitment required to get to the top... pic.twitter.com/EYPp677AjU
— anand mahindra (@anandmahindra) August 27, 2019 " class="align-text-top noRightClick twitterSection" data="
">Brutal. I’m exhausted just watching this. But now there’s no mystery about why she’s the World Champ. A whole generation of budding Indian sportspersons will follow her lead & not shrink from the commitment required to get to the top... pic.twitter.com/EYPp677AjU
— anand mahindra (@anandmahindra) August 27, 2019Brutal. I’m exhausted just watching this. But now there’s no mystery about why she’s the World Champ. A whole generation of budding Indian sportspersons will follow her lead & not shrink from the commitment required to get to the top... pic.twitter.com/EYPp677AjU
— anand mahindra (@anandmahindra) August 27, 2019
ಒಂದು ನಿಮಿಷದ ವಿಡಿಯೋದಲ್ಲಿ ಚಿನ್ನದ ಹುಡುಗಿ ಸಿಂಧು ಕಠಿಣ ತರಬೇತಿಯ ಕೆಲ ತುಣುಕುಗಳಿವೆ. ಕೇವಲ ಈ ವಿಡಿಯೋ ನೋಡಿಯೇ ನಾನು ಸುಸ್ತಾದೆ. ಸಿಂಧು ಯಾಕೆ ವಿಶ್ವ ಚಾಂಪಿಯನ್ ಎನ್ನುವುದರಲ್ಲಿ ಯಾವುದೇ ರಹಸ್ಯ ಅಡಗಿಲ್ಲ. ಪ್ರವರ್ಧಮಾನಕ್ಕೆ ಬರುತ್ತಿರುವ ಎಲ್ಲ ಕ್ರೀಡಾಳುಗಳು ಸಿಂಧುರಂತೆ ಕ್ರೀಡೆಗಾಗಿ ಕಠಿಣ ಅಭ್ಯಾಸ ನಡೆಸಿ ಎಂದು ಆನಂದ್ ಮಹೀಂದ್ರ ಸೂಚನೆ ನೀಡಿದ್ದಾರೆ.
ಭಾನುವಾರದಂದು ಜಪಾನಿನ ನೊಜೊಮಿ ಒಕುಹಾರರನ್ನು ಸೋಲಿಸಿ ಪಿ.ವಿ.ಸಿಂಧು ಚಿನ್ನಕ್ಕೆ ಕೊರಳೊಡ್ಡಿದ್ದಳು. ಈ ಮೂಲಕ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎನ್ನುವ ಹೆಗ್ಗಳಿಕೆ ಸಿಂಧು ಪಾಲಾಗಿದೆ.