ಹೈದರಾಬಾದ್: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಪ್ರಪಂಚದಾದ್ಯಂತ ಹಾರಿಸಿದ ಪಿವಿ ಸಿಂಧುಗೆ ಮಾಜಿ ಕ್ರಿಕೆಟಿಗ ವಿ.ಚಾಮುಂಡೇಶ್ವರನಾಥ್ BMW ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ತೆಲಂಗಾಣ ಬ್ಯಾಡ್ಮಿಂಟನ್ ಅಸೋಸಿಯೇಷನ್ನ ಉಪಾಧ್ಯಕ್ಷ ವಿ.ಚಾಮುಂಡೇಶ್ವರ ನಾಥ್ ಭಾರತ ತಂಡದ ಬ್ಯಾಡ್ಮಿಂಟನ್ ಕೋಚ್ ಗೋಪಿಚಂದ್ ಹಾಗೂ ಟಾಲಿವುಡ್ ನಟ ನಾಗಾರ್ಜುನ್ ಅಕ್ಕಿನೇನಿ ನೇತೃತ್ವದಲ್ಲಿ BMW ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ಚಾಮುಂಡೇಶ್ವರನಾಥ್ ಅವರು ಕಾರಿಗಾಗಿ ಕ್ರೀಡೆಯನ್ನು ಪ್ರೋತ್ಸಾಹಿಸುವ ಕಾರ್ಪೋರೇಟ್ ಕಂಪನಿಯ ಮಾಲಿಕರಿಂದ, ಅವರ ಸ್ನೇಹಿತರಿಂದ ಹಣ ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.
ಸಿಂಧು ಚಿನ್ನ ಗೆದ್ದ ಸಮಯ ನನ್ನ ಜೀವನ್ ಅತ್ಯಂತ ಹೆಮ್ಮೆಯ ಸಂಗತಿ ಎಂದಿರುವ ಸಿಂಧು ಕೋಚ್ ಗೋಪಿಚಂದ್ ಇದು ಭಾರತದ ಕ್ರೀಡೆಯಲ್ಲಿ ಅತ್ಯಂತ ಮಹತ್ವದ ಸಂದರ್ಭವಾಗಿದೆ. ಇನ್ನು ಒಲಿಂಪಿಕ್ನಲ್ಲಿ ಚಿನ್ನ ಗೆಲ್ಲುವ ಕನಸು ಇಟ್ಟುಕೊಂಡಿರುವ ಸಿಂಧುಗೆ ಕೇವಲ ಇನ್ನೊಂದೇ ಒಂದು ಹಂತ ಬಾಕಿಯಿದೆ ಎಂದುಕೊಂಡಿದ್ದೇನೆ ಎಂದು ಗೋಪಿಚಂದ್ ಶಿಷ್ಯೆ ಸಾಧನೆಯನ್ನು ಕೊಂಡಾಡಿದ್ದಾರೆ.