ಬಾಲಿ(ಇಂಡೋನೇಷಿಯಾ): ವಿಶ್ವ ಟೂರ್ ಫೈನಲ್ಸ್ ಪ್ರವೇಶಿಸಿದ ಭಾರತದ ಅತ್ಯಂತ ಕಿರಿಯ ಶಟ್ಲರ್ ಎನಿಸಿಕೊಂಡಿರುವ ಭಾರತದ ಲಕ್ಷ್ಯ ಸೇನ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ವಿಶ್ವದ ನಂಬರ್ 1 ಶಟ್ಲರ್ ಜಪಾನ್ನ ಕೆಂಟೊ ಮೊಮೊಟ ಮೊದಲ ಸೆಟ್ನಲ್ಲಿ 1-1ರಲ್ಲಿರುವಾಗಲೇ ಗಾಯದಿಂದ ನಿವೃತ್ತಿಗೊಂಡಿದ್ದರಿಂದ ಭಾರತೀಯ ಆಟಗಾರನನ್ನು ವಿಜಯಿ ಎಂದು ಘೋಷಿಸಲಾಯಿತು.
ಇಂಡೋನೇಷಿಯನ್ ಮಾಸ್ಟರ್ಸ್ ಮತ್ತು ಓಪನ್ ಟೂರ್ನಿಗಳಲ್ಲಿ ಲಕ್ಷ್ಯ ಸೇನ್ ಮೊದಲ ಸುತ್ತಿನ ಪಂದ್ಯದಲ್ಲೇ ಸೋಲು ಕಂಡು ನಿರಾಸೆಯನುಭವಿಸಿದ್ದರು. ಇದೀಗ ಮೊದಲ ಬಾರಿಗೆ ಪ್ರಯಾಸ ಪಡೆದ ಕೆಂಟೋ ವಿರುದ್ಧ ಗೆದ್ದಂತಾಗಿದೆ.
ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಕಿಡಂಬಿ ಶ್ರೀಕಾಂತ್ ಫ್ರಾನ್ಸ್ನ ಟೋಮಾ ಜೂನಿಯರ್ ಪೊಪೊವ್ ವಿರುದ್ಧ ಗೆಲುವು ಸಾಧಿಸಿದರೆ, ಮಹಿಳೆಯರ ಸಿಂಗಲ್ಸ್ನಲ್ಲಿ ಪಿವಿ ಸಿಂಧು ಡೆನ್ಮಾರ್ಕ್ನ ಲಿನ್ ಕ್ರಿಸ್ಟೋಫರ್ಸೆನ್ ವಿರುದ್ಧ ಗೆಲುವು ಸಾಧಿಸಿದ್ದಾರೆ.
ಮಹಿಳೆಯರ್ ಡಬಲ್ಸ್ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್. ಸಿಕ್ಕಿರೆಡ್ಡಿ ಮತ್ತು ಪುರುಷರ ಡಬಲ್ಸ್ನಲ್ಲಿ ಚಿರಾಗ್ ಶೆಟ್ಟಿ- ಸಾತ್ವಿಕ್ ಸಾಯಿರಾಜ್ ಜೋಡಿ ತಮ್ಮ ಮೊದಲ ಪಂದ್ಯದಲ್ಲಿ ಸೋಲು ಕಂಡಿದೆ.
ಇದನ್ನೂ ಓದಿ:ವಿಶ್ವ ಟೂರ್ ಫೈನಲ್ಸ್: ಶುಭಾರಂಭ ಮಾಡಿದ ಸಿಂಧು, ಶ್ರೀಕಾಂತ್