ಒಡೆನ್ಸ್: ಯುವ ಶಟ್ಲರ್ ಡೆನ್ಮಾರ್ಕ್ ಓಪನ್ ಸೂಪರ್ 1000 ಟೂರ್ನಮೆಂಟ್ನಲ್ಲಿ ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ. ಆದರೆ, ಒಲಿಂಪಿಕ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ.
ಕಳೆದ ವಾರ ಡಚ್ ಓಪನ್ನಲ್ಲಿ ರನ್ನರ್ಸ್ ಅಪ್ ಆಗಿದ್ದ ಲಕ್ಷ್ಯ ಬುಧವಾರ ಅದ್ಭುತ ಪ್ರದರ್ಶನ ತೋರಿ ರಾಷ್ಟ್ರೀಯ ಚಾಂಪಿಯನ್ ಸೌರಭ್ ವರ್ಮಾ ವಿರುದ್ಧ 21-9, 21-7ರಲ್ಲಿ ಸುಲಭ ಜಯ ಸಾಧಿಸಿದರು. ಈ ಪಂದ್ಯವನ್ನು 20 ವರ್ಷದ ಶಟ್ಲರ್ ಕೇವಲ 26 ನಿಮಿಷಗಳಲ್ಲಿ ವಶಪಡಿಸಿಕೊಂಡರು.
ಆಲ್ಮೋರಾದ ಲಕ್ಷ್ಯ ಸೇನ್ ತಮ್ಮ ಮುಂದಿನ ಸುತ್ತಿನ ಪಂದ್ಯದಲ್ಲಿ 2ನೇ ಶ್ರೇಯಾಂಕದ ಮತ್ತು ಒಲಿಂಪಿಕ್ಸ್ ಚಾಂಪಿಯನ್ ವಿಕ್ಟರ್ ಅಕ್ಸೆಲ್ಸನ್ ವಿರುದ್ಧ ಸೆಣಸಾಡುವ ಸಾಧ್ಯತೆಯಿದೆ.
ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಜಪಾನ್ 20ನೇ ಶ್ರೇಯಾಂಕದ ಆಯಾ ಒಹೋರಿ ವಿರುದ್ಧ 16-21, 14-21 ಅಂತರದಲ್ಲಿ ಸೋಲು ಕಂಡರು.
ಭಾರತ ಮಿಶ್ರ ಡಬಲ್ಸ್ ಜೋಡಿ ಸಾತ್ವಕ್ ಸಾಯಿರಾಜ್ ಮತ್ತು ಅಶ್ವಿನ್ ಪೊನ್ನಪ್ಪ ಕೂಡ ಚೀನಾದ ಫೆಂಗ್ ಯಾನ್ ಜೀ ಮತ್ತು ಡು ಯು ವಿರುದ್ಧ 17-21, 21-14, 11-21 ಗೇಮ್ಗಳ ಅಂತರದಲ್ಲಿ ಸೋಲು ಕಂಡರು.
ಇದನ್ನು ಓದಿ:ಡೆನ್ಮಾರ್ಕ್ ಓಪನ್: ಟರ್ಕಿ ಶಟ್ಲರ್ ಮಣಿಸಿ ಫ್ರೀ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟ ಸಿಂಧು