ಇಂಚಿಯಾನ್(ಕೊರಿಯಾ): 2019ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದ ಪಿ ವಿ ಸಿಂಧು ಸತತ ಎರಡನೇ ಟೂರ್ನಿಯಲ್ಲಿ ಅರಂಭಿಕ ಸುತ್ತಿನಲ್ಲಿ ಮುಗ್ಗರಿಸಿದ್ದಾರೆ.
ಕೊರಿಯಾ ಓಪನ್ನ ಮೊದಲ ಸುತ್ತಿನಲ್ಲಿ ಸಿಂಧು ಅಮೆರಿಕದ ಜಾಂಗ್ ಬೀವೆನ್ ವಿರುದ್ಧ 21-7, 22-24, 15-21 ರಲ್ಲಿ ಸೋಲು ಕಾಣುವ ಮೂಲಕ ನಿರಾಶೆ ಅನುಭವಿಸಿದ್ದಾರೆ.
ಮೊದಲ ಗೇಮ್ಅನ್ನು ಸುಲಭವಾಗಿ ಗೆದ್ದುಕೊಂಡಿದ್ದ ಸಿಂಧು, ಎರಡನೇ ಗೇಮ್ನಲ್ಲಿ ಗೇಮ್ ಪಾಯಿಂಟ್ ಹತ್ತಿರ ಬಂದಿದ್ದರು. ಆದರೆ ಅಮೆರಿಕದ ಆಟಗಾರ್ತಿ 24-22 ರಲ್ಲಿ ಸೋಲಿಸುವ ಮೂಲಕ 1-1 ಸಮಭಲ ಸಾಧಿಸಿದರು. ಆದ್ರೆ ಮೂರನೇ ಗೇಮ್ನಲ್ಲಿ ಸಿಂಧುರನ್ನು 21-15ರಲ್ಲಿ ಮಣಿಸಿ ಎರಡನೇ ಸುತ್ತು ಪ್ರವೇಶಿಸಿದರು.
ಕಳೆದ ವಾರವಷ್ಟೇ 24 ವರ್ಷದ ಸಿಂಧು ಚೀನಾ ಓಪನ್ನಲ್ಲಿ ಥಾಯ್ಲೆಂಡ್ನ ಪೊರ್ನ್‌ಪಾವೀ ಚೊಚುವಾಂಗ್ ವಿರುದ್ಧ ಸೋಲನುಭವಿಸಿದ್ದರು.