ETV Bharat / sports

Indonesia Open: ಸಿಂಧು ಬೆನ್ನಲ್ಲೇ ಕ್ವಾರ್ಟರ್ ಫೈನಲ್​​ ಪ್ರವೇಶಿಸಿದ ಸಾಯಿ ಪ್ರಣೀತ್

ಪುರುಷರ ಡಬಲ್ಸ್​ನಲ್ಲಿ ಸಾತ್ವಿಕ್​ ಸಾಯಿರಾಯ್​ ರಾಂಕಿರೆಡ್ಡಿ ಮತ್ತು ಚಿರಾಗ್​ ಶೆಟ್ಟಿ ಜೋಡಿ ಕೂಡ 8ರ ಘಟ್ಟಕ್ಕೆ ಪ್ರವೇಶಿಸಿದ್ದು, ಭಾರತೀಯ ಜೋಡಿ ದಕ್ಷಿಣ ಕೊರಿಯಾದ ಕಾಂಗ್ ಮಿನ್​ಹ್ಯುಕ್ ಮತ್ತು ಸಿಯೋ ಸೆಯುಂಗ್ಜೇ ವಿರುದ್ಧ 21-15,19-21, 23-21ರ ರೋಚಕ ಕದನದಲ್ಲಿ ಗೆಲುವಿನ ನಗೆ ಬೀರಿದರು.

Indonesia Open
Indonesia Open
author img

By

Published : Nov 25, 2021, 9:51 PM IST

ಜಕಾರ್ತ(ಇಂಡೊನೇಷಿಯಾ): ಭಾರತದ ಶಟ್ಲರ್​ ಬಿ ಸಾಯಿ ಪ್ರಣೀತ್ ಗುರುವಾರ ನಡೆದ ಇಂಡೋನೇಷಿಯಾ ಓಪನ್​ನ ಫ್ರೀ ಕ್ವಾರ್ಟರ್​ ಫೈನಲ್​ನಲ್ಲಿ ಫ್ರಾನ್ಸ್​ನ ಕ್ರಿಸ್ಟೋ ಪೊಪೊವ್​ಗೆ ಸೋಲುಣಿಸಿ 8ರ ಘಟ್ಟಕ್ಕೆ ಪ್ರವೇಶಿಸಿದ್ದಾರೆ.

83 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಪ್ರಣೀತ್​ 21-17, 14-21, 21-19ರಲ್ಲಿ ಫ್ರಾನ್ಸ್​ ಶಟ್ಲರ್​ಗೆ ಸೋಲುಣಿಸಿದರು. ಭಾರತೀಯ ಶಟ್ಲರ್​ ಮೊದಲ ಗೇಮ್‌ನಲ್ಲಿ​ ಉತ್ತಮ ಸ್ಪರ್ಧೆ ನೀಡಿ ಗೆದ್ದರೂ, 2ನೇ ಗೇಮ್​ನಲ್ಲಿ ಪೊಪೊವ್​ ಅದ್ಭುತ ಕಮ್​ಬ್ಯಾಕ್ ಮಾಡಿ ಪ್ರಣೀತ್ ವಿರುದ್ಧ ಪ್ರಾಬಲ್ಯದ ಗೆಲುವು ಸಾಧಿಸಿದರು. ಆದರೆ ಕೊನೆಯ ಗೇಮ್​ನಲ್ಲಿ ಇಬ್ಬರೂ ಪ್ರಬಲ ಪೈಪೋಟಿ ನಡೆಸಿದರಾದರೂ ಪ್ರಣೀತ್ 21-19ರಲ್ಲಿ​ ರೋಚಕ ಗೆಲುವು ಸಾಧಿಸಿದರು.

ಆದರೆ ಭಾರತದ ಸ್ಟಾರ್​ ಶಟ್ಲರ್​ ಕಿಡಂಬಿ ಶ್ರೀಕಾಂತ್​ 2ನೇ ಶ್ರೇಯಾಂಕದ ಒಲಿಂಪಿಕ್ ಚಾಂಪಿಯನ್​ ಆಗಿರುವ ಡೆನ್ಮಾರ್ಕ್​ನ ವಿಕ್ಟರ್ ಅಕ್ಸೆಲ್ಸನ್​ ವಿರುದ್ಧ 21-14, 21-18ರಲ್ಲಿ ಸೋಲುಂಡು ಟೂರ್ನಿಯಿಂದ ಹೊರಬಿದ್ದರು.

ಇದಕ್ಕೂ ಮುನ್ನ ನಡೆದ ಮಹಿಳೆಯರ ಸಿಂಗಲ್ಸ್​ನಲ್ಲಿ ಪಿವಿ ಸಿಂಧು 21-12, 21-18ರ ಅಂತರದಲ್ಲಿ ಜರ್ಮನ್​ನ ಇವೋನ್ ಲೀ ವಿರುದ್ಧ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್​​ ಪ್ರವೇಶಿಸಿದರು.

ಪುರುಷರ ಡಬಲ್ಸ್​ನಲ್ಲಿ ಸಾತ್ವಿಕ್​ ಸಾಯಿರಾಯ್​ ರಾಂಕಿರೆಡ್ಡಿ ಮತ್ತು ಚಿರಾಗ್​ ಶೆಟ್ಟಿ ಜೋಡಿ ಕೂಡ 8ರ ಘಟ್ಟಕ್ಕೆ ಪ್ರವೇಶಿಸಿದ್ದು, ಭಾರತೀಯ ಜೋಡಿ ದಕ್ಷಿಣ ಕೊರಿಯಾದ ಕಾಂಗ್ ಮಿನ್​ಹ್ಯುಕ್ ಮತ್ತು ಸಿಯೋ ಸೆಯುಂಗ್ಜೇ ವಿರುದ್ಧ 21-15,19-21, 23-21ರ ರೋಚಕ ಕದನದಲ್ಲಿ ಗೆಲುವಿನ ನಗೆ ಬೀರಿದರು.

ಇದನ್ನೂ ಓದಿ:Indonesia Open Badminton: ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ಪಿ.ವಿ.ಸಿಂಧು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.