ETV Bharat / sports

ಥಾಮಸ್ ಕಪ್: ನೆದರ್ಲೆಂಡ್ಸ್​ ವಿರುದ್ಧ ಭಾರತ ಬ್ಯಾಡ್ಮಿಂಟನ್​ ತಂಡಕ್ಕೆ 5-0 ಜಯ

2ನೇ ಡಬಲ್ಸ್​ನಲ್ಲಿ ಎಂಆರ್ ಅರ್ಜುನ್ ಮತ್ತು ಧ್ರುವ್ ಕಪಿಲಾ 2ನೇ ಡಬಲ್ಸ್​ ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ಸಮೀರ್​ ವರ್ಮಾ 21-6, 21-11ರಲ್ಲಿ 3ನೇ ಸಿಂಗಲ್ಸ್ ಪಂದ್ಯದಲ್ಲಿ ಗೆದ್ದರು.

India beat  Netherlands 5-0 in Thomas Cup
ಥಾಮಸ್​ ಕಪ್​ನಲ್ಲಿ ಭಾರತಕ್ಕೆ ಜಯ
author img

By

Published : Oct 11, 2021, 4:38 PM IST

ಆರ್ಹಸ್(ಡೆನ್ಮಾರ್ಕ್​)​: ಥಾಮಸ್​ ಕಪ್​ ಫೈನಲ್ ಟೂರ್ನಮೆಂಟ್​ನಲ್ಲಿ ಭಾರತ ಬ್ಯಾಡ್ಮಿಂಟನ್ ತಂಡ ತನಗಿಂತ ಕಡಿಮೆ ಶ್ರೇಯಾಂಕ ಹೊಂದಿರುವ ನೆದರ್ಲೆಂಡ್ಸ್ ವಿರುದ್ಧ 5-0ಯಲ್ಲಿ ಗೆಲುವು ಸಾಧಿಸಿದೆ.

ಪುರುಷರ ಸಿಂಗಲ್ಸ್​ನಲ್ಲಿ ಮೊದಲು ಕಣಕ್ಕಿಳಿದ ಕಿಡಂಬಿ ಶ್ರೀಕಾಂತ್​ ಜೋರನ್ ಕ್ವೀಕೆಲ್ ಅವರನ್ನು 21-12, 21-14ರಲ್ಲಿ ಮಣಿಸುವ ಮೂಲಕ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ನಂತರ ಸಾತ್ವಿಕ್ ಸಾಯಿರಾಜ್​ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಪುರುಷರ ಡಬಲ್ಸ್​ನಲ್ಲಿ ಡಚ್​ ಜೋಡಿ ರೂಬೆನ್ ಜಿಲ್ಲೆ ಮತ್ತು ವ್ಯಾನ್ ಡರ್​ ಲೆಕ್​ ವಿರುದ್ಧ 21-19,21-12ರಲ್ಲಿ ಮಣಿಸಿ ಮುನ್ನಡೆಯನ್ನು 2-0ಗೆ ಹೆಚ್ಚಿಸಿದರು.

ನಂತರ ವಿಶ್ವಚಾಂಪಿಯನ್​ಶಿಪ್​ನ ಕಂಚು ಪದಕ ವಿಜೇತ ಸಾಯಿ ಪ್ರಣೀತ್​ 21-4, 21-12ರಲ್ಲಿ ರಾಬಿನ್​ ಮೆಸ್ಮನ್ ವಿರುದ್ಧ ಕೇವಲ 27 ನಿಮಿಷಗಳಲ್ಲೇ 2ನೇ ಸಿಂಗಲ್ಸ್ ಪಂದ್ಯವನ್ನು ಗೆದ್ದುಕೊಂಡರು. ಮತ್ತು ಭಾರತದ ಮುನ್ನಡೆಯನ್ನು 3-0ಗೇರಿಸಿದರು.

2ನೇ ಡಬಲ್ಸ್​ನಲ್ಲಿ ಎಂಆರ್ ಅರ್ಜುನ್ ಮತ್ತು ಧ್ರುವ್ ಕಪಿಲಾ 2ನೇ ಡಬಲ್ಸ್​ ಪಂದ್ಯದಲ್ಲಿ ಗೆಲುವು ಸಾಧಿಸಿದರೆ, ಸಮೀರ್​ ವರ್ಮಾ 21-6, 21-11ರಲ್ಲಿ 3ನೇ ಸಿಂಗಲ್ಸ್ ಪಂದ್ಯದಲ್ಲಿ ಗೆದ್ದರು. ಇದಕ್ಕೂ ಮುನ್ನ ಭಾರತದ ಮಹಿಳಾ ತಂಡ ಸೈನಾ ನೆಹ್ವಾಲ್​ ಪಂದ್ಯದ ನಿವೃತ್ತಿ ಹೊರತಾಗಿಯೂ ಸ್ಪೇನ್ ವಿರುದ್ಧ 3-2ರಲ್ಲಿ ಗೆದ್ದು ಬೀಗಿತ್ತು. ಮುಂದಿನ ಸುತ್ತಿನಲ್ಲಿ ಪುರುಷರ ತಂಡ ಮತ್ತೊಂದು ದುರ್ಬಲ ತಂಡ ತಹಿತಿ ವಿರುದ್ಧ ಆಡಿದರೆ, ಮಹಿಳಾ ತಂಡ ಸ್ಕಾಟ್ಲೆಂಡ್​ ತಂಡದ ವಿರುದ್ಧ ಆಡಲಿದೆ.

ಇದನ್ನು ಓದಿ:ಫುಟ್​ಬಾಲ್: ಬೆಹ್ರೈನ್​ ವಿರುದ್ಧ ಭಾರತ ಮಹಿಳಾ ತಂಡಕ್ಕೆ 5-0 ಭರ್ಜರಿ ಜಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.