ETV Bharat / sports

World Championships: ನೇರ ಗೇಮ್​ಗಳ ಗೆಲುವು ಪಡೆದು 16ರ ಹಂತಕ್ಕೆ ಎಂಟ್ರಿಕೊಟ್ಟ HS​ ಪ್ರಣಯ್ - ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಪ್ರಣಯ್

ಸ್ಪೇನ್​ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಬುಧವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಪ್ರಣಯ್ ಮಲೇಷ್ಯಾದ ಡರೇನ್​ ಲೀವ್​ ವಿರುದ್ಧ 21-7, 21-17ರ ನೇರ ಗೇಮ್​ಗಳ ಅಂತರದಲ್ಲಿ ಕೇವಲ 42 ನಿಮಿಷಗಳಲ್ಲಿ ಪಂದ್ಯವನ್ನು ಗೆದ್ದು 16ರ ಹಂತಕ್ಕೆ ಪ್ರವೇಶ ಪಡೆದರು.

BWF  World Championships
16 ಹಂತಕ್ಕೆ ಎಂಟ್ರಿಕೊಟ್ಟ ಹೆಚ್​ಎಸ್​ ಪ್ರಣಯ್
author img

By

Published : Dec 15, 2021, 6:38 PM IST

Updated : Dec 18, 2021, 3:00 PM IST

ವೆಲ್ವಾ(ಸ್ಪೇನ್): ಭಾರತದ ಹೆಚ್​ ಎಸ್​ ಪ್ರಣಯ್​ ಮತ್ತು ಮಹಿಳಾ ಡಬಲ್ಸ್​​ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್​ ಸಿಕ್ಕಿರೆಡ್ಡಿ ಜೋಡಿ ಬಿಡಬ್ಲ್ಯೂಎಫ್​ ವಿಶ್ವಚಾಂಪಿಯನ್​ಶಿಪ್​​ನಲ್ಲಿ ಪ್ರೀ ಕ್ವಾರ್ಟರ್​ ಫೈನಲ್​​ ಪ್ರವೇಶಿಸಿದ್ದಾರೆ.

ಸ್ಪೇನ್​ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಬುಧವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಪ್ರಣಯ್ ಮಲೇಷ್ಯಾದ ಡರೇನ್​ ಲೀವ್​ ವಿರುದ್ಧ 21-7, 21-17ರ ನೇರ ಗೇಮ್​ಗಳ ಅಂತರದಲ್ಲಿ ಕೇವಲ 42 ನಿಮಿಷಗಳಲ್ಲಿ ಪಂದ್ಯವನ್ನು ಗೆದ್ದು 16ರ ಹಂತಕ್ಕೆ ಪ್ರವೇಶ ಪಡೆದರು.

ಡಬಲ್ಸ್​ನಲ್ಲಿ ಅಶ್ವಿನ್- ಸಿಕ್ಕಿರೆಡ್ಡಿ​ ಜೋಡಿಗೆ ಗೆಲುವು

ಮಹಿಳಾ ಡಬಲ್ಸ್​​ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಸಿಕ್ಕಿರೆಡ್ಡಿ 14ನೇ ಶ್ರೇಯಾಂಕದ ಲಿಯು ಕ್ಸುವಾನ್ ಮತ್ತು ಕ್ಸಿಯಾ ಯು ಟಿಂಗ್ ಅವರನ್ನು 51 ನಿಮಿಷಗಳಲ್ಲಿ ಕದನದಲ್ಲಿ 21-11, 9-21, 21-13 ಗೇಮ್​ಗಳಿಂದ ಸೋಲಿಸಿದರು.

ಆದರೆ, ಪುರುಷರ ಡಬಲ್ಸ್​​ನಲ್ಲಿ ಎಂಆರ್ ಅರ್ಜುನ್​ ಮತ್ತು ಧ್ರುವ್​ ಕಪಿಲಾ ರಷ್ಯಾದ ವ್ಲಾಡಿಮಿರ್ ಇವನೊವ್ ಮತ್ತು ಇವಾನ್ ಸೊಜೊನೊವ್ ವಿರುದ್ಧ 11-21, 16-21ರ ಅಂತರದಲ್ಲಿ ಸೋಲು ಕಂಡರು.

ಮಂಗಳವಾರ ಎರಡು ಬಾರಿ ಒಲಿಂಪಿಕ್ ವಿಜೇತೆ ಪಿವಿ ಸಿಂಧು ಹಾಗೂ ಪುರುಷರ ವಿಭಾಗದಲ್ಲಿ ಕಿಡಂಬಿ ಶ್ರೀಕಾಂತ್, ಲಕ್ಷ್ಯ ಸೇನ್​ ಮತ್ತು ಡಬಲ್ಸ್​ನಲ್ಲಿ ಚಿರಾಗ್ ಶೆಟ್ಟಿ- ಸಾತ್ವಿಕ್​ ಸಾಯಿರಾಜ್​ ಜೋಡಿ ಪ್ರಿ ಕ್ವಾರ್ಟರ್​ ಫೈನಲ್ ಪ್ರವೇಶಿಸಿತ್ತು.

ಇದನ್ನೂ ಓದಿ:ಟೆಸ್ಟ್​ ತಂಡದ ಆಯ್ಕೆ ವೇಳೆ ನನ್ನ ODI ನಾಯಕತ್ವ ನಿರ್ಧರಿಸಿದ್ರು, ಟಿ-20 ನಾಯಕತ್ವ ಬಿಡ್ಬೇಡ ಅಂತಾ ಯಾರೂ ಹೇಳಿಲ್ಲ: ಕೊಹ್ಲಿ ಸ್ಪಷ್ಟನೆ

Last Updated : Dec 18, 2021, 3:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.