ETV Bharat / sports

ಭಾರತದಲ್ಲಿ ಮೊಟ್ಟ ಮೊದಲ ಕ್ರೀಡಾ ಶಾಲೆ ತೆರೆದ ಮಾಜಿ ಶೆಟ್ಲರ್​ ಗೋಪಿಚಂದ್​

ಭಾರತದ ಯಶಸ್ವಿ ಬ್ಯಾಡ್ಮಿಂಟನ್​ ಕೋಚ್​ ಪುಲ್ಲೇಲಾ ಗೋಪಿಚಂದ್ ಗಾಡಿಯಂ ಸ್ಪೋರ್ಟೋಪಿಯಾ ಎಂಬ​ ಭಾರತದ ಮೊದಲ ವಿಶ್ವಮಟ್ಟದ ಕ್ರೀಡಾ ಶಾಲೆಯನ್ನು 18 ಎಕರೆ ಪ್ರದೇಶದಲ್ಲಿ  ತೆರೆಯುವ ಮೂಲಕ ಕ್ರೀಡಾಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಕಾರಣವಾಗಿದ್ದಾರೆ.

Gopichand
author img

By

Published : Aug 14, 2019, 9:11 AM IST

ಹೈದರಾಬಾದ್​: ಮಾಜಿ ಶೆಟ್ಲರ್​ ಹಾಗೂ ಭಾರತದ ಯಶಸ್ವಿ ಬ್ಯಾಡ್ಮಿಂಟನ್​ ಕೋಚ್​ ಪುಲ್ಲೇಲಾ ಗೋಪಿಚಂದ್ ಗಾಡಿಯಂ ಸ್ಪೋರ್ಟೋಪಿಯಾ ಎಂಬ​ ಭಾರತದ ಮೊದಲ ವಿಶ್ವಮಟ್ಟದ ಕ್ರೀಡಾ ಶಾಲೆಯನ್ನು 18 ಎಕರೆ ಪ್ರದೇಶದಲ್ಲಿ ತೆರೆಯುವ ಮೂಲಕ ಕ್ರೀಡಾಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಕಾರಣವಾಗಿದ್ದಾರೆ.

ಕ್ರೀಡೆ ಮಕ್ಕಳಲ್ಲಿ ಶಿಸ್ತು ಕಲಿಸುವುದರ ಜೊತೆಗೆ ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಗೋಪಿಚಂದ್​ರ ಈ ಕ್ರೀಡಾ ಅಕಾಡೆಮಿ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಗೂ ಮಹತ್ವ ನೀಡಿ ವಿಶ್ವಮಟ್ಟದ ಕ್ರೀಡಾಪಟುಗಳನ್ನು ತಯಾರು ಮಾಡುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಈ ಪ್ರಯತ್ನಕ್ಕೆ ಬರೋಬ್ಬರಿ 180 ಕೋಟಿ ಹಣ ಹೂಡಿಕೆ ಮಾಡಲಾಗಿದೆ. 45 ಕೋಟಿ ರೂಪಾಯಿ ಕಟ್ಟಡ ನಿರ್ಮಾಣಕ್ಕೆ ಖರ್ಚಾಗಿದೆ. ಈ ಅಕಾಡೆಮಿಯಲ್ಲಿ 25ಕ್ಕೂ ಹೆಚ್ಚು ಕ್ರೀಡೆಗಳಿಗೆ ಕ್ರೀಡಾ ಸಲಕರಣೆಗಳನ್ನು ಸೌಲಭ್ಯ ಒದಗಿಸಲಾಗಿದೆ. ಒಲಿಂಪಿಕ್​ ಕ್ರೀಡಾಕೂಟದ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳಿಗಾಗಿ 18 ಎಕರೆ ವಿಸ್ತೀರ್ಣದಲ್ಲಿ ಈ ಆಕಾಡೆಮಿ ನಿರ್ಮಿಸಲಾಗಿದೆ.

ಪುಲ್ಲೇಲಾ ಗೋಪಿಚಂದ್​

ಈ ಕ್ರೀಡಾ ಶಾಲೆಯಲ್ಲಿ ಬ್ಯಾಡ್ಮಿಂಟನ್​, ಟೇಬಲ್​ ಟೆನ್ನಿಸ್​, ಟೆನ್ನಿಸ್​, ಫುಟ್​ಬಾಲ್​, ಅಥ್ಲೆಟಿಕ್ಸ್, ಸ್ವಿಮ್ಮಿಂಗ್​, ವಾಲಿಬಾಲ್, ಬ್ಯಾಸ್ಕೆಟ್ ಬಾಲ್, ಸ್ಕ್ವಾಸ್​, ಥ್ರೋ ಬಾಲ್​, ಕ್ರಿಕೆಟ್​, ಜಿಮ್ನಾಸ್ಟಿಕ್​, ಬಾಕ್ಸಿಂಗ್​,ಬಿಲಿಯರ್ಡ್ಸ್​-ಸ್ನೂಕರ್​, ಹಾಕಿ, ಈಕ್ವೆಸ್ಟ್ರಿಯನ್​, ಸ್ಕೇಟಿಂಗ್​, ಜೂಡೋ, ಟಿಕ್ವಾಂಡೋ, ಕರಾಟೆ, ಶೂಟಿಂಗ್​, ಆರ್ಚರಿ, ಕುಸ್ತಿ, ಫೆಂಚಿಂಗ್​, ಕಬಡ್ಡಿ ಹಾಗೂ ಯೋಗದ ಬಗ್ಗೆ ತರಬೇತಿ ನೀಡಲಾಗುತ್ತದೆ.

ವಿವಿಧ ಕ್ರೀಡೆಗಳಲ್ಲಿ ಆಸಕ್ತಿಯುಳ್ಳ 2000ಕ್ಕೂ ಹೆಚ್ಚು ಕ್ರೀಡಾಪಟುಗಳಿಗೆ ತರಬೇತಿ ನೀಡುವ ಗುರಿ ಹೊಂದಿದೆ. ಈ ಮೂಲಕ ಭಾರತದ ಕ್ರೀಡಾಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯಾಗಲಿದೆ. ಈ ಪ್ರಾಜೆಕ್ಟ್​ನಲ್ಲಿ ಒಲಿಂಪಿಕ್​ನಲ್ಲಿ ಪಾಲ್ಗೊಂಡಿರುವ ಕ್ರೀಡಾಪಟುಗಳು ಹಾಗೂ ಶ್ರೇಷ್ಠ ಕೋಚ್​ಗಳು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.