ಲಂಡನ್: ಆಲ್ ಇಂಗ್ಲೆಂಡ್ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ಭಾಗಿಯಾಗಲು ತೆರಳಿದ ಮೂವರು ಆಟಗಾರರು ಮತ್ತು ಓರ್ವ ಸಿಬ್ಬಂದಿ ಸೇರಿ ನಾಲ್ವರಿಗೆ ಕೊರೊನಾ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಆಟ ತಡವಾಗಿ ಪ್ರಾರಂಭವಾಗಲಿದೆ ಎಂದು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡಬ್ಲ್ಯೂಎಫ್) ತಿಳಿಸಿದೆ.
"ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡಬ್ಲ್ಯುಎಫ್) ಮತ್ತು ಬ್ಯಾಡ್ಮಿಂಟನ್ ಇಂಗ್ಲೆಂಡ್ ಯೊನೆಕ್ಸ್ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ 2021 ರಲ್ಲಿ ಭಾಗವಹಿಸುವ ತಂಡಗಳಿಗಾಗಿ ನಡೆಸಿದ ಕೊರೊನಾ ಪರೀಕ್ಷೆಯಲ್ಲಿ ಕೆಲವರಿಗೆ ಕೊರೊನಾ ಸೋಂಕು ತಗುಲಿದೆ" ಎಂದು ಬಿಡಬ್ಲ್ಯೂಎಫ್ ಹೇಳಿದೆ.
"ಕಡಿಮೆ ಸಂಖ್ಯೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆಟವು 20 ಮಾರ್ಚ್ 2021 ರ ಬುಧವಾರ ಮಧ್ಯಾಹ್ನ 2 ಗಂಟೆಯಿಂದ ಆರಂಭವಾಗುತ್ತದೆ" ಎಂದು ಹೇಳಿದೆ.