ETV Bharat / sports

exclusive: ದೇಶಕ್ಕೆ ಮತ್ತಷ್ಟು ಪ್ರಶಸ್ತಿಗಳನ್ನು ಗೆಲ್ಲಲು ಪ್ರಯತ್ನಿಸುವೆ: ಲಕ್ಷ್ಯ ಸೇನ್ ವಿಶ್ವಾಸದ ಮಾತು!​ - ಪ್ರಕಾಶ್ ಪಡುಕೋಣೆ

ಸ್ಪೇನ್​ನ ಬಾರ್ಸಿಲೋನಾದಲ್ಲಿರುವ ಲಕ್ಷ್ಯ ಸೇನ್​ ಈಟಿವಿ ಭಾರತದ ಜೊತೆ ಮಾತನಾಡಿ, ಭಾರತಕ್ಕಾಗಿ ಪದಕ ಗೆದ್ದಿರುವುದು ತುಂಬಾ ಖುಷಿ ನೀಡಿದೆ. ಭವಿಷ್ಯದಲ್ಲೂ ದೇಶಕ್ಕಾಗಿ ಮತ್ತಷ್ಟು ಪದಕಗಳನ್ನು ಗೆದ್ದು ತರುವುದಕ್ಕೆ ನಾನು ಪ್ರಯತ್ನಿಸುತ್ತೇನೆ. ನನ್ನ ಸಾಧನೆ ಬೆಂಬಲಿಸಿದ ಇಡೀ ದೇಶದ ಕ್ರೀಡಾ ಪ್ರಿಯರು, ಅದರಲ್ಲೂ ಉತ್ತರಾಖಂಡದ ಮತ್ತು ಅಲ್ಮೋರಾದ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ತಮ್ಮ ಸಂಭ್ರಮ ಹಂಚಿಕೊಂಡಿದ್ದಾರೆ.

Lakshya Sen bags bronze in world badminto
ಲಕ್ಷ್ಯ ಸೇನ್ ಮತ್ತು ತಂದೆ ಡಿಕೆ ಸೇನ್
author img

By

Published : Dec 21, 2021, 4:14 PM IST

ಡೆಹರಾಡೂನ್: ಭಾರತದ ಯುವ ಶಟ್ಲರ್​ ಲಕ್ಷ್ಯ ಸೇನ್ ಸ್ಪೇನ್​ನ ವೆಲ್ವಾದಲ್ಲಿ ನಡೆದ ಬ್ಯಾಡ್ಮಿಂಟನ್​ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಕಂಚಿನ ಪದಕ ಪಡೆಯುವ ಮೂಲಕ ಈ ಮಹತ್ತರ ಟೂರ್ನಿಯಲ್ಲಿ ಪದಕ ಗೆದ್ದ ಅತ್ಯಂತ ಕಿರಿಯ ಭಾರತೀಯ ಎನಿಸಿಕೊಂಡಿದ್ದಾರೆ.

20 ವರ್ಷದ ಯುವ ಶಟ್ಲರ್​ ಸೆಮಿಫೈನಲ್​ನಲ್ಲಿ ಭಾರತದ ಅನುಭವಿ ಕಿಡಂಬಿ ಶ್ರೀಕಾಂತ್​ ವಿರುದ್ಧ 21-17, 14-21, 21017ರಲ್ಲಿ ಸೋಲು ಕಂಡಿದ್ದರು. ಆದರೂ ವಿಶ್ವಚಾಂಪಿಯನ್​ಶಿಪ್​ನಲ್ಲಿ ಪದಕ ಗೆದ್ದ ಭಾರತದ 3ನೇ ಶಟ್ಲರ್​ ಎನಿಸಿಕೊಂಡಿದ್ದರು.

ಈ ಟಿವಿ ಭಾರತದ ಜೊತೆ ಮಾತನಾಡಿದ ವಿಶ್ವ ಚಾಂಪಿಯನ್​ ಶಿಪ್​ನಲ್ಲಿ ಕಂಚಿನ ಪದಕ ಗೆದ್ದ ಲಕ್ಷ್ಯ ಸೇನ್

ಸ್ಪೇನ್​ನ ಬಾರ್ಸಿಲೋನಾದಲ್ಲಿರುವ ಲಕ್ಷ್ಯ ಸೇನ್​ ಈಟಿವಿ ಭಾರತದ ಜೊತೆ ಮಾತನಾಡಿ, ಭಾರತಕ್ಕಾಗಿ ಪದಕ ಗೆದ್ದಿರುವುದು ತುಂಬಾ ಖುಷಿ ನೀಡಿದೆ. ಭವಿಷ್ಯದಲ್ಲೂ ದೇಶಕ್ಕಾಗಿ ಮತ್ತಷ್ಟು ಪದಕಗಳನ್ನು ಗೆದ್ದು ತರುವುದಕ್ಕೆ ನಾನು ಪ್ರಯತ್ನಿಸುತ್ತೇನೆ. ನನ್ನ ಸಾಧನೆ ಬೆಂಬಲಿಸಿದ ಇಡೀ ದೇಶದ ಕ್ರೀಡಾ ಪ್ರಿಯರು, ಅದರಲ್ಲೂ ಉತ್ತರಾಖಂಡದ ಮತ್ತು ಅಲ್ಮೋರಾದ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ತಮ್ಮ ಸಂಭ್ರಮ ಹಂಚಿಕೊಂಡಿದ್ದಾರೆ.

Lakshya Sen bags bronze in world badminton, shares joy from Spain
ವಿಶ್ವ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಗೆದ್ದ ಶ್ರೀಕಾಂತ್, ಕಂಚು ಗೆದ್ದ ಲಕ್ಷ್ಯ ಸೇನ್​ ಜೊತೆ ಕೋಚ್​ ಡಿಕೆ ಸೇನ್

ಲಕ್ಷ್ಯ ಸೇನ್​ ಕೋಚ್​ ಆಗಿರುವ ಅವರ ತಂದೆ ಡಿಕೆ ಸೇನ್ ಮಾತನಾಡಿ, ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಭಾರತದ ಇಬ್ಬರು ಆಟಗಾರರು ಪದಕ ಗೆದ್ದಿರುವುದು ತುಂಬಾ ಖುಷಿಯಾಗುತ್ತಿದೆ. ತಮ್ಮ ಮಗ ಮತ್ತಷ್ಟು ಅಂತಾರಾಷ್ಟ್ರೀಯ ಟೂರ್ನಮೆಂಟ್​ಗಳಲ್ಲೂ ಇದೇ ರೀತಿಯ ಪ್ರದರ್ಶನ ನೀಡಿ, ದೇಶಕ್ಕೆ ಮತ್ತಷ್ಟ ಪದಕಗಳನ್ನು ಗೆಲ್ಲಬೇಕೆಂದು ಬಯಸುವುದಾಗಿ ತಿಳಿಸಿದ್ದಾರೆ.

ಲಕ್ಷ್ಯ ಸೇನ್​ ಬ್ಯಾಡ್ಮಿಂಟನ್​ ಆಯ್ಕೆ ಮಾಡಿಕೊಂಡಿದ್ದು ಹೇಗೆ?

ಲಕ್ಷ್ಯ ಸೇನ್ ಉತ್ತರಾಖಂಡದ ಅಲ್ಮೋರದದಲ್ಲಿ ಜನಿಸಿದರು. ಅವರಿಗೆ ಬ್ಯಾಡ್ಮಿಂಟನ್​ ತಂದೆ ಹಾಗೂ ಕೋಚ್​ ಆಗಿರುವ ಡಿಕೆ ಸೇನ್​ರಿಂದ ಅನುವಂಶೀಯವಾಗಿ ಬಂದಿದೆ. ಅಲ್ಲದೇ 13ನೇ ವಯಸ್ಸಿನ ವಿಭಾಗದಲ್ಲಿ ದೇಶದ ಟಾಪ್​ ಶ್ರೇಯಾಂಕದ ಶಟ್ಲರ್​ ಆಗಿದ್ದ ಸಹೋದರ ಚಿರಾಗ್​ ಸೇನ್​ ಅವರನ್ನು ನೋಡಿ ತಮ್ಮ ಆಟವನ್ನು ದಿನದಿಂದ ದಿನಕ್ಕೆ ಅಭಿವೃದ್ಧಿಸಿಕೊಂಡಿದ್ದರು.

Lakshya Sen bags bronze in world badminton
ಭಾರತ ಕೋಚ್​ಗಳ ಜೊತೆಗ ಪದಕ ವಿಜೇತರು

ಪ್ರಕಾಶ್ ಪಡುಕೋಣೆ ಗರಡಿಗೆ ಪದಾರ್ಪಣೆ

2010 ಲಕ್ಷ್ಯ ಸೇನ್​ ಬ್ಯಾಡ್ಮಿಂಟನ್​ ವೃತ್ತಿ ಜೀವನದ ಟರ್ನಿಂಗ್ ಪಾಯಿಂಟ್​ ಆಯಿತು. ಏಕೆಂದರೆ ಬೆಂಗಳೂರಿನಲ್ಲಿ ನಡೆದಿದ್ದ ಜೂನಿಯರ್​ ವಿಭಾಗದ ಟೂರ್ನಮೆಂಟ್​ನಲ್ಲಿ ಭಾಗವಹಿಸಿದ್ದ ಅವರನ್ನು ಬ್ಯಾಡ್ಮಿಂಟನ್​ ದಂತಕತೆ ಕನ್ನಡಿಗ ಪ್ರಕಾಶ್ ಪಡುಕೋಣೆ ಮತ್ತು ಭಾರತದ ಮಾಜಿ ಕೋಚ್​ ವಿಮಲ್ ಕುಮಾರ್ ಅವರ ಕಣ್ಣಿಗೆ ಬಿದ್ದರು. ಇವರಿಬ್ಬರು ಲಕ್ಷ್ಯ ಸೇನ್​ ಪ್ರದರ್ಶನದಿಂದ ಆಕರ್ಷಿತರಾಗಿದ್ದರು. ಈಗಾಗಲೇ ಅವರ ಸಹೋದರ ಚಿರಾಗ್​ ಪ್ರಕಾಶ್​ ಪಡುಕೋಣೆ ಅಕಾಡೆಮಿಯಲ್ಲಿ ಸೇರಿದ್ದರು.

ಇದೇ ಕಾರಣದಿಂದ ಲಕ್ಷ್ಯ ಸೇನ್ ಕೂಡ ಪಡುಕೋಣೆ ಅಕಾಡೆಮಿಗೆ ಸೇರುವುದಕ್ಕೆ ಬಯಸಿದ್ದರು. ಪಡುಕೋಣೆ ಲಕ್ಷ್ಯ ಹೆಚ್ಚು ಪ್ರಭಾವಿತರಾಗಿದ್ದರೂ ಇನ್ನೂ ಚಿಕ್ಕವಯಸ್ಸಿನವರಾಗಿದ್ದರಿಂದ ಆತನನ್ನು ಸೇರಿಸಿಕೊಳ್ಳುವ ಮೊದಲಿಗೆ ಹಿಂದೇಟು ಹಾಕಿದ್ದರು. ಆದರೆ, ಆತನ ಆಟದಲ್ಲಿದ್ದ ಬದ್ಧತೆಯನ್ನು ಕಂಡಿದ್ದ ವಿಮಲ್ ಕುಮಾರ್​ ಲಕ್ಷ್ಯರ ವಯಸ್ಸನ್ನು ಲೆಕ್ಕಿಸದೇ ಅಕಾಡೆಮಿಯಲ್ಲಿ ಅವಕಾಶ ಕೊಡಿಸಿದ್ದರು.

ಜೂನಿಯರ್ ವಿಭಾಗದಲ್ಲಿ ಪಡೆದ ಪ್ರಶಸ್ತಿ

ಬೆಂಗಳೂರಿನ ಪ್ರಕಾಶ್ ಪಡುಕೋಣೆ ಅಕಾಡೆಮಿಯಲ್ಲಿ ತರಬೇತಿ ಆರಂಭಿಸಿದ ಲಕ್ಷ್ಯ 15ನೇ ವಯಸ್ಸಿಗೆ ರಾಷ್ಟ್ರಿಯ ಜೂನಿಯುರ್-19 ಪ್ರಶಸ್ತಿ ಗೆದ್ದರು. 2015ರಲ್ಲಿ ಅಂಡರ್ 17 ಪ್ರಶಸ್ತಿ, 2016ರಲ್ಲಿ ಅಂಡರ್​ 19 ವಿಭಾಗದಲ್ಲಿ ಚಿನ್ನದ ಪದಕಗಳನ್ನು ಗೆದ್ದರು. 2017ರಲ್ಲಿ ತಮ್ಮ 17ನೇ ವಯಸ್ಸಿನಲ್ಲೇ ಸೀನಿಯರ್ ವಿಭಾಗದಲ್ಲಿ ಸ್ಪರ್ಧಿಸಿ ರಾಷ್ಟ್ರೀಯ ಚಾಂಪಿಯನ್​ ಎನಿಸಿಕೊಂಡರು. 2018-19ರಲ್ಲಿ ಫೈನಲ್​ ಪ್ರವೇಶಿಸಿದರೂ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು.

ನಂತರ 2018ರಲ್ಲಿ ಜೂನಿಯರ್​ ವಿಶ್ವ ಚಾಂಪಿಯನ್​ಶಿಪ್​, 2018ರ ಜೂನಿಯರ್ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಅದೇ ವರ್ಷ ಬೆಂಗಳೂರಿನಲ್ಲಿ ನಡೆದ ಇನ್‌ಸ್ಪೈರ್ಡ್ ಇಂಡಿಯನ್ ಫೆಡರೇಶನ್ ಸಮಾರಂಭದಲ್ಲಿ ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ ಅವರು ವರ್ಷದ ಯೂತ್ ಐಕಾನ್ ಎಂಬ ಗೌರವಕ್ಕೆ ಪಾತ್ರರಾಗಿದ್ದರು. ಇದೀಗ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಪದಕ ಗೆದ್ದಿದ್ದು, ಅವರಿಂದ ಭವಿಷ್ಯದಲ್ಲಿ ಮತ್ತಷ್ಟು ಅತ್ಯುತ್ತಮ ಪ್ರದರ್ಶನ, ಪ್ರಶಸ್ತಿಗಳನ್ನು ನಿರೀಕ್ಷೆ ಮಾಡಬಹುದಾಗಿದೆ.

ಇದನ್ನೂ ಓದಿ:ಇತಿಹಾಸ ಬರೆದ ಕಿಡಂಬಿ ಶ್ರೀಕಾಂತ್ : ವಿಶ್ವಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಪುರುಷ ಶಟ್ಲರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.